

ನವದೆಹಲಿ: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ‘ಜಂಪಿಂಗ್ ಪುಷ್-ಅಪ್’ ಚಾಲೆಂಜ್‌ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಲ ಬಾಲಿವುಡ್ ನಟಿಯರೂ ಇದಕ್ಕೆ ಮನಸೋತಿದ್ದರು. ಇದೀಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ‘ಜಂಪಿಂಗ್ ಪುಷ್-ಅಪ್’ ಚಾಲೆಂಜ್‌ಗೆ ಟ್ವಿಸ್ಟ್ ನೀಡಿದ್ದಾರೆ. ಅದೇನೆಂದು ಮುಂದೆ ಓದಿ.
ಹಾರ್ದಿಕ್ ಪಾಂಡ್ಯರ ಜಂಪಿಂಗ್ ಪುಷ್-ಅಪ್ ಅನ್ನು ಇನ್ನೂ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿ ಅದನ್ನು ಇನ್ನಷ್ಟು ಕಠಿಣಗೊಳಿಸಿರುವ ವಿರಾಟ್ ಕೊಹ್ಲಿ, ಪುಷ್-ಅಪ್ ಜಂಪಿಂಗ್ ನಡುವೆ ಚಪ್ಪಾಳೆಯನ್ನೂ ಹೊಡೆದಿದ್ದಾರೆ. ಹಾರ್ದಿಕ್ ಪಾಂಡ್ಯರಂತೆ ಜಂಪಿಂಗ್ ಪುಷ್-ಅಪ್ ಮಾಡಿರುವ ಕೊಹ್ಲಿ ಮುಂದೆ ಮತ್ತು ಹಿಂದೆ ಚಲಿಸುವ ನಡುವೆ ಕ್ಲ್ಯಾಪ್ ಹೊಡೆದಿರುವ ವಿಡಿಯೋವನ್ನು ಟ್ವಿಟರ್, ಇನ್‌ಸ್ಟಾಗ್ರಾಂನಲ್ಲಿ ಗುರುವಾರ ಪ್ರಕಟಿಸಿದ್ದಾರೆ.
‘ಹೇ ಹಾರ್ದಿಕ್ ಪಾಂಡ್ಯ, ನಿನ್ನ ಫ್ಲೈ ಪುಷ್-ಅಪ್‌ಗಳನ್ನು ಇಷ್ಟಪಟ್ಟೆ. ನಾನು ಇದಕ್ಕೆ ಸಣ್ಣ ಕ್ಲ್ಯಾಪ್ ಅನ್ನು ಸೇರಿಸುತ್ತಿದ್ದೇನೆ’ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ. ಕೊಹ್ಲಿ ಮತ್ತು ಪಾಂಡ್ಯ ಭಾರತದ ಅತ್ಯಂತ ಫಿಟ್ ಕ್ರಿಕೆಟಿಗರ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನ ಪಡೆದಿದ್ದಾರೆ. ಲಾಕ್‌ಡೌನ್ ನಡುವೆ ಆಟಗಾರರು ಫಿಟ್ನೆಸ್ ಕಾಯ್ದುಕೊಳ್ಳಲು ಈಗಾಗಲೆ ಸಾಕಷ್ಟು ಪರಿಶ್ರಮಪಟ್ಟಿದ್ದಾರೆ.