ಬಾಗಲಕೋಟೆ: ಕರೊನಾದ ಬೆನ್ನಲ್ಲೇ ಬ್ಲಾಕ್ ಫಂಗಸ್ ಕೂಡ ಜನರ ಜೀವ ತೆಗೆಯಲು ಆರಂಭಿಸಿಬಿಟ್ಟಿದೆ. ಇದೀಗ ಆ ಬ್ಲಾಕ್ ಫಂಗಸ್ ಅನ್ನು ಬಾಗಲಕೋಟೆಯ ಯುವಕನೊಬ್ಬ ಬುರ್ಕಾಗೆ ಹೋಲಿಸಿ, ಎರಡು ಸಮುದಾಯಗಳ ಮಧ್ಯೆ ಅಸಮಾಧಾನದ ಕಿಡಿ ಹತ್ತಿಸಿದ್ದಾನೆ.
ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ತೇರದಾಳ ಮೂಲದ ಸದಾಶಿವ ಗೋಡಸೆ ಹೆಸರಿನ ಯುವಕ ಈ ರೀತಿ ವಿವಾದಾತ್ಮಕ ಪೋಸ್ಟ್ ಮಾಡಿದವನು. ಆತ ಬುರ್ಕಾ ಫೋಟೋವೊಂದನ್ನು ಹಾಕಿ ಬ್ಲಾಕ್ ಫಂಗಸ್ ಅಂದರೆ ಹೀಗಿರುತ್ತೆ ಹುಷಾರ್! ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾನೆ.
ಯುವಕನ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಒಂದು ಪೋಸ್ಟ್ನಿಂದ ಒಂದು ಸಮುದಾಯಕ್ಕೆ ಅಸಮಾಧಾನ ಉಂಟಾಗಿದೆ. ಎರಡು ಸಮುದಾಯಗಳ ಮಧ್ಯೆ ವೈಮನಸ್ಸು ಹೆಚ್ಚಾಗುವಂತಾಗಿದೆ. ಆ ಹಿನ್ನೆಲೆಯಲ್ಲಿ ತೇರದಾಳ ಪೊಲೀಸರು ಎರಡೂ ಸಮುದಾಯದವರನ್ನು ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುವುದು ಉಚಿತ – ಎಸ್.ಸುರೇಶ್ ಕುಮಾರ್
ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?
ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ