ಗ್ಯಾಸ್ ಗೀಸರ್ ಕೆಮಿಕಲ್‌ನಿಂದ ಯುವಕ ಸಾವು

mbd_Sharik death
Published on

ಮೂಡುಬಿದಿರೆ: ಕೋಟೆಬಾಗಿಲಿನ ವಸತಿ ಸಂಕೀರ್ಣವೊಂದರಲ್ಲಿ ಭಾನುವಾರ ರಾತ್ರಿ ಸ್ನಾನದ ಕೋಣೆಯ ಗ್ಯಾಸ್ ಗೀಸರ್‌ನ ರಾಸಾಯನಿಕ ಹೊರಚೆಲ್ಲಿ ಕೋಟೆಬಾಗಿಲಿನ ದಿ.ಅನ್ಸಾರ್ ಎಂಬುವರ ಪುತ್ರ ಶಾರಿಕ್(18) ಮೃತಪಟ್ಟಿದ್ದಾರೆ.

ಸ್ನಾನಕ್ಕೆಂದು ತೆರಳಿದಾತ ಬಹಳ ಹೊತ್ತಾದರೂ ಹೊರಬರದಿರುವುದನ್ನು ಗಮನಿಸಿದ ಆತನ ಸಹೋದರ ಪರಿಶೀಲಿಸಿದಾಗ ಶಾರಿಕ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಶಾರಿಕ್ ಯಾವಾಗಲೂ ಸ್ನಾನದ ಕೋಣೆಯಲ್ಲಿ ಬಹಳ ಹೊತ್ತು ಕಳೆಯುವುದು ಸಾಮಾನ್ಯವಾಗಿದ್ದ ಕಾರಣ ಘಟನೆ ಬಗ್ಗೆ ತಕ್ಷಣ ಮನೆಯವರ ಗಮನಕ್ಕೆ ಬಂದಿಲ್ಲ. ಸ್ನಾನದ ಕೋಣೆ ಬಂದ್ ಆಗಿದ್ದು, ಗಾಳಿಯಾಡದ ಸ್ಥಿತಿ ಇದ್ದ ಕಾರಣ ಗೀಸರ್‌ನ ರಾಸಾಯನಿಕ ಹರಡಿದಾಗ ಶಾರಿಕ್‌ಗೆ ಹೊರಬರಲಾಗಲಿಲ್ಲ ಎನ್ನಲಾಗಿದೆ. ಶಾರಿಕ್ ಪ್ರಥಮ ಪದವಿ ವಿದ್ಯಾರ್ಥಿಯಾಗಿದ್ದು, ಕಲಿಕೆಯಲ್ಲಿ ಮುಂದಿದ್ದ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net