More

  ರಣ್​ಬೀರ್​​​ ಕಪೂರ್​ಗೆ ಕನ್ನಡ ಹೇಳಿಕೊಟ್ಟ ರಶ್ಮಿಕಾ ಮಂದಣ್ಣ, ಮೊದಲು ನೀನು ಕನ್ನಡ ಕಲಿಯಮ್ಮ ಎಂದು ನೆಟ್ಟಿಗರ ಕಾಮೆಂಟ್​​​..!

  ರಣ್‌ಬೀರ್ -ರಶ್ಮಿಕಾ ನಟಿಸಿರುವ ಅನಿಮಲ್​​ ಚಿತ್ರದ ಪ್ರಮೋಷನ್‌ನಲ್ಲಿ ಭಾಗವಹಿಸಲು ಹೋದಾಗ ಫೋಟೊಗ್ರಫರ್ ಒಬ್ಬರು ಕನ್ನಡದಲ್ಲಿ ಮಾತನಾಡಲು ಹೇಳಿದ್ದರಿಂದ ತಕ್ಷಣ ರಶ್ಮಿಕಾ “ಎಲ್ಲರಿಗೂ ನಮಸ್ಕಾರ” ಎಂದು ಹೇಳಿ, ರಣ್‌ಬೀರ್‌ಗೂ ಸಹ ಹೇಳಿಕೊಟ್ಟಿದ್ದಾರೆ.


  ನಂತರದಲ್ಲಿ ರಣ್‌ಬೀರ್ ಫೋಟೋಗ್ರಫರ್‌ನ ನೋಡಿ ನಿಮಗೆ ಕನ್ನಡ ಬರುತ್ತಾ ಎಂದು ಪ್ರಶ್ನಿಸಿದಾಗ, ಆತ ಹೌದು ಸರ್, ನಾನು ಕರ್ನಾಟಕ, ಹುಬ್ಬಳ್ಳಿಯಿಂದ ಬಂದಿದ್ದೀನಿ ಎಂದಿದ್ದಾರೆ. ಅದಕ್ಕೆ ರಣಬೀರ್‌,ಸರಿ ನೀವೇ ಹೇಳಿಕೊಡಿ, ರಶ್ಮಿಕಾ ಜೊತೆ ಕನ್ನಡ ಮಾತಾಡಿ ಎಂದಿದ್ದಾರೆ.


  ರಣ್‌ಬೀರ್ ಕನ್ನಡ ಮಾತನಾಡಲು ಪ್ರಯತ್ನಿಸಿರುವ ವಿಡಿಯೋ ವೈರಲ್ ಆಗುತ್ತಿದ್ದು, ಆದರೆ ನೆಟ್ಟಿಗರು ಮಾತ್ರ ರಶ್ಮಿಕಾಗೆ ಕನ್ನಡ ಸರಿಯಾಗಿ ಬರಲ್ಲ, ಆಕೆ ಏನು ಕನ್ನಡ ಪಾಠ ಮಾಡೋದು, ಸಿನಿಮಾ ಪ್ರಚಾರಕ್ಕೆ ಇದೆಲ್ಲ ಡ್ರಾಮಾ ಅಷ್ಟೆ ಎಂದು ಮತ್ತೆ ಟ್ರೋಲರ್​​​ಗಳ ಕೈಯಲ್ಲಿ ರಶ್ಮಿಕಾ ಸಿಲುಕಿಕೊಂಡಿದ್ದಾರೆ.


  ರಶ್ಮಿಕಾ ಕನ್ನಡ ಹೊರತುಪಡಿಸಿ ಇಂಗ್ಲೀಷ್‌ನಲ್ಲಿ ಮಾತನಾಡುತ್ತಾರೆ. ಬೇರೆ ರಾಜ್ಯಗಳಿಗೆ ಹೋದರೆ ಅಲ್ಲಿನ ಭಾಷೆಗಳಲ್ಲಿ ಮಾತನಾಡಲು ಯತ್ನಿಸುತ್ತಿದ್ದು, ಕರ್ನಾಟಕದಲ್ಲಿ ಮಾತ್ರ ಯಾಕೆ ಕನ್ನಡ ಮಾತಾಡೋದಿಲ್ಲ ಎಂದು ಹಲವರು ಕಿಡಿ ಕಾರಿದ್ದಾರೆ.


  ಪೊಗರು’ ಬಳಿಕ ರಶ್ಮಿಕಾ ಮತ್ತೆ ಕನ್ನಡ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಬರೀ ತೆಲುಗು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ‘ಅನಿಮಲ್’ ಚಿತ್ರ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts