More

    ಕೇವಲ 350 ರೂಪಾಯಿಗಾಗಿ ನಡೆಯಿತು ಬರ್ಬರ ಹತ್ಯೆ!

    ಹೊಸದಿಲ್ಲಿ: ಕೇವಲ 350 ರೂಪಾಯಿಗಾಗಿ ಯುವಕನಿಗೆ ಹಲವು ಬಾರಿ ಚಾಕು ಇರಿದು, ಬರ್ಬರವಾಗಿ ಹತ್ಯೆಗೈದ ಘಟನೆ ನವದೆಹಲಿಯ ವೆಲ್ಕಮ್​ ನಗರದಲ್ಲಿ ವರದಿಯಾಗಿದೆ.

    ಇದನ್ನೂ ಓದಿ: ಶಾಲೆಯಲ್ಲಿ ಹಲ್ಲಿ ಬಿದ್ದಿರುವ ಬಿಸಿಯೂಟ ಸೇವಿಸಿ 64 ಮಕ್ಕಳು ಅಸ್ವಸ್ಥ

    18 ವರ್ಷದ ಯುವಕನ ಮೇಲೆ ದಾಳಿ ಮಾಡಿದ 16 ವರ್ಷದ ಬಾಲಕ ಆತನಿಂದ 350 ರೂ. ಕದಿಯಲು ಪ್ರಯತ್ನಿಸಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಯುವಕ ಆರೋಪಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿ ಮೊದಲು ಆತನ ಕತ್ತು ಹಿಸುಕಿ ಉಸಿರುಗಟ್ಟಿಸಿ, ತದನಂತರ ಚಾಕುವಿನಿಂದ ಹಲವು ಬಾರಿ ಇರಿದು ಕೊಂದಿದ್ದಾನೆ. ಘಟನೆಯ ಭೀಕರ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪೊಲೀಸರ ಪ್ರಕಾರ, ಈ ದುಷ್ಕೃತ್ಯ ಮಂಗಳವಾರ (ನ.21) ರಾತ್ರಿ 11.15ರ ಸುಮಾರಿಗೆ, ಈಶಾನ್ಯ ದೆಹಲಿಯ ವೆಲ್ಕಮ್​ ನಗರಲ್ಲಿರುವ ಜಂತಾ ಮಜ್ದೂರ್ ಕಾಲೋನಿಯಲ್ಲಿ ಸಂಭವಿಸಿದೆ. “ಕೊಲೆಯ ಹಿಂದಿನ ಕಾರಣ ದರೋಡೆಯಾಗಿದ್ದು, ಘಟನೆಯ ನಂತರ ತನಿಖೆ ನಡೆಸಲಾಯಿತು. ತದನಂತರ ಅಪ್ರಾಪ್ತ ವಯಸ್ಕನನ್ನು ಬಂಧಿಸಿ, ಆತನಿಂದ ಅಪರಾಧಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಪೊಲೀಸ್ ಉಪ ಆಯುಕ್ತ ಜಾಯ್ ಟಿರ್ಕಿ ಹೇಳಿದರು.

    ಇದನ್ನೂ ಓದಿ: ರಣ್​ಬೀರ್​​​ ಕಪೂರ್​ಗೆ ಕನ್ನಡ ಹೇಳಿಕೊಟ್ಟ ರಶ್ಮಿಕಾ ಮಂದಣ್ಣ, ಮೊದಲು ನೀನು ಕನ್ನಡ ಕಲಿಯಮ್ಮ ಎಂದು ನೆಟ್ಟಿಗರ ಕಾಮೆಂಟ್​​​..!

    “ಘಟನೆ ನಡೆದ ಕೂಡಲೇ ಸಂತ್ರಸ್ತ ಯುವಕನನ್ನು ಹೆಚ್ಚಿನ ಚಿಕಿತ್ಸೆಗೆ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ, ಅದಾಗಲೇ ಯುವಕ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದರು” ಎಂದು ಡಿಸಿಪಿ ತಿಳಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ,(ಏಜೆನ್ಸೀಸ್).

    ಟೀಮ್ ಇಂಡಿಯಾ ಮುಖ್ಯ ಕೋಚ್​ ಆಗಿ ಮುಂದುವರೆಯಲ್ಲ ರಾಹುಲ್!​​; ಹಾಗಾದ್ರೆ ದ್ರಾವಿಡ್​ ಸ್ಥಾನಕ್ಕೆ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts