ಸಲಹೆ ನೀಡಲು ಹೋಗಿದ್ದ ಗ್ರ್ಯಾಂಟ್  ಫ್ಲವರ್‌ಗೆ ಚಾಕು ತೋರಿಸಿದ್ದ ಯೂನಿಸ್ ಖಾನ್...!

younis khan for web site
Published on

ನವದೆಹಲಿ: ಯಾವುದೇ ಕ್ರೀಡೆಯ ತಂಡಗಳಿಗೆ ಕೋಚ್‌ಗಳನ್ನು ನೇಮಿಸುವುದೇ ಸಲಹೆ, ಮಾರ್ಗದರ್ಶನ ನೀಡುವುದಕ್ಕೆ. ಕ್ರೀಡಾಪಟುಗಳು ಕೋಚ್‌ಗಳಿಗೆ ಗುರುವಿನ ಸ್ಥಾನ ನೀಡಿರುತ್ತಾರೆ. ತಂಡದಲ್ಲಿ ಕೋಚ್‌ಗಳಿಗೆ ತನ್ನದೇ ಮಹತ್ವದ ಸ್ಥಾನವಿರುತ್ತದೆ. ಪಾಕಿಸ್ತಾನದ ಮಾಜಿ ನಾಯಕ ಯೂನಿಸ್ ಖಾನ್, ಅಂದಿನ ಬ್ಯಾಟಿಂಗ್ ಕೋಚ್ ಆಗಿದ್ದ ಗ್ರ್ಯಾಂಟ್ ಫ್ಲವರ್ ಸಲಹೆ ನೀಡಿದ್ದಕ್ಕೆ ಮಾಡಿದ್ದೇನು ಗೊತ್ತೆ. ಮೂರು ವರ್ಷಗಳ ಹಿಂದಿನ ಕಹಿ ಘಟನೆಯನ್ನು ಜಿಂಜಾಬ್ವೆಯ ಮಾಜಿ ಆಟಗಾರ ಗ್ರ್ಯಾಂಟ್  ಫ್ಲವರ್ ಇದೀಗ ಹೊರಹಾಕಿದ್ದಾರೆ. 5 ವರ್ಷಗಳ ಕಾಲ ಪಾಕ್ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿದ್ದ ಗ್ರ್ಯಾಂಟ್ ಕಹಿ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.

2016-17ನೇ ಸಾಲಿನಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಯೂನಿಸ್ ಖಾನ್‌ಗೆ ಗ್ರ್ಯಾಂಟ್ ಫ್ಲವರ್ ಬ್ಯಾಟಿಂಗ್ ಕುರಿತು ಉಪಹಾರದ ವೇಳೆ ಸಲಹೆ ನೀಡಲು ಹೋದಾಗ ಕುತ್ತಿಗೆ ಬಳಿ ಚಾಕು ಹಿಡಿದ್ದರಂತೆ. ಇಂಥ ಆಘಾತಕಾರಿ ವಿಷಯವನ್ನು ಗ್ರ್ಯಾಂಟ್ ಫ್ಲವರ್ ವೆಬ್‌ಸೈಟ್ ಸಂವಾದದಲ್ಲಿ ಹೇಳಿಕೊಂಡಿದ್ದಾರೆ. ಬ್ರಿಸ್ಬೇನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಯೂನಿಸ್ ಖಾನ್ ಶೂನ್ಯಕ್ಕೆ ಔಟಾಗಿದ್ದರು. ಯಾವ ಪಂದ್ಯ ಅಂತ ಸರಿಯಾಗಿ ಗೊತ್ತಿಲ್ಲ, ಆದರೆ, 2016ರಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ ಪಂದ್ಯವಿರಬೇಕು ಎಂದು ಗ್ರ್ಯಾಂಟ್ ಸ್ಮರಿಸಿದ್ದಾರೆ. ಈ ಸರಣಿಯಲ್ಲಿ ಪಾಕಿಸ್ತಾನ 0-3 ರಿಂದ ಸೋಲನುಭವಿಸಿತ್ತು.

ಯೂನಿಸ್ ಖಾನ್ ಒಬ್ಬ ಪರಿಪೂರ್ಣ ಬ್ಯಾಟ್ಸ್‌ಮನ್ ಎನ್ನುವುದರಲ್ಲಿ ಎರಡು ಮಾತಿಲ್ಲ, ಕೆಲ ಆಟಗಾರರಿಗೆ ಬಂಡತನವೇ ಆಟ ಕಲಿಸುತ್ತದೆ ಎಂದಿದ್ದಾರೆ. ಗ್ರಾೃಂಟ್ ಫ್ಲವರ್ ಸದ್ಯ ಶ್ರೀಲಂಕಾ ತಂಡಕ್ಕೆ ಬ್ಯಾಟಿಂಗ್ ಆಗಿದ್ದಾರೆ. ಜಿಂಬಾಬ್ವೆ ಪರ 67 ಟೆಸ್ಟ್ ಪಂದ್ಯಗಳಿಂದ 3457 ರನ್ ಹಾಗೂ 221 ಏಕದಿನ ಪಂದ್ಯಗಳಿಂದ 6571 ರನ್ ಬಾರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net