ಮುಂಜಾನೆ 4ಗಂಟೆಗೆ ಮನೆಯೊಳಗೆ ನುಗ್ಗಿದ...; ಮುಂದೆ ಆಗಿದ್ದೆಲ್ಲ ದುರಂತ

arrest
Published on

ನವದೆಹಲಿ: ಇತ್ತೀಚೆಗಷ್ಟೇ ದೆಹಲಿಯ ನಜಾಫ್​ಗಢ್​ದಲ್ಲಿ 90 ವರ್ಷದ ವೃದ್ಧೆಯ ಮೇಲೆ ಕಾಮುಕನೋರ್ವ ಅತ್ಯಾಚಾರ ಮಾಡಿ, ನಂತರ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣ ನಡೆದಿತ್ತು.

ಅದರ ಬೆನ್ನಲ್ಲೇ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಅಂಥದ್ದೇ ದುರ್ಘಟನೆ ನಡೆದಿದೆ. 25 ವರ್ಷದ ಯುವಕನೋರ್ವ 70 ವರ್ಷದ ವೃದ್ಧೆಯನ್ನು ರೇಪ್​ ಮಾಡಿ, ನಂತರ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.

ಮುಂಜಾನೆ 4ಗಂಟೆಗೆ ವೃದ್ಧೆಯ ಮನೆಗೆ ನುಗ್ಗಿದ ಯುವಕ, ಅವರನ್ನು ಅತ್ಯಾಚಾರ ಮಾಡಿದ್ದಾನೆ. ಈ ಮಹಿಳೆಯ ಮನೆಯ ಬಳಿಯೇ ಆತ ಕೆಲಸ ಮಾಡುತ್ತಿದ್ದ ಎಂದು ಹಲ್ದಿ ಠಾಣೆಯ ಎಸ್​ಎಚ್​ಒ ಸತ್ಯೇಂದ್ರ ರೈ ತಿಳಿಸಿದ್ದಾರೆ.

ವೃದ್ಧೆಯ ಸೋದರಳಿಯ ನೀಡಿದ ದೂರಿನ ಅನ್ವಯ ಯುವಕನ ವಿರುದ್ಧ ಪ್ರಕರಣ ದಾಖಲು ಮಾಡಿ, ಆತನನ್ನು ಬಂಧಿಸಲಾಗಿದೆ ಎಂದೂ ಹೇಳಿದ್ದಾರೆ. ಇದನ್ನೂ ಓದಿ: ‘ಬಹುತೇಕ ಕಿಂಗ್​​ಪಿನ್​ಗಳು ಬಿಜೆಪಿಗರು, ಹಾಗಾಗಿ ತನಿಖೆಯನ್ನು ಎನ್​ಸಿಬಿಯೇ ನಡೆಸಲಿ’

ಕೆಲವೇ ದಿನಗಳ ಹಿಂದೆ ಉತ್ತರ ಪ್ರದೇಶದ ಲಕ್ಷ್ಮಿಪುರದಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ಆಕೆಯನ್ನು ಹತ್ಯೆ ಮಾಡಲಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net