

ಮುಂಬೈ: ಪರ್ವತದ ಮೇಲೆ, ಕಟ್ಟಡದ ಮೇಲೆ, ನೀರಿನಡಿ ಹೀಗೆ ಎಲ್ಲೆಂದರಲ್ಲಿ ಸಾವಿರಾರು ಜನ ಮಾಡಿದ ರೀಲ್ಸ್ ಮಾಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೀವು ನೋಡಿಯೇ ಇರುತ್ತೀರಿ. ಆದರೆ ಇದೇ ರೀತಿ ಸಾಹಸಕ್ಕೆ ಕೈ ಹಾಕಿದ 18 ವರ್ಷದ ಯುವಕನೊಬ್ಬ ರೀಲ್ಸ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಘಟನೆ ಮುಂಬೈ ಬಳಿ ನಡೆದಿದೆ.
ಮೃತನನ್ನು ಬಿಲಾಲ್ ಸೋಹಿಲ್ ಶೇಖ್ (18) ಎಂದು ಗುರುತಿಸಲಾಗಿದ್ದು, ಚೋಲೆ ಪ್ರದೇಶದಲ್ಲಿ ನೀರು ಸರಬರಾಜು ಮಾಡುವ ಬ್ರಿಟಿಷ್ ಪಂಪ್ ಹೌಸ್‌ಗೆ ಬಿದ್ದ ಪ್ರಾಣ ಕಳೆದುಕೊಂಡಿದ್ದಾನೆ. ಈ ಬ್ರಿಟಿಷ್ ಪಂಪ್ ಹೌಸ್‌ಗೆ ಜನಸಾಮಾನ್ಯರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಈ ಪ್ರದೇಶದಲ್ಲಿ ಪ್ರತಿದಿನ ಸಾಯಂಕಾಲ ವಾಯುವಿಹಾರಕ್ಕೆ ಬರಲು ಅವಕಾಶವಿದೆ.
ಇದನ್ನೂ ಓದಿ: ಫಸ್ಟ್ ನೈಟ್ಗೆ ಶುಭ ಕೋರಿ ಬ್ಯಾನರ್ ಅಳವಡಿಸಿದ ವರನ ಸ್ನೇಹಿತರು!
ಇದೇ ನೆಪದಲ್ಲಿ ಬಂದಿದ್ದ ಬಿಲಾಲ್ ಹಾಗೂ ಆತನ ಸ್ನೇಹಿತರು ಇಲ್ಲಿನ ಸಿಬ್ಬಂದಿ ಕಣ್ತಪ್ಪಿಸಿ ಪಂಪ್ ಹೌಸ್ ಬಳಿ ರೀಲ್ಸ್ ಮಾಡುತ್ತಿದ್ದ. ಈ ವೇಳೆ ಅಂಚಿನಿಂದ ಸಮತೋಲನ ತಪ್ಪಿ ಬಿಲಾಲ್ ಪಂಪ್ ಹೌಸ್‌ಗೆ ಬಿದ್ದಿದ್ದಾನೆ. ಕೂಡಲೇ ಆತನ ಸ್ನೇಹಿತರು ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಯುವಕನಿಗಾಗಿ ನೀರಿನಲ್ಲಿ ಹುಡುಕಾಟ ನಡೆಸಿದರೂ ಯುವಕ ಮಾತ್ರ ಪತ್ತೆಯಾಗಿರಲಿಲ್ಲ. ಕೊನೆಗೆ ಎರಡು ದಿನಗಳ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಯುವಕನ ಮೃತದೇಹವನ್ನು ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ.(ಏಜೆನ್ಸೀಸ್)