ಅಧ್ಯಾತ್ಮದಲ್ಲಿದೆ ಭಾರತದ ಸೌಂದರ್ಯ: ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ

Published on

ಬಂಟ್ವಾಳ: ತ್ಯಾಗ ಮತ್ತು ಸೇವೆ ಭಾರತ ದೇಶದ ಮೌಲ್ಯ ಮತ್ತು ಆದರ್ಶಗಳಾಗಿವೆ. ಭಾರತದ ಸೌಂದರ್ಯ ಅಧ್ಯಾತ್ಮದಲ್ಲಿ ಅಡಗಿದೆ. ಅಧ್ಯಾತ್ಮ ಇದ್ದಲ್ಲಿ ಸಾಮರಸ್ಯದ ಬದುಕು ಇದೆ ಎಂದು ಒಡಿಯೂರು ೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಪುದು ಗ್ರಾಮದ ಸುಜೀರು ದತ್ತನಗರ ಶ್ರೀ ವೀರ ಹನುಮಾನ್​ ಮಂದಿರದ 23ನೇ ವಾರ್ಷಿಕೋತ್ಸವ ಪ್ರಯುಕ್ತ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ದ.ಕ. ಮಾಜಿ ಸಂಸದ ಮುಖ್ಯ ಅತಿಥಿಯಾಗಿದ್ದರು. ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿ ಪ್ರಸಾದ್​ ಶೆಟ್ಟಿ ಕೊಡ್ಮಾಣ್​, ಗುತ್ತಿಗೆದಾರ ಮನೋಹರ್​ ಡಿ.ದೇವಾಡಿಗ, ವಕೀಲೆ ಸುಚಿತ್ರಾ ಅವಿನಾಶ್​, ಪುದು ಗ್ರಾ.ಪಂ. ಸದಸ್ಯ ವಿಶು ಕುಮಾರ್​, ಆಶಿತ್​ ಕುಮಾರ್​ ಶೆಟ್ಟಿ, ಐತಪ್ಪ ಆಳ್ವ ಸುಜೀರುಗುತ್ತು ಭಾಗವಹಿಸಿದ್ದರು.

ಮಂದಿರದ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಉತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ದತ್ತನಗರ, ಮಹಿಳಾ ಮಂಡಳಿ ಅಧ್ಯೆ ಮೀನಾ ಗಣೇಶ್​ ಸುಜೀರು ಉಪಸ್ಥಿತರಿದ್ದರು. ವಿಧಾನಪರಿಷತ್​ ಸದಸ್ಯ ಕಿಶೋರ್​ ಕುಮಾರ್​ ಪುತ್ತೂರು ಭೇಟಿ ನೀಡಿದರು. ನಾಗೇಶ್​ ಅಮೀನ್​ ಸ್ವಾಗತಿಸಿದರು. ಮಂದಿರದ ಅಧ್ಯಕ್ಷ ಸುರೇಂದ್ರ ಕಂಬಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ದಾಮೋದರ ಸಪಲ್ಯ ವಂದಿಸಿದರು. ರಮ್ಯಾ ರಂಜನ್​ ಸುವರ್ಣ ಸುಜೀರು, ಮೀನಾ ಉದ್ಯಾವರ ಹಾಗೂ ಗಣೇಶ್​ ದತ್ತನಗರ ಕಾರ್ಯಕ್ರಮ ನಿರೂಪಿಸಿದರು. ಬೆಳಗ್ಗೆ ಪೊಳಲಿ ಗಿರಿಪ್ರಕಾಶ್​ ತಂತ್ರಿ ನೇತೃತ್ವದಲ್ಲಿ ಗಣಹೋಮ, ಪಂಚಾಮೃತ ಅಭಿಷೇಕ, ಸಾಮೂಹಿಕ ಸತ್ಯನಾರಾಯಣ ಪೂಜೆ ಮಹಾಪೂಜೆ ನಡೆಯಿತು. ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net