More

    ಪ್ರೀತಿಸಿ ಮದ್ವೆಯಾಗುವುದೇ ಈಕೆಯ ಕೆಲ್ಸ: 18 ಯುವಕರನ್ನು ವರಿಸಿದ ಸುಂದರಿಯ ಕತೆ ಕೇಳಿದ್ರೆ ದಂಗಾಗ್ತೀರಾ!

    ಜೈಪುರ: ಮದುವೆ ಮಾಡಿಕೊಂಡು ಸುಮಾರು 18 ಯುವಕರಿಗೆ ವಂಚನೆ ಮಾಡಿರುವ ಆರೋಪದ ಮೇಲೆ ತೆಲುಗು ಮೂಲದ ಯುವತಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

    ಬಂಧಿತಳನ್ನು ಭಾಗವತಿ ಅಲಿಯಾಸ್​ ಅಂಜಲಿ ಎಂದು ಗುರುತಿಸಲಾಗಿದೆ. ಈಕೆಯೊಂದಿಗೆ ಇತರೆ 5 ಮಂದಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ತಮ್ಮ ಸಮುದಾಯದಲ್ಲಿ ತಡವಾಗಿ ಮದುವೆ ಆಗುವ ಪದ್ಧತಿಯನ್ನೇ ಬಂಡವಾಳ ಮಾಡಿಕೊಂಡ ಅಂಜಲಿ ಸುಮಾರು 18 ಯುವಕರನ್ನು ಮದುವೆಯಾಗಿ ಅವರಿಂದ ಹಣ ಮತ್ತು ಆಭರಣವನ್ನು ಕಸಿದುಕೊಂಡು ವಂಚಿಸಿದ್ದಾಳೆ.

    ಆರೋಪಿಗಳ ಗ್ಯಾಂಗ್​ ಗುಜರಾತ್​ನ ಜನಾಗಢದಲ್ಲಿ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಅಂಜಲಿ ಗ್ಯಾಂಗ್​ ಗುಜರಾತ್​, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಇತರೆ ರಾಜ್ಯಗಳ ಯುವಕರನ್ನು ಗುರಿಯಾಗಿರಿಸಿಕೊಂಡು ಪ್ರೀತಿಯ ಹೆಸರಲ್ಲಿ ನಂಬಿಸಿ, ಮದುವೆಯನ್ನು ಮಾಡಿಕೊಂಡು ಅವರಿಂದ ಆಭರಣ ಮತ್ತು ಹಣವನ್ನು ಪಡೆದುಕೊಂಡು ವಂಚಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.

    ಇದನ್ನೂ ಓದಿರಿ: 2021ರ ಪ್ರಬಲ ಮಿಲಿಟರಿ ದೇಶ ಯಾವುದು? ಒಂದು ವೇಳೆ ಯುದ್ಧ ನಡೆದ್ರೆ ಈ ರಾಷ್ಟ್ರಕ್ಕೆ ಗೆಲುವು ಖಚಿತವಂತೆ!

    ಜುನಾಗಢದ ಅಂಬಾಲಿಯಾದಲ್ಲಿ ಯುವಕನನ್ನು ಮದುವೆ ಆಗಿದ್ದ ಅಂಜಲಿ, ಆತನ ಮನೆಯಲ್ಲಿ ಆಭರಣ ಮತ್ತು 5 ಲಕ್ಷ ಮೌಲ್ಯದ ಹಣವನ್ನು ದೋಚಿ ಪರಾರಿಯಾಗಿದ್ದಳು. ಈ ಸಂಬಂಧ ಮೋಸ ಹೋದ ಯುವಕ ಅಂಜಲಿ ವಿರುದ್ಧ ದೂರು ನೀಡಿದ್ದನು.

    ಅಂಜಲಿ, ಆಕೆಯ ತಾಹಿ ಧನುಬೆನ್​ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಈಕೆ ಗುಜರಾತ್​ನ ರಾಜ್​ಕೋಟ್​ ಏರಿಯಾದಲ್ಲಿ ಅಂಜಲಿ ಹೆಸರಿನ ದಾಖಲಾತಿಗಳಲ್ಲಿ ವಾಸಿಸುತ್ತಿದ್ದಳು. ಮದುವೆ ಮಾಡಿಕೊಂಡು ಅನೇಕ ಕೆಲವು ದಿನಗಳವರೆಗೆ ಅವರೊಟ್ಟಿಗೆ ಇದ್ದು, ಬಳಿಕ ಚಿನ್ನಾಭರಣ ಮತ್ತು ಹಣ ದೋಚಿ ಪರಾರಿಯಾಗುವುದೇ ಇವರ ಕೆಲಸವಾಗಿತ್ತು. ಕೊನೆಗೂ ರಾಜಸ್ಥಾನ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಶಾಕಿಂಗ್​ ನ್ಯೂಸ್​| ಕೂಲ್​ ಡ್ರಿಂಕ್ಸ್​ ಬಾಟಲ್​ ಒಳಗೆ ಹಾವಿನ ಮರಿ ಕಂಡು ಕಂಗಾಲಾದ ಗ್ರಾಹಕ..!

    ಸಮಾಜದ ಕಣ್ಣು ತೆರೆಸಿದ ಜಲಯೋಧರು; ಇಂದು ವಿಶ್ವ ಜಲ ದಿನ

    ಬಿಗ್​ಬಾಸ್​ನಿಂದ ಹೊರಬಂದ ಗೀತಾ ಭಾರತಿ ಭಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts