ಕಾಸರಗೋಡು: ತಂಪು ಪಾನೀಯದಲ್ಲಿ ಮಾದಕದ್ರವ್ಯ ಬೆರೆಸಿ, ಮಹಿಳೆಯ ನಗ್ನ ಚಿತ್ರ ತೆಗೆದು ಇದನ್ನು ಪ್ರಚಾರ ನಡೆಸಿದ ಪ್ರಕರಣದ ಆರೋಪಿ ವಡಗರ ವಿಲ್ಯಾಪಳ್ಳಿ ನಿವಾಸಿ ಮಹಮ್ಮದ್ ಜಾಸ್ಮಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ನಗ್ನ ದೃಶ್ಯಗಳನ್ನು ಆಕೆಯ ಪ್ರಾಯ ಪೂರ್ತಿಯಾಗದ ಪುತ್ರನ ಮೊಬೈಲಿಗೆ ರವಾನಿಸಿದ್ದ ಬಗ್ಗೆ ಪೋಕ್ಸೋ ಅನ್ವಯ ಪ್ರತ್ಯೇಕ ಕೇಸು ದಾಖಲಾಗಿದೆ. ಪತಿಯೊಂದಿಗೆ ವಿರಸಗೊಂಡಿದ್ದ ಮಹಿಳೆ ಪ್ರತ್ಯೇಕವಾಗಿ ವಾಸಿಸುತ್ತಿರುವಾಗ ಇನ್‌ಸ್ಟಾಗ್ರಾಂ ಮೂಲಕ ಮಹಮ್ಮದ್ ಜಾಸ್ಮಿನ್ ಪರಿಚಯವಾಗಿದ್ದು, ನಂತರದ ದಿನಗಳಲ್ಲಿ ಮಹಿಳೆಯೊಂದಿಗೆ ಜತೆಯಾಗಿಯೇ ವಾಸಿಸುತ್ತಿದ್ದನು. ಈ ಮಧ್ಯೆ ಜ್ಯೂಸಿನಲ್ಲಿ ಮಾದಕ ಪದಾರ್ಥ ಬೆರೆಸಿ ನೀಡಿ ಕೃತ್ಯವೆಸಗಿದ್ದಾನೆ. ಮಹಿಳೆ ನೀಡಿದ ದೂರಿನನ್ವಯ ಕಾಸರಗೋಡು ಚಂದೇರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ಲುಕೌಟ್ ನೋಟೀಸ್ ಜಾರಿಗೊಳಿಸಿದ್ದರು. ವಿದೇಶಕ್ಕೆ ಪರಾರಿಯಾಗುವ ಯತ್ನದಲ್ಲಿ ಕರಿಪ್ಪೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವಾಗ ಈತನನ್ನು ಬಂಧಿಸಲಾಗಿದೆ.
ವಿದ್ಯಾರ್ಥಿಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು : ದಯಾನಂದ ಕತ್ತಲ್‌ಸಾರ್ ಕಿವಿಮಾತು