ವಸತಿ ಕಟ್ಟಡದ ಲಿಫ್ಟ್​ನಲ್ಲಿ ಡೆಲಿವರಿ ಬಾಯ್​ನಿಂದ ಮೂತ್ರ ವಿಸರ್ಜನೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ! Delivary boy

blinkit
Published on

Delivary boy: ಕ್ವಿಕ್​ ಕಾಮರ್ಸ್​ನ ಬ್ಲಿಂಕಿಟ್​ನ ಡೆಲಿವರಿ ಬಾಯ್​ ಓರ್ವ ವಿರಾರ್​ ಪಶ್ಚಿಮದಲ್ಲಿರುವ ಸಿಡಿ ಗುರುದೇವ್​ ಬಿಲ್ಡಿಂಗ್​ಗೆ ಪಾರ್ಸೆಲ್​ ಕೊಡಲು ಬಂದಾಗ ಅಲ್ಲಿನ ಲಿಫ್ಟ್​ನಲ್ಲಿ ಮೂತ್ರ ವಿಸರ್ಜಿಸುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆ ಮುಂಬೈನ ಪಾಲ್ವರ್​ ಜಿಲ್ಲೆಯ ವಿರಾರ್​ನಲ್ಲಿರುವ ಸಿಡಿ ಗುರುದೇವ್​ ಕಟ್ಟಡದಲ್ಲಿ ಶುಕ್ರವಾರ (ಜುಲೈ18) ನಡೆದಿದೆ.

ಸಿಸಿಟಿವಿ ದೃಶ್ಯದಲ್ಲಿರುವುದೇನು?

ಬ್ಲಿಂಕಿಟ್​ನ ಡೆಲಿವರಿ ಬಾಯ್​ ಎಲಿವೇಟರ್ ಒಳಗೆ ತನ್ನ ಎಡ ಕೈಯಲ್ಲಿ ಪಾರ್ಸೆಲ್​ಹಿಡಿದು ಪ್ರವೇಶಿಸುತ್ತಾನೆ. ಅವನಿಗೆ ಕ್ಯಾಮೆರಾ ಇರುವ ಸೂಕ್ಷ್ಮತೆ ತಿಳಿದಿರುವುದರಿಂದ ಆತನು ಕ್ಯಾಮೆರಾವನ್ನು ಮರೆ ಮಾಚುವ ಉದ್ದೇಶದಿಂದ, ಕ್ಯಾಮಾರಕ್ಕೆ ಬೆನ್ನು ಮಾಡಿ ತನ್ನ ಪ್ಯಾಂಟ್​ನ ಜಿಪ್​ ತೆಗೆದು ಲಿಫ್ಟ್​ನ ಮೂಲೆಯಲ್ಲಿಯೇ ಮೂತ್ರ ಮಾಡುತ್ತಾನೆ.

ಕಟ್ಟಡ ನಿವಾಸಿಗಳು ಆ ಲಿಫ್ಟ್​ನಲ್ಲಿ ಓಡಾಟ ನಡೆಸುವಾಗ ಅವರಿಗೆ ಅಹಿತಕರ ದುರ್ವಾಸನೆ ಬಂದುದರಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆನಂತರ ಬ್ಲಿಂಕಿಟ್​ ಬ್ರಾಂಡ್​ನ ಬಟ್ಟೆಯನ್ನು ಧರಿಸಿರುವ ವ್ಯಕ್ತಿಯನ್ನು ಗಮನಿಸಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ.

ಬ್ಲಿಂಕಿಟ್​ನ ಕಚೇರಿಯತ್ತ ಕಟ್ಟಡ ನಿವಾಸಿಗಳ ದೌಡು

ಈ ಘಟನೆಯ ಬಳಿಕ ಅಲ್ಲಿನ ನಿವಾಸಿಗಳು ಡೆಲಿವರಿ ಬಾಯ್​ ಬಗ್ಗೆ ತಿಳಿಯಲು ಹತ್ತಿರದ ಬ್ಲಿಂಕಿಟ್​ ಕಚೇರಿ ಹತ್ತಿರ ಹೋಗಿ ಘರ್ಷಣೆ ಮಾಡಿದರು. ಈ ವೇಳೆ ಕೆಲವು ನಿವಾಸಿಗಳು ಆ ವ್ಯಕ್ತಿಗೆ ಹಲ್ಲೆ ನಡೆಸಿ ಪೋಲಿಸರಿಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ.

ಬೊಲಿಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಈ ಘಟನೆಗೆ ಸಂಬಂಧಿಸಿದಂತೆ ನಿವಾಸಿಗಳು ಆ ವ್ಯಕ್ತಿಯ ವಿರುದ್ಧ ಬೊಲಿಂಜ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಪೊಲೀಸರು ಬ್ಲಿಂಕಿಟ್​ನ ಡೆಲಿವರಿ ಬಾಯ್​ನನ್ನು ವಿಚಾರಣೆ ನಡೆಸುವುದಾಗಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net