

ಬೆಂಗಳೂರು: ಗುರುತು ಪರಿಚಯವಿಲ್ಲದ ಹುಡುಗಿಯ ಮಾತನ್ನು ನಂಬಿ ಬೆತ್ತಲಾದ ಯುವಕನೊಬ್ಬ ಇದೀಗ ಗೋಳೋ ಎನ್ನುತ್ತ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈ ಯುವಕನ ಹೆಸರು ಸುರೇಶ್. ವಯಸ್ಸು 26. ಈತನ ರೂಮ್ಮೇಟ್ ಕರೊನಾ ವೈರಸ್ ಹಿನ್ನೆಲೆಯಲ್ಲಿ ಊರಿಗೆ ಹೋಗಿರುವ ಕಾರಣ, ಯುವಕ ರೂಮಿನಲ್ಲಿ ಒಬ್ಬನೇ ಇದ್ದ. ಅದೇ ವೇಳೆ ಈತನ ವಾಟ್ಸ್ಆ್ಯಪ್ ಮೂಲಕ ಯುವತಿಯೊಬ್ಬಳು ಪರಿಚಯ ಮಾಡಿಕೊಂಡಿದ್ದಾಳೆ.
ಕುಳಿತಲ್ಲಿಯೇ ಸುಂದರಿಯ ಮುಖನೋಡಿ ಯುವಕ ಆಕೆಗೆ ಫಿದಾ ಆಗಿದ್ದಾನೆ. ಆಗಾಗ್ಗೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದ ಯುವತಿ ತನ್ನನ್ನು ನಿಶಾ ಎಂದು ಪರಿಚಯ ಮಾಡಿಕೊಂಡಿದ್ದಾಳೆ. ಕಾಲ್ ಸೆಂಟರ್ ಒಂದರಲ್ಲಿ ತಾನು ಕೆಲಸ ಮಾಡುವುದಾಗಿ ಹೇಳಿದ್ದಾಳೆ.
ಯುವಕ ಅದನ್ನು ನಂಬಿದ್ದಾನೆ. ನಿಮ್ಮ ಬೋಲ್ಡ್ ನೆಸ್ ನನಗೆ ಇಷ್ಟ, ಹಾಟ್ ಟಾಪಿಕ್ ಬಗ್ಗೆ ಮಾತಾಡೋಣ ಎಂದು ಮಾತು ಶುರುಮಾಡಿರುವ ನಿಶಾ, ಅದೊಂದು ದಿನ, ನಾನು ವಿಡಿಯೋ ಕಾಲ್ ಮಾಡುತ್ತೇನೆ. ನಿನ್ನನ್ನು ಬೆತ್ತಲೆಯಾಗಿ ನೋಡಬೇಕು ಎಂದು ಎನಿಸುತ್ತಿದೆ ಎಂದಿದ್ದಾಳೆ. ಮೊದಮೊದಲು ಒಪ್ಪದ ಸುರೇಶ್ ಆಮೇಲೆ ಒಪ್ಪಿದ್ದಾನೆ.
ಅವಳು ವಿಡಿಯೋ ಕಾಲ್ ಮಾಡಿದ್ದಾಳೆ, ಇವನು ಬೆತ್ತಲಾಗಿದ್ದಾನೆ. ಆಮೇಲೆ ಯುವತಿಯ ಪೋನ್ ಇದ್ದಕ್ಕಿದ್ದಂತೆ ಸ್ವಿಚ್ ಆಫ್ ಆಗಿದೆ ಅಷ್ಟೇ.
ಇದಾದ ಕೆಲವು ದಿನಗಳ ನಂತರ ಅಪರಿಚಿತ ನಂಬರ್ನಿಂದ ವ್ಯಕ್ತಿಯೊಬ್ಬ ಕರೆ ಮಾಡಿ ನಿಮ್ಮ ಬೆತ್ತಲೆ ವಿಡಿಯೋ ನಮ್ಮ ಬಳಿ ಇದೆ. 50 ಸಾವಿರ ಕೊಡಿ ಎಂದು ಇಲ್ಲವಾದರೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತೇವೆ ಎಂದಿದ್ದಾರೆ. ಗಾಬರಿಗೊಂಡ ಯುವಕ ಕೊನೆಗೆ 22 ಸಾವಿರಕ್ಕೆ ಒಪ್ಪಿಸಿ ಅದನ್ನು ಆನ್ಲೈನ್ ಮೂಲಕ ಹಾಕಿದ್ದಾನೆ.
ಆದರೆ ಅಲ್ಲಿಗೆ ಮುಗಿದಿಲ್ಲ. ಪುನಃ ಕರೆ ಬಂದಿದ್ದು, ಮತ್ತೆ ಹಣದ ಬೇಡಿಕೆ ಒಡ್ಡಿದ್ದಾರೆ. ಇದ್ಯಾಕೋ ಸರಿಹೋಗುತ್ತಿಲ್ಲ ಎಂದಿರುವ ಯುವಕ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ, ತನ್ನ ಗೋಳು ಹೇಳಿಕೊಂಡಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
f