ಖಾಸಗಿ ಸಿಟಿ ಬಸ್‌ಗಳಲ್ಲಿ ಯುಪಿಐ ಟಿಕೆಟ್ ವ್ಯವಸ್ಥೆ ಆರಂಭ

Mng_Upi Bus
Published on

ಮಂಗಳೂರು: ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸುವ ಸಲುವಾಗಿ ಮತ್ತು ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಕಾರ್ಯಕ್ರಮದ ಭಾಗವಾಗಿ ನಗರದ ಖಾಸಗಿ ಸಿಟಿ ಬಸ್‌ಗಳಲ್ಲಿ ನೇರ ನಗದು ರಹಿತ ಯುಪಿಐ ಟಿಕೆಟ್ ವ್ಯವಸ್ಥೆಯನ್ನು ಸೋಮವಾರ ಆರಂಭಿಸಲಾಗಿದೆ.

ಇದು ಬಸ್‌ಗಳಲ್ಲಿ ಟಿಕೆಟ್ ಖರೀದಿಸುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಪ್ರಯಾಣಿಕರಿಗೆ ಅದರಲ್ಲೂ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ. ನಗದು ವ್ಯವಹಾರ, ಚಿಲ್ಲರೆ ಸಮಸ್ಯೆಗಳನ್ನು ನೀಗಿಸಲಿದೆ. ಪ್ರಯಾಣಿಕರು ಸ್ಮಾರ್ಟ್‌ಫೋನ್‌ಗಳಿಂದಲೇ ಗೂಗಲ್‌ಪೇ, ಫೋನ್‌ಪೇ, ಪೇಟಿಎಂ ಮತ್ತಿತರ ಯುಪಿಐ ಆ್ಯಪ್‌ಗಳನ್ನು ಬಳಸಿಕೊಂಡು ಬಸ್ ಟಿಕೆಟ್ ಖರೀದಿಸಬಹುದು ಎಂದು ಎಂದು ದ.ಕ. ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ತಿಳಿಸಿದ್ದಾರೆ.

ಎಲ್ಲಿ ಇಳಿಯುವುದು ಎಂಬುದನ್ನು ನಿರ್ವಾಹಕರಿಗೆ ತಿಳಿಸಬೇಕು. ಆವಾಗ ನಿರ್ವಾಹಕರು ಟಿಕೆಟ್ ಯಂತ್ರದಲ್ಲಿ ಪ್ರಯಾಣಿಕರು ಇಳಿಯುವ ಸ್ಥಳವನ್ನು ಆಯ್ಕೆ ಮಾಡುತ್ತಾರೆ. ಬಳಿಕ ಸರಿಯಾದ ಟಿಕೆಟ್ ಬೆಲೆಗೆ ಯಂತ್ರದಲ್ಲಿ ಕ್ಯೂಆರ್ ಕೋಡ್ ತೆರೆದುಕೊಳ್ಳುತ್ತದೆ. ಕ್ಯೂಆರ್ ಕೋಡ್ ಅನ್ನು ಸ್ಕಾೃನ್ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net