ನಿಷೇಧಿತ ಪ್ರದೇಶದಲ್ಲಿ ಕಾರು ಸ್ಟಂಟ್​ ಮಾಡಲು ಹೋದ ಯುವಕರು... ಆದರೆ ಅಲ್ಲಿ ನಡೆದಿದ್ದೇ ಬೇರೆ! Mercedes Benz

benz car
Published on

Mercedes Benz: ಇಂದಿನ ದಿನಗಳಲ್ಲಿ ಕೆಲವೊಂದು ವರ್ಗದ ಜನರು ತಾವು ಫೇಮಸ್​ ಆಗಬೇಕು, ತಮ್ಮನ್ನು ಹಲವಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಅನುಸರಿಸಬೇಕು ಎಂದು ಅನೇಕ ರೀತಿಯ ಸಾಹಸಗಳನ್ನು ಮಾಡಿ, ಪ್ರಸಿದ್ಧಿ ಪಡೆಯಲು ಪ್ರಯತ್ನಿಸುತ್ತಿರುತ್ತಾರೆ. ಅದೇ ರೀತಿಯ ಘಟನೆಯೊಂದು ಗುಜರಾತ್​ನ ಸೂರತ್​ನಲ್ಲಿರುವ ಡುಮಾಸ್ ಬೀಚ್​ನಲ್ಲಿ ನಡೆದಿದೆ. ಐಷರಾಮಿ ಕಾರಿನ ಜೊತೆ ಸ್ಟಂಟ್​ ಮಾಡಲು ಹೋಗಿ ಜೌಗು ಮರಳಿನಲ್ಲಿ ಸಿಲುಕಿಕೊಂಡು ಯುವಕರು ಪರದಾಡಿದ್ದಾರೆ.

ವೀಡಿಯೋದಲ್ಲೇನಿದೆ?

ಡುಮಾಸ್ ಬೀಚ್​ನ ಸರೋವರದ ಮರಳಿನಲ್ಲಿ ನೀಲಿ ಬಣ್ಣದ ಮರ್ಸಿಡಿಸ್-ಬೆನ್ಜ್ ಕಾರು ಸಿಲುಕಿಕೊಂಡಿದೆ. ಇಬ್ಬರು ಯುವಕರು ಮರಳಿನಿಂದ ವಾಹನವನ್ನು ಹೊರತೆಗೆಯಲು ಹರಸಾಹಸ ಪಡುತ್ತಿರುವುದನ್ನು ನೋಡಬಹುದು. ಇನ್ನು ಈ ಘಟನೆ ಕ್ಯಾಮರಾದಲ್ಲಿ ರೆಕಾರ್ಡ್​ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಜನರ ಸುರಕ್ಷಿತಕ್ಕಾಗಿ ಡುಮಾಸ್ ಬೀಚ್​ನ ಕೆಲವೊಂದು ಪ್ರದೇಶಗಳನ್ನು ನಿಷೇಧ ಪಡಿಸಿದ್ದರೂ, ಆ ಪ್ರದೇಶಗಳಿಗೆ ಇಬ್ಬರು ಯುವಕರು ತಮ್ಮ ಕಾರನ್ನು ತೆಗೆದುಕೊಂಡು ಹೋಗಿ ಸಿಲುಕಿಕೊಂಡಿದ್ದಾರೆ. ಸಮುದ್ರದ ಅಲೆಗಳು ಜಾಸ್ತಿಯಾದ್ದರಿಂದ ಕಾರು ಜೌಗು ಮರಳಿನಲ್ಲಿ ಸಿಲುಕಿಕೊಂಡಿತು. ಯಾವುದೇ ಸಹಾಯವಿಲ್ಲದೆ ನೀರಿನಿಂದ ಕಾರನ್ನು ಹೊರತೆಗೆಯುವುದು ಕಷ್ಟವಾಗಿತ್ತು ಎಂದು ಸುದ್ದಿಮೂಲಗಳು ವರದಿ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net