

Transgender: ಬಾಲ್ಯದ ಶಾಲಾ ದಿನಗಳಿಂದಲೂ ಸ್ನೇಹಿತನಾಗಿದ್ದ ಟ್ರಾನ್ಸ್ಜೆಂಡರ್ ಯುವಕನನ್ನು ಯುವತಿಯೊಬ್ಬಳು ಪ್ರೀತಿಸಿ ಮದುವೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯ ಅರಸಿಪಾಳ್ಯಂನಲ್ಲಿ ನಡೆದಿದೆ ಎಂದು ಬುಧವಾರ(ಆಗಸ್ಟ್ 13) ವರದಿಯಾಗಿದೆ.
ಅರಸಿಪಾಳ್ಯಂನ ದುರೈರಾಜ್ ಎಂಬುವರ ಪುತ್ರಿ ಏಲಕ್ಕಿಯಾ ಶ್ರೀ (21), ಚೆಲ್ಲಾಟಂಪಟ್ಟಿಯ ಶೇಖರ್ ಎಂಬುವರ ಪುತ್ರ ಟ್ರಾನ್ಸ್ಜೆಂಡರ್ ಶೇಖರ್ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಶಾಲಾ ದಿನಗಳಿಂದಲೂ ಸ್ನೇಹಿತರಾಗಿದ್ದು, ಪದವಿ ಓದುವಾಗ ಇಬ್ಬರ ನಡುವೆ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.
ಪ್ರೀತಿ ಬಗ್ಗೆ ಇಬ್ದರು ತಮ್ಮ ತಮ್ಮ ಕುಟುಂಬಗಳಿಗೆ ತಿಳಿಸಿದಾಗ, ಆರಂಭದಲ್ಲಿ ವಿರೋಧಿಸಿದ್ದರು ಎನ್ನಲಾಗಿದೆ. ಸೋಮವಾರ ಈರೋಡ್ನ ಗೋಪಿಸೆಟ್ಟಿಪಾಳ್ಯಂನಲ್ಲಿರುವ ಮಂಟಪದಲ್ಲಿ ಮದುವೆಯಾಗಿದ್ದು, ಅನೇಕರು ಹೊಸ ಜೋಡಿ ಅಭಿನಂದಿಸಿದ್ದಾರೆ. (ಏಜೆನ್ಸೀಸ್)