ರೀಲ್ಸ್​​ ಹುಡುಗ ಆದ ರಿಯಲ್​ ಹೀರೋ; ವೈರಲ್​ ವಿಡಿಯೋಗೆ ಮೆಚ್ಚುಗೆಯ ಮಹಾಪೂರ

blank

ಇತ್ತೀಚಿನ ದಿನಗಳಲ್ಲಿ ರೀಲ್ಸ್​ ಕ್ರೇಜ್ ಎಷ್ಟಿದೆಯೆಂದರೆ ಎಲ್ಲೆಂದರಲ್ಲಿ ರೀಲ್ಸ್​ ಮಾಡುತ್ತಿರುತ್ತಾರೆ. ಎಷ್ಟೋ ಮಂದಿ ಅದಕ್ಕೆ ಅಡಿಕ್ಟ್​​​​ ಆಗಿರುತ್ತಾರೆ. ಇದರಿಂದಲೇ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಚಾರದಿಂದಲೇ ಈಗಿನ ಯುವಕರ ಬಗ್ಗೆ ತೆಗಳಿಕೆ ಹೆಚ್ಚಾಗಿ ಕೇಳುತ್ತಿರುತ್ತೇವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್​​​ವಿಡಿಯೋವೊಂದು ವೈರಲ್​ ಆಗಿದ್ದು ಅದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

blank

ಇದನ್ನು ಓದಿ: ಅಭ್ಯರ್ಥಿ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಕ್ಕೆ ಗಳಗಳನೆ ಅತ್ತ ಮಾಜಿ ಶಾಸಕ

ವೈರಲ್​ ವಿಡಿಯೋದಲ್ಲಿ ಹುಡುಗನೊಬ್ಬ ರೈಲ್ವೆ ಪ್ಲಾಟ್​ಫಾರ್ಮ್​​ನಲ್ಲಿ ಪಕ್ಕದಲ್ಲಿ ಟ್ರೈನ್​ ಚಲಿಸುತ್ತಿದ್ದಾಗ ಡ್ಯಾನ್ಸ್​ ಮಾಡಲು ಆರಂಭಿಸಿದ್ದಾನೆ. ರೈಲು ಚಲಿಸುವುದರಲ್ಲಿ ವೇಗ ಹೆಚ್ಚಾಗುತ್ತದೆ. ಹುಡುಗ ಡ್ಯಾನ್ಸ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ವೃದ್ಧರೊಬ್ಬರು ರೈಲಿನಿಂದ ಬೀಳುತ್ತಾರೆ. ನೃತ್ಯ ಮಾಡುವ ಹುಡುಗ ತಕ್ಷಣವೇ ಬಿದ್ದವರನ್ನು ಹಿಡಿದುಕೊಳ್ಳುವ ಮೂಲಕ ಸಂಭವಿಸುತ್ತಿದ್ದ ದೊಡ್ಡ ಅನಾಹುತವನ್ನು ತಡೆದಿರುವುದು ಕಾಣುತ್ತದೆ.

ಯುವಕ ಆ ಸ್ಥಳದಲ್ಲಿ ಇಲ್ಲದಿದ್ದರೆ ಬಿದ್ದ ವ್ಯಕ್ತಿಗೆ ಗಂಭೀರ ಗಾಯವಾಗುತಿತ್ತು ಅಥವಾ ಅವರ ಜೀವಕ್ಕೂ ಅಪಾಯವಾಗುವ ಸಾಧ್ಯತೆಗಳು ಇತ್ತು. ಆದರೆ ಸ್ಥಳದಲ್ಲೇ ರೀಲ್ಸ್​ ಮಾಡುತ್ತಿದ್ದ ಹುಡುಗ ಇದ್ದಿದ್ದು ಒಳ್ಳೆಯದೆ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ 2 ಲಕ್ಷ 63 ಸಾವಿರ ಮಂದಿ ವೀಕ್ಷಿಸಿದ್ದಾರೆ. ರೀಲ್ಸ್​ ಮಾಡುವವರ ಮೇಲೆ ಇಂದು ಸ್ವಲ್ಪ ಗೌರವ ನನ್ನ ಹೃದಯದಲ್ಲಿ ಹೆಚ್ಚಾಗಿದೆ, ರೀಲ್ಸ್​ ಮಾಡಿದ್ದರಿಂದ ಇಂದು ಸ್ವಲ್ಪ ಉಪಯೋಗವಾಗಿದೆ, ಇಂತಹ ಅವಕಾಶಗಳು ತುಂಬಾ ಕಡಿಮೆ ಎಂದು ಕಾಮೆಂಟ್​ ಮಾಡಿದ್ದಾರೆ.

ಪತಿ ಸೇರಿ 50 ಪುರುಷರಿಂದ ಅತ್ಯಾಚಾರ; ಕೋರ್ಟ್​​ನಲ್ಲಿ ಬೆಚ್ಚಿಬೀಳಿಸುವ ಸಂಗತಿ ಬಿಚ್ಚಿಟ್ಟ ಮಹಿಳೆ..

Share This Article
blank

ರಾತ್ರಿ 9 ಗಂಟೆ ಮೇಲೆ ಊಟ ಮಾಡೋದ್ರಿಂದ ಅನಾನುಕೂಲಗಳೇ ಅಧಿಕ: ಊಟಕ್ಕೆ ಸರಿಯಾದ ಸಮಯ ಯಾವುದು? | Eating

Eating: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಡವಾಗಿ ಭೋಜನ ಮಾಡುತ್ತಿದ್ದಾರೆ, ಆದರೆ ವೈದ್ಯಕೀಯ ತಜ್ಞರು ಇದು…

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

blank