

ಕುಂಬಳೆ: ವಾಲಿದ್ದ ಮರಕ್ಕೆ ಕಬ್ಬಿಣದ ತಂತಿ ಕಟ್ಟಿ ಸರಿಪಡಿಸುವುದಾಗಿ ಹೇಳಿ ತಂತಿ ಬೆಲೆ ದುಪ್ಪಟ್ಟು ವಸೂಲಿ ಮಾಡಿ ವಂಚಿಸಿದ ಆರೋಪಿಗೆ ಕುಂಬಳೆ ಠಾಣಾ ಪೊಲೀಸರು ಹೆಚ್ಚುವರಿ ವಿಧಿಸಿದ ಶುಲ್ಕವನ್ನು ಮರುಪಾವತಿಸಲು ಸೂಚಿಸಿದ್ದಲ್ಲದೆ ಮುಂದೆ ವಂಚನೆ ಕೃತ್ಯವೆಸಗಬಾರದೆಂದು ಎಚ್ಚರಿಸಿದ್ದಾರೆ. ಸಾಬಿರ್ ಎಂಬಾತನ ತಂಡ ವ್ಯಾಪಕವಾಗಿ ಈ ವಂಚನೆಯಲ್ಲಿ ತೊಡಗಿತ್ತು. ದೂರು ನೀಡಲು ಸಾರ್ವಜನಿಕರು ಹಿಂಜರಿಯಬಾರದು ಎಂದು ಪೋಲೀಸರು ಸೂಚಿಸಿದ್ದಾರೆ.