

ಕಾಸರಗೋಡು: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಸೀತಾಂಗೋಳಿ ಪೇಟೆಯಲ್ಲಿ ತಂಡವೊಂದು ಯುವಕನನ್ನು ಇರಿದು ಗಾಯಗೊಳಿಸಿದೆ. ಬದಿಯಡ್ಕ ನಿವಾಸಿ ಅನಿಲ್ಕುಮಾರ್ ಯಾನೆ ಕುಟ್ಟನ್ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಎರಡು ವಾಹನಗಳನ್ನೂ ವಶಪಡಿಸಿಕೊಂಡಿದ್ದಾರೆ. ಇರಿದ ಚಾಕು ಅನಿಲ್ ಕುಮಾರ್ ಕತ್ತಿನಲ್ಲಿ ಸಿಲುಕಿಕೊಂಡಿದ್ದು, ಆಸ್ಪತ್ರೆಗೆ ತೆರಳಿ ಶಸಚಿಕಿತ್ಸೆ ಮೂಲಕ ಚಾಕು ತೆರವುಗೊಳಿಸಲಾಗಿದೆ. ಕತ್ತಿನ ಭಾಗಕ್ಕೆ ಗಂಭೀರ ಗಾಯಗಳುಂಟಾಗಿದ್ದು, ಭಾರಿ ಪ್ರಮಾಣದಲ್ಲಿ ರಕ್ತಸ್ರಾವವುಂಟಾಗಿದೆ. ಭಾನುವಾರ ತಡರಾತ್ರಿ ಟನೆ ನಡೆದಿದೆ. ಬದಿಯಡ್ಕದಲ್ಲಿ ಮೀನಿನ ವ್ಯಾಪಾರಿಯಾಗಿರುವ ಅನಿಲ್ಕುಮಾರ್ ಅವರನ್ನು ಮೊಬೈಲ್ ಕರೆ ಮಾಡಿ ಸೀತಾಂಗೋಳಿಗೆ ಕರೆಸಿಕೊಂಡಿರುವ ತಂಡ, ಅನಿಲ್ಕುಮಾರ್ ಹಾಗೂ ಅವರ ಜತೆ ಆಗಮಿಸಿದ್ದವರ ಜತೆ ವಾಗ್ವಾದಕ್ಕೆ ಮುಂದಾಗಿದೆ. ಬಳಿಕ ಏಕಾಏಕಿ ಅನಿಲ್ಕುಮಾರ್ನನ್ನು ಅಟ್ಟಾಡಿಸಿ ಚಾಕುವಿನಿಂದ ಇರಿದಿತ್ತು.