

ಬೆಳ್ತಂಗಡಿ: ಭಾರತೀಯ ಸೇನೆಗೆ ನೇಮಕಕೊಂಡಿರುವ ನಾಲ್ಕೂರು ಗ್ರಾಮದ ಕೆಂಪುಂರ್ಜ ಯುವಕ ಮನೋಹರ್ ಪೂಜಾರಿ ಅವರನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ&ನಾಲ್ಕೂರು&ತೆಂಕಕಾರಂದೂರು ವತಿಯಿಂದ ಗೌರವಿಸಲಾಯಿತು.
ಬಳಂಜ ಸಂದ ಗೌರವಾಧ್ಯಕ್ಷ ಎಚ್.ಧರ್ಣಪ್ಪ ಪೂಜಾರಿ ಮಾತನಾಡಿ, ಯುವಕರು ನಮ್ಮ ದೇಶದ ಶಕ್ತಿ ಮತ್ತು ಆಸ್ತಿ. ಮನೋಹರ್ ಕಷ್ಟಪಟ್ಟು ಶಿಕ್ಷಣ ಪಡೆದು ಭಾರತೀಯ ಸೇನೆಗೆ ನೇಮಕಗೊಂಡಿರುವುದು ನಮಗೆಲ್ಲ ಅತ್ಯಂತ ಸಂತೋಷ ನೀಡಿದೆ. ಮನೋಹರ್ ನಮ್ಮೂರಿಗೆ ಸ್ಫೂರ್ತಿ ಮತ್ತು ಪ್ರೇರಣೆ ಎಂದರು.
ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್, ನಿಕಟಪೂರ್ವಾಧ್ಯಕ್ಷ ಪ್ರವಿಣ್ ಕುಮಾರ್ ಎಚ್.ಎಸ್, ಕಾರ್ಯದರ್ಶಿ ಜಗದೀಶ್ ಪೂಜಾರಿ, ನಿರ್ದೇಶಕರಾದ ಸಂತೋಷ್ ಕುಮಾರ್ ಕಾಪಿನಡ್ಕ, ದಿನೇಶ್ ಪೂಜಾರಿ ಅಂತರ, ದಿನೇಶ್ ಕೋಟ್ಯಾನ್ ಕುದ್ರೋಟ್ಟು, ರಂಜಿತ್ ಪೂಜಾರಿ ಮಜಲಡ್ಡ, ಜಗದೀಶ್ ಪೂಜಾರಿ ತಾರಿಪಡ್ಪು, ಪ್ರವಿಣ್ ಡಿ.ಕೋಟ್ಯಾನ್, ಪ್ರದಿಪ್ ಕುಮಾರ್ ಮೈಂದಕುಮೇರ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್, ಮಹಿಳಾ ಬಿಲ್ಲವ ವೇದಿಕೆ ಅಧ್ಯೆ ಭಾರತಿ ಸಂತೋಷ್, ಕಾರ್ಯದರ್ಶಿ ಅಶ್ವಿತಾ ಸಂತೋಷ್ ಉಪಸ್ಥಿತರಿದ್ದರು.