

Bollywood : ವಿಶ್ವ ಅಂಗಾಂಗ ದಾನ ದಿನಾಚರಣೆಯನ್ನು ಪ್ರತಿವರ್ಷ ಆಗಸ್ಟ್ 13ರಂದು ಆಚರಿಸಲಾಗುತ್ತದೆ. ಈ ದಿನದಂದು ವಿವಿಧ ಸ್ಥಳಗಳಲ್ಲಿ ಈ ವಿಚಾರದ ಬಗ್ಗೆ ಕಾರ್ಯಕ್ರಮಗಳು ನಡೆಯುತ್ತವೆ. ಇನ್ನು ಇವುಗಳ ಮೂಲಕ ಸಾರ್ವಜನಿಕರಿಗೆ ಅಂಗಾಂಗಗಳ ದಾನದ ಮಹತ್ವವನ್ನು ತಿಳಿಸಲಾಗುತ್ತದೆ. ಇನ್ನು ಈ ವರ್ಷ ಅಮಿತಾಬ್ ಬಚ್ಚನ್ ಅಲ್ಲದೇ, ಅನೇಕ ಬಾಲಿವುಡ್ ಸೆಲೆಬ್ರೆಟಿಗಳು ತಮ್ಮ ಅಂಗಾಂಗಗಳನ್ನು ದಾನ ಮಾಡಲು ಮುಂದಾಗಿದ್ದಾರೆ.
ವಿಶ್ವ ಅಂಗಾಂಗ ದಿನದಂದು, ಯಾವ ಸೆಲೆಬ್ರೆಟಿಗಳು ತಮ್ಮ ಅಂಗಾಂಗಗಳನ್ನು ದಾನ ಮಾಡಿದ್ದಾರೆ ಎಂದು ನಾವು ತಿಳಿಸಲಿದ್ದೇವೆ. ಒಬ್ಬಸೂಪರ್ ಸ್ಟಾರ್ ಅವರ ಮರಣದ ನಂತರ ಅವರ ಕಣ್ಣುಗಳನ್ನು ದಾನ ಮಾಡಿದರು. ಅಂದಿನಿಂದಲೇ ಅವರ ಅಭಿಮಾನಿಗಳು ಅವರಿಂದ ಪ್ರೇರೇಪಿತರಾಗಿ ತಕ್ಷಣವೇ ತಮ್ಮ ಅಂಗಾಂಗ ದಾನ ಮಾಡುವುದಾಗಿ ಪ್ರತಿಜ್ನೆ ಮಾಡಿದ್ದಾರೆ.
ಮೊದಲನೆಯದಾಗಿ 2021 ರಲ್ಲಿ ಹೃದಯಘಾತದಿಂದ ಮರಣ ಹೊಂದಿದ ದಕ್ಷಿಣದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ತಮ್ಮ ಮರಣದ ನಂತರ ಅವರ ಕಣ್ಣುಗಳನ್ನು ದಾನ ಮಾಡಿ, 5 ಜನರಿಗೆ ದೃಷ್ಟಿ ಬರಲು ಸಾಧ್ಯವಾಯಿತು.
ಐಶ್ವರ್ಯ ರೈ ತಮ್ಮ ಕಣ್ಣುಗಳಿಂದಲೇ ಆಕರ್ಷಿತರಾಗಿರುವ ಸೆಲೆಬ್ರೆಟಿ. ಇನ್ನು ಇವರು ವರ್ಷಗಳ ಹಿಂದೆಯೇ ತಮ್ಮ ಕಣ್ಣುಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು. ನನ್ನ ಕಣ್ಣುಗಳೇ ನನ್ನ ದೊಡ್ಡ ಆಸ್ತಿ ಅದನ್ನು ದಾನ ಮಾಡುವುದರಿಂದ ಇತರರಿಗೆ ಬೆಳಕಾಗಲು ಇಷ್ಟಪಡುತ್ತೇನೆ ಎಂದಿದ್ದಾರೆ.
ಅಮಿತಾಬ್ ಬಚ್ಚನ್ ಬಾಲಿವುಡ್ನ ಹಿರಿಯ ನಟ. ಇನ್ನು ಇವರು ತಮ್ಮ ಅಂಗಾಂಗಗಳನ್ನು ದಾನ ಮಾಡುವುದಾಗಿ ತಿಳಿಸಿದ್ದಾರೆ. ಹಾಗೇ ಇವರು ಹಲವಾರು ಜಾಗೃತಿ ಕಾಯರ್ಕ್ರಮಗಳನ್ನು ನಡೆಸಿ ಜನರನ್ನು ಪ್ರೇರೇಪಿಸುತ್ತಾರೆ. ಒಂದು ದಾನದಿಂದ ಹಲವಾರು ಜೀವವನ್ನು ಉಳಿಸಬಹುದು ಎಂದು ಸ್ವತಃ ಅವರೇ ತಿಳಿಸಿದ್ದಾರೆ.
ಅಂಗಾಂಗ ದಾನ ಮಾಡುವ ಮೂಲಕ ತಾರೆಯರ ಪಟ್ಟಿಯಲ್ಲಿ ತಲೈವಾ ಎಂದು ಕರೆಯಲ್ಪಡುವ ರಜನಿಕಾಂತ್ ಕೂಡಾ ಇದ್ದಾರೆ. ತಮ್ಮ ಸಾವಿನ ನಂತರ ಸೇವೆ ಮಾಡುವ ದಾರಿ ಎಂದರೆ ಅಂಗಾಂಗ ದಾನ ಎಂದು ನಂಬಿದ್ದಾರೆ.
ತಾರೆ ಪ್ರಿಯಾಂಕ ಚೋಪ್ರಾ ಕೂಡ ತಮ್ಮ ಎಲ್ಲಾ ಅಂಗಾಂಗ ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದು, ನಮ್ಮ ಸಾವಿನ ನಂತರವೂ ಅವಶ್ಯಕತೆ ಇರುವವರಿಗೆ ಅಂಗಾಂಗ ದಾನ ಮಾಡುವುದು ಪುಣ್ಯದ ಕೆಲಸ ಎಂದಿದ್ದಾರೆ.
ಸಲ್ಮಾನ್ ಖಾನ್ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಖ್ಯಾತಿ ಪಡೆದಿರುವಂತ ನಾಯಕ. ಇವರು ಕಾಂಡಕೋಶದ ದಾನದ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ಮೂಳೆ ಹಾಗೂ ಮಜ್ಜೆಯನ್ನು ದಾನ ಮಾಡುವುದಾಗಿ ತಿಳಿಸಿದ್ದಾರೆ.
ಕಮಲ್ ಹಾಸನ್ ತಮ್ಮ ಕಣ್ಣುಗಳಿಂದ ಹಿಡಿದು ಮೂತ್ರಪಿಂಡದವರೆಗೆ ಎಲ್ಲವನ್ನೂ ದಾನ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಟಿ, ನಿರ್ಮಾಪಕಿ ನಂದಿತಾ ದಾಸ್ ತಮ್ಮ ಮರಣದ ನಂತರ ತಮ್ಮ ಎಲ್ಲಾ ಅಂಗಾಂಗಗಳನ್ನು ದಾನ ಮಾಡುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)