

ಸಂದೀಪ್ ಸಾಲ್ಯಾನ್ ಬಂಟ್ವಾಳ
ತಾಲೂಕಿನ ಪುದು ಗ್ರಾಮದ ಕುಮ್ಡೇಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಲವು ವರ್ಷಗಳ ಬೇಡಿಕೆಯಾಗಿದ್ದ ಸುಸಜ್ಜಿತ ಶೌಚಗೃಹವನ್ನು ಯೇನೆಪೋಯ ಡೀಮ್ಡ್ ಯುನಿವರ್ಸಿಟಿಯ ಎನ್ಎಸ್ಎಸ್ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ನಿರ್ಮಿಸಿಕೊಟ್ಟು ಮಾದರಿಯಾಗಿದ್ದಾರೆ. ಮಳೆಗಾಲದಲ್ಲಿ ಗುಡ್ಡದ ಮಣ್ಣು ಬಿದ್ದು ಕುಸಿದಿದ್ದ ಆವರಣ ಗೋಡೆಯನ್ನು ಪುನ@ನಿರ್ಮಿಸಿಕೊಟ್ಟು ಔದಾರ್ಯ ಮೆರೆದಿದ್ದಾರೆ. ಕುಮ್ಡೇಲು ಸ.ಹಿ.ಪ್ರಾ. ಶಾಲೆಯಲ್ಲಿದ್ದ ಶೌಚಗೃಹ ಶಿಥಿಲವಾಗಿ ವಿದ್ಯಾರ್ಥಿಗಳು ಬಳಸಲು ಸಾಧ್ಯವಾಗದಂತಿತ್ತು. ಇದರಿಂದಾಗಿ ಹಲವು ಸಮಯಗಳಿಂದ ಸರಿಯಾದ ಶೌಚಗೃಹ ಇಲ್ಲದೆ ವಿದ್ಯಾರ್ಥಿಗಳು ಪರಿತಪಿಸಿದ್ದರು. ಇದರ ಜತೆಗೆ ಶಾಲೆಯ ಮುಂಭಾಗದಲ್ಲಿದ್ದ ಆವರಣಗೋಡೆ ಮೇಲೆ ಮಣು ಬಿದ್ದು ಕುಸಿದಿತ್ತು. ಟನೆ ನಡೆದು ಎರಡು ವರ್ಷವಾದರೂ ಪುನ@ನಿರ್ಮಾಣಗೊಂಡಿರಲಿಲ್ಲ. ಉಳಿದ ಗೋಡೆಯೂ ಕುಸಿದು ಇಡೀ ಆವರಣ ಗೋಡೆ ಕುಸಿದು ಬೀಳುವ ಆತಂಕ ನಿರ್ಮಾಣಗೊಂಡಿತ್ತು. ಎನ್ಎಸ್ಎಸ್ ವಿದ್ಯಾರ್ಥಿಗಳ ಶ್ರಮದಾನ: ಮಂಗಳೂರಿನ ಯೇನಪೋಯ ಡೀಮ್ಡ್ ಯುನಿವರ್ಸಿಟಿಯ ಫಿಸಿಯೋಥೆರಪಿ ವಿಭಾಗದ ಎನ್ಎಸ್ಎಸ್ ಟಕದ 30 ವಿದ್ಯಾರ್ಥಿಗಳು ಜ.13ರಿಂದ ಒಂದು ವಾರ ಕುಮ್ಡೇಲು ಸ.ಹಿ.ಪ್ರಾ. ಶಾಲೆಯಲ್ಲಿ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಶಾಲೆಗೆ ಪ್ರತ್ಯೇಕ 2 ಶೌಚಗೃಹ, ಆವರಣಗೋಡೆಯನ್ನು ಪುನ@ನಿರ್ಮಾಣ ಹಾಗೂ ಶಾಲಾ ಪರಿಸರ ಸ್ವಚ್ಛಗೊಳಿಸುವ ಸಂಕಲ್ಪ ತೊಟ್ಟು ಶ್ರಮ ಕಾರ್ಯ ಆರಂಭಿಸಿದ್ದರು. ಸ್ಥಳಿಯ ಸಾಮಾಜಿಕ ಮುಂದಾಳು ದಿನೇಶ್ ಶೆಟ್ಟಿ ಕೊಟ್ಟಿಂಜ ವಿದ್ಯಾರ್ಥಿಗಳಿಗೆ ಪೂರ್ಣ ಸಹಕಾರ ನೀಡಿದ್ದಲ್ಲದೆ 15 ಗೋಣಿ ಸಿಮೆಂಟ್ ದೇಣಿಗೆಯಾಗಿ ಒದಗಿಸಿದರು. ಇಂಜಿನಿಯರ್ ತೇವು ತಾರಾನಾಥ ಕೊಟ್ಟಾರಿ ನಿರ್ಮಾಣ ಕಾರ್ಯಕ್ಕೆ ಮೇಸಿಗಳನ್ನು ಒದಗಿಸಿ ಸಹಕಾರ ನೀಡಿದರು. ಸ್ಥಳಿಯ ಗ್ರಾ.ಪಂ. ಸದಸ್ಯ ಮನೋಜ್ ಆಚಾರ್ಯ ಸೇರಿದಂತೆ ಅನೇಕ ಮಂದಿ ದಾನಿಗಳು ವಿದ್ಯಾರ್ಥಿಗಳ ಸೇವಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಸಂಸ್ಥೆಯ ಪ್ರಾಂಶುಪಾಲ ಪ್ರೊ.ಲೂರ್ದ್ ರಾಜ್ ಐ, ಎನ್ಎಸ್ಎಸ್ ಸಂಯೋಜಕಿ ಡಾ.ಅಶ್ವಿನಿ ಎಸ್.ಶೆಟ್ಟಿ ನಿರ್ದೇಶನದಂತೆ ಕಾರ್ಯಕ್ರಮ ಅಧಿಕಾರಿ, ಸಹಾಯಕ ಪ್ರಾಧ್ಯಾಪಕರಾದ ಶಿಫಾಲಿ ಅಭಿಲಾಷ್ ಪೂಜಾರಿ ಮತ್ತು ಸ್ವಾತಿ ಮೇಲ್ವಿಚಾರಣೆ ವಹಿಸಿದ್ದಾರೆ. ಕಲ್ಲು ಹೊರುವ, ಮರಳು ಸಾರುವ, ಗುಂಡಿ ಅಗೆಯುವ, ಸಮತಟ್ಟುಗೊಳಿಸುವ ಪ್ರಮುಖ ಕೆಲಸಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದಾರೆ. ಕೇವಲ ಮೂರು ದಿನದಲ್ಲಿ ಭಾಗಶ@ ಕೆಲಸಗಳು ಪೂರ್ಣಗೊಂಡಿವೆ. ಅಂದಾಜು 80 ಸಾವಿರ ರೂ. ಕಾಮಗಾರಿ ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ನೆರವೇರಿದ್ದು ಶಾಲೆಯ ಬಹುದಿಗಳ ಬೇಡಿಕೆಯೊಂದು ಈಡೇರುತ್ತಿದೆ.
ಯೇನಪೋಯ ಡೀಮ್ಡ್ ಯುನಿವರ್ಸಿಟಿಯ 30 ವಿದ್ಯಾರ್ಥಿಗಳು ಶಾಲೆಗೆ ಅವಶ್ಯ ಇರುವ ಶೌಚಗೃಹ, ಆವರಣ ಗೋಡೆ ನಿರ್ಮಾಣದ ಕಾರ್ಯ ಹಾಗೂ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಶಾಲೆಗೆ ಅಗತ್ಯವಾಗಿ ಬೇಕಾಗಿದ್ದ ಕೆಲಸವನ್ನು ನಿರ್ವಹಿಸಿದ್ದಾರೆ. ತೇವು ತಾರಾನಾಥ ಕೊಟ್ಟಾರಿ, ಸ್ಥಳಿಯ ಪ್ರಮುಖರು ಶಾಲೆಯ ಈಗಿನ ಶೌಚಗೃಹ ಶಿಥಿಲ ಸ್ಥಿತಿಯಲ್ಲಿದೆ. ಯೇನಪೋಯ ಡೀಮ್ಡ್ ಯುನಿವರ್ಸಿಟಿಯ ಎನ್ಎಸ್ಎಸ್ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ನಿರ್ಮಿಸಿಕೊಡುತ್ತಿರುವುದರಿಂದ ಹಲವು ಸಮಯದ ಬೇಡಿಕೆ ಈಡೇರುತ್ತಿದೆ. ಬೃಂದಾ, ಶಾಲಾ ಮುಖ್ಯಶಿಕ್ಷಕಿ