ಸಾಯಿ ಪಲ್ಲವಿ -ನಾನಿ ಕಾಂಬಿನೇಷನ್​​ನಲ್ಲಿ ಮತ್ತೊಂದು ಸಿನಿಮಾ, ಶೇಖರ್ ಕಮ್ಮುಲ ನಿರ್ದೇಶನ!| Sai Pallavi

WhatsApp Image 2025-08-13 at 2.32.40 PM
Published on

Sai Pallavi: ಎಂಸಿಎ(ಮಿಡಲ್ ಕ್ಲಾಸ್ ಅಬ್ಬಾಯಿ), ಶ್ಯಾಮ್ ಸಿಂಗ್ ರಾಯ್ ಸಿನಿಮಾ ಮೂಲಕ ಬೆಸ್ಟ್ ಜೋಡಿಯಾಗಿದ್ದ ಲೇಡಿ ಪವಾರ್ ಸ್ಟಾರ್ ಸಾಯಿ ಪಲ್ಲವಿ ಮತ್ತು ನ್ಯಾಚುರಲ್ ಸ್ಟಾರ್ ನಾನಿ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾಗೆ ಸಿದ್ಧತೆ ನಡೆದಿದ್ದು, ಖ್ಯಾತ ಟಾಲಿವುಡ್ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ ಮಾಡ್ತಿದ್ದಾರೆ ಎಂದು ವರದಿಯಾಗಿದೆ. ಇದು ನಾನಿ ಮತ್ತು ಸಾಯಿ ಪಲ್ಲವಿ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

ಪಕ್ಕದ ಮನೆಯ ಹುಡುಗನಂತೆ ಪ್ರೇಮಕಥೆಗಳಿಂದ ಉತ್ತಮ ಯಶಸ್ಸು ಗಳಿಸಿದ್ದ ನಾನಿ, ಪ್ರಸ್ತುತ ವಿಭಿನ್ನ ಕಥೆಗಳನ್ನು ಆರಿಸಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಸದ್ಯ ‘ದಿ ಪ್ಯಾರಡೈಸ್’ ಚಿತ್ರ ಮಾಡ್ತಿದ್ದು, ಅದರ ಜೊತೆಗೆ ಇನ್ನೂ ಎರಡು ಚಿತ್ರಗಳಿಗೆ ಸಹಿ ಮಾಡಿದ್ದಾರೆ. ಅವುಗಳಲ್ಲಿ ಒಂದು ಶೇಖರ್ ಕಮ್ಮುಲ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ನಾನಿಗೆ ಶೇಖರ್ ಕಮ್ಮುಲ ನಿರ್ದೇಶನ ಮಾಡ್ತಿದ್ದಾರೆ. ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಇದು ನಿಜವಾದರೆ ಸಾಯಿ ಪಲ್ಲವಿ ಮತ್ತು ನಾನಿ ಮೂರನೇ ಚಿತ್ರವಾಗಲಿದೆ.

ಇಲ್ಲಿಯವರೆಗೂ ನಾನಿ-ಶೇಖರ್ ಕಮ್ಮುಲ ಕಾಂಬಿನೇಷನ್​ನಲ್ಲಿ ಒಂದೇ ಒಂದು ಚಿತ್ರ ಬಂದಿಲ್ಲ. ಆದರೆ ಸಾಯಿ ಪಲ್ಲವಿ ಶೇಖರ್ ಕಮ್ಮುಲ ನಿರ್ದೇಶನದ 2 ಚಿತ್ರಗಳಲ್ಲಿ ನಟಿಸಿದ್ದು, ಫಿದಾ ಚಿತ್ರದ ಮೂಲಕ ಟಾಲಿವುಡ್​ನಲ್ಲಿ ಖ್ಯಾತಿಗಳಿಸಿದ್ದರು. ತೆಲಂಗಾಣ ಭಾಷೆಯಲ್ಲಿ ಈ ಚಿತ್ರ ಮೂಡಿ ಬಂದಿತ್ತು. ಎರಡು ತೆಲುಗು ರಾಜ್ಯಗಳಲ್ಲಿ ಅಲ್ಲದೇ, ದೇಶ್ಯಾದ್ಯಂತ ಯಶಸ್ಸುಗಳಿಸಿತ್ತು. ಬಳಿಕ ಅಕ್ಕಿನೇನಿ ನಾಗಚೈತನ್ಯ ಜೊತೆಗಿನ ಲವ್ ಸ್ಟೋರಿ ಚಿತ್ರವೂ ಯಶಸ್ಸುಗಳಿಸಿತ್ತು.

ಇತ್ತೀಚೆಗೆ ಅಕ್ಕಿನೇನಿ ನಾಗಚೈತನ್ಯ-ಸಾಯಿ ಪಲ್ಲವಿ ಜೋಡಿಯ ಮತ್ತೊಂದು ತೆಲುಗು ಚಿತ್ರ ತಾಂಡೆಲ್​ ಬಾಕ್ಸ್​ ಆಫೀಸ್​ನಲ್ಲಿ ಯಶಸ್ಸುಗಳಿಸಿತ್ತು. ಇದೇ ವೇಳೆ ತಮಿಳಿನ ಅಮರನ್ ಚಿತ್ರದಲ್ಲೂ ಸಾಯಿ ಪಲ್ಲವಿ ನಟಿಸಿದ್ದರು. ಚಿತ್ರ ದೇಶಾದ್ಯಂತ ಸದ್ದು ಮಾಡಿತ್ತು. ಹುತಾತ್ಮ ಯೋಧ ಮೇಜರ್ ಮುಕುಂದ್ ವರದರಾಜನ್ ಅವರ ಬಯೋಫಿಕ್ ಆಗಿತ್ತು. ರಾಜಕುಮಾರ್ ಪೆರಿಯಾಸ್ವಾಮಿ ನಿರ್ದೇಶನ ಮಾಡಿದ್ದರು. ಸದ್ಯ ಸಾಯಿ ಪಲ್ಲವಿ ಬಾಲಿವುಡ್​ನ ರಾಮಾಯಣ ಚಿತ್ರದಲ್ಲಿ ನಟಿಸುತ್ತಿದ್ದು ಸೀತೆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ, ರಾವಣನ ಪಾತ್ರದಲ್ಲಿ ನಟ ಯಶ್ ನಟಿಸುತ್ತಿದ್ದಾರೆ. ಮುಂದಿನ ವರ್ಷ ಈ ಚಿತ್ರ ಬಿಡುಗಡೆಯಾಗಲಿದೆ. ನಿತೇಶ್ ತಿವಾರಿ ನಿರ್ದೇಶನ ಮಾಡ್ತಿದ್ದು, ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ. ಇದು ಮುಗಿದ ಬಳಿಕ ಕಮ್ಮುಲ ನಿರ್ದೇಶನದ ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಯಾವುದೂ ಅಂತಿಮವಾಗಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net