More

  ಕಾವೇರಿ ನದಿ ನೀರು ಹಂಚಿಕೆ ವಿವಾದ: ಸುಪ್ರೀಂಕೋರ್ಟ್​ನಲ್ಲಿ ತಮಿಳುನಾಡು ವಾದಕ್ಕೂ ಹಿನ್ನಡೆ

  ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂದು ಇಂದು ಸುಪ್ರೀಂಕೋರ್ಟ್​ ಹೊರಡಿಸಿದ ತೀರ್ಪು ಕರ್ನಾಟಕಕ್ಕೆ ಬೇಸರ ಉಂಟು ಮಾಡಿರುವುದಂತೂ ನಿಜ. ಆದರೆ, ತಮಿಳುನಾಡು ವಾದಕ್ಕೂ ಹಿನ್ನಡೆಯಾಗಿದೆ.

  ಸುಪ್ರೀಂಕೋರ್ಟ್​ ಮುಂದೆ ತಮಿಳುನಾಡು ಪರ ವಕೀಲ ಮುಕುಲ್​ ರೋಹಟಗಿ ವಾದ ಮಂಡಿಸಿದರು. ಕರ್ನಾಟಕ ಈಗ ಬಿಡುತ್ತಿರುವ ನೀರು ಸಾಕಾಗುವುದಿಲ್ಲ. ಇನ್ನು ಹೆಚ್ಚಿನ ನೀರು ಬಿಡಲು ಕರ್ನಾಟಕಕ್ಕೆ ಸೂಚನೆ ನೀಡಬೇಕೆಂದು ಕೋರಿದರು.

  ಆದರೆ, ತಮಿಳುನಾಡು ವಾದವನ್ನು ಪುರಷ್ಕರಿಸದ ಸುಪ್ರೀಂಕೋರ್ಟ್​ ಹೆಚ್ಚು ನೀರು ಬಿಡಬೇಕು ಎಂಬ ನಿಮ್ಮ ವಾದವನ್ನು ನಾವು ಒಪ್ಪಲಾಗುವುದಿಲ್ಲ. ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರವೂ ತಜ್ಞರಿಂದ ಕೂಡಿದ ಮತ್ತು ವಾಸ್ತವಾಗಳನ್ನು ಅರಿತೇ ಸರಿಯಾದ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಕೋರ್ಟ್​ ಹೇಳಿತು.

  ಇದನ್ನೂ ಓದಿ: ಚಿನ್ನಾಭರಣ ಖರೀದಿಗೆ ಸುಗ್ಗಿಕಾಲ; ಇಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ

  ಸದ್ಯಕ್ಕೆ ಸುಪ್ರೀಂಕೋರ್ಟ್​ ನೀಡಿರುವ ಆದೇಶದಂತೆ ಕರ್ನಾಟಕ, ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್​ನಂತೆ 15 ದಿನಗಳವರೆಗೆ ನೀರು ಹರಿಸಬೇಕಿದೆ. ಸೆ.12ರಂದು ಕಾವೇರಿ ನೀರು ನಿಯಂತ್ರಣ ಸಮಿತಿಯು ಕೂಡ ಇದೇ ಆದೇಶವನ್ನು ಹೊರಡಿಸಿತ್ತು. ಇದಾದ ಬಳಿಕ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದಲ್ಲೂ ಇದೇ ಸೂಚನೆ ನೀಡಲಾಗಿತ್ತು. ಇದೀಗ ಸುಪ್ರೀಂಕೋರ್ಟ್​ ಕೂಡ ಇದನ್ನೇ ತನ್ನ ತೀರ್ಪಿನಲ್ಲಿ ಮುಂದುವರಿಸಿದೆ.

  ಸಭೆಯಲ್ಲೂ ಹೆಚ್ಚು ನೀರಿಗೆ ತಮಿಳುನಾಡು ಆಗ್ರಹ

  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆ.18ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿಯೂ ತಮಿಳುನಾಡು ಹೆಚ್ಚು ನೀರು ಬಿಡಲು ಪಟ್ಟು ಹಿಡಿದಿತ್ತು. ಪ್ರತಿದಿನ 12,500 ಕ್ಯೂಸೆಕ್​ನಂತೆ 15 ದಿನ​ ನೀರನ್ನು ಬಿಡುವಂತೆ ತಮಿಳುನಾಡು ಮನವಿ ಮಾಡಿತ್ತು. ಆದರೆ, 5 ಸಾವಿರ ಕ್ಯೂಸೆಕ್​​ ನೀರು ಬಿಡುವಂತೆ ಪ್ರಾಧಿಕಾರ ಆದೇಶ ಹೊರಡಿಸಿತ್ತು.

  CWRC ಆದೇಶದಂತೆ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡಲು CWMA ಸಭೆಯಲ್ಲಿ ಕರ್ನಾಟಕಕ್ಕೆ ಸೂಚನೆ

  ಕರ್ನಾಟಕಕ್ಕೆ ಸುಪ್ರೀಂ ಶಾಕ್​: 15 ದಿನಗಳವರೆಗೆ ನಿತ್ಯ 5 ಸಾವಿರ ಕ್ಯೂಸೆಕ್​ ನೀರು ಹರಿಸಲು ಆದೇಶ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts