ಮೊದಲ ಬಾರಿಗೆ ತಮ್ಮ ಮನೆಯಲ್ಲಿ ವಿದ್ಯುತ್​​ ನೋಡಿದ 70ರ ವೃದ್ಧೆ!

Electricity Connection
Published on

ಉತ್ತರಪ್ರದೇಶ: ವಯೋವೃದ್ಧೆಯೊಬ್ಬರು ತಮ್ಮ ಮನೆಯಲ್ಲಿ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಪಡೆದು ಬೆಳಕನ್ನು ನೋಡಿ ಸಂತೋಷ ಪಟ್ಟಿರುವ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​​ ಆಗಿದೆ.

ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ವಯೋವೃದ್ಧೆಯೊಬ್ಬರು ಮನೆಯಲ್ಲಿ ದಶಕಗಳಿಮದ ವಿದ್ಯುತ್​ ಸಂಪರ್ಕವಿಲ್ಲದೇ ಬದುಕುತ್ತಿದ್ದರು. ಇದೀಗ ತಮ್ಮ ಮನೆಯಲ್ಲಿ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಇದಕ್ಕೆ ಕಾರಣೀಕರ್ತರಾದವರು ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಐಪಿಎಸ್​ ಅಧಿಕಾರಿ ಅನುಕೃತಿ ಶರ್ಮಾ. ವಯಸ್ಸಾದ ವಿಧವೆಯೊಬ್ಬರಿಗೆ ಸಹಾಯ ಹಸ್ತವನ್ನು ನೀಡಿದ್ದಾರೆ. ಅಧಿಕಾರಿಯ ಕಾರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಲಾಗಿದ್ದು, ನೆಟ್ಟಿಗರು ಅಧಿಕಾರಿಯ ಕಾರ್ಯಕ್ಕೆ ಮನಸಾರೆ ಹೊಗಳುತ್ತಿದ್ದಾರೆ.

ನೂರ್ ಜಹಾನ್ ತನ್ನ 70 ರ ಹರೆಯದ ವೃದ್ಧ ವಿಧವೆ. ಬುಲಂದ್‌ಶಹರ್‌ನಲ್ಲಿ ವಿದ್ಯುತ್ ಇಲ್ಲದೆ ವಾಸಿಸುತ್ತಿದ್ದರು. ಈಕೆ ಜಿಲ್ಲೆಯ ಖೇಡಿ ಗ್ರಾಮದ ನಿವಾಸಿ. ನೂರ್ಜಹಾನ್ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಿಲ್ ಪಾವತಿಸಲು ವೃದ್ಧೆಯ ಬಳಿ ಹಣವಿರಲಿಲ್ಲ. ಬಡತನದಿಂದಾಗಿ ಆಕೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಆದರೆ, ಸ್ಥಳೀಯ ಪೊಲೀಸ್ ಇಲಾಖೆ, ಐಪಿಎಸ್ ಅನುಕೃತಿ ಶರ್ಮಾ ಅವರು ಪೊಲೀಸ್ ತಂಡ ಮತ್ತು ವಿದ್ಯುತ್ ಇಲಾಖೆಯ ಅಧಿಕಾರಿಗಳೊಂದಿಗೆ ವೃದ್ಧ ಮಹಿಳೆಯ ಮನೆಗೆ ಹೋಗಿದ್ದಾರೆ. ವಿದ್ಯುತ್ ಬಿಲ್ ಪಾವತಿಸಿ ಮತ್ತು ಸಂಪರ್ಕವನ್ನು ಪುನಃಸ್ಥಾಪಿಸಲು ಸಹಾಯ ಮಾಡಿದ್ದಾರೆ.

ಅಷ್ಟೇ ಅಲ್ಲ ಐಪಿಎಸ್ ಶರ್ಮಾ ಅವರು ವೃದ್ಧೆಗೆ ಫ್ಯಾನ್ ಉಡುಗೊರೆ ನೀಡಿದ್ದಾರೆ. ಮನೆಯಲ್ಲಿ ದೀಪ ಬೆಳಗಿದ ತಕ್ಷಣ ನೂರ್ ಜಹಾನ್ ನಗುತ್ತಾ ಸಹಾಯ ಮಾಡಿದ ಅಧಿಕಾರಿಗಳನ್ನು ಆಶೀರ್ವದಿಸಿದರು. ನೂರ್​ಜಹಾನ್​ ಅನುಕೃತಿ ಶರ್ಮಾ ಅವರಿಗೆ ಸಿಹಿ ತಿನ್ನಿಸಿ ಸಂತೋಷ ಹಂಚಿಕೊಂಡರು. ಅಲ್ಲಿದ್ದವರೆಲ್ಲ ಅಜ್ಜಿಯ ಖುಷಿಯನ್ನು ಅನುಭವಿಸುತ್ತ ತಮ್ಮ ಬಾಯಿಯನ್ನೂ ಸಿಹಿ ಮಾಡಿಕೊಂಡರು.

ಶ್ರೀಮತಿ ಶರ್ಮಾ ಅವರು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಟ್ವೀಟ್ ಮಾಡಿದ್ದಾರೆ: “ನನ್ನ ಜೀವನದ ಉತ್ತಮ ಕ್ಷಣವಾಗಿದೆ. ನೂರ್ಜಹಾನ್ ಚಿಕ್ಕಮ್ಮನ ಮನೆಗೆ ವಿದ್ಯುತ್ ಸಂಪರ್ಕವನ್ನು ಪಡೆಯುವುದು ಅಕ್ಷರಶಃ ಅವಳ ಜೀವನದಲ್ಲಿ ಬೆಳಕನ್ನು ತಂದಂತೆ ಭಾಸವಾಯಿತು. ಅವಳ ಮುಖದ ಮೇಲಿನ ನಗು ಅಪಾರ ತೃಪ್ತಿ ತಂದಿತ್ತು. ಎಲ್ಲಾ ಬೆಂಬಲಕ್ಕಾಗಿ ಇಡೀ ತಂಡಕ್ಕೆ ಧನ್ಯವಾದಗಳು. ” ಎಂದು ಬರೆದುಕೊಂಡಿದ್ದಾರೆ. ಅಧಿಕಾರಿಯ ವೃದ್ಧೆಗೆ ಸಹಾಯ ಮಾಡಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net