More

    ಕಿರಿಕ್​ ಪಾರ್ಟಿಯಲ್ಲಿ ರಶ್ಮಿಕಾ ಬದಲಿಗೆ ಸಾಯಿಪಲ್ಲವಿ ಇರಬೇಕಿತ್ತು: ಎಡವಟ್ಟು ಆಯ್ತಲ್ಲ ಎಂದ ನೆಟ್ಟಿಗರು!

    ಬೆಂಗಳೂರು: ಕನ್ನಡದ ಯಶಸ್ವಿ ಚಿತ್ರ ‘ಕಿರಿಕ್ ಪಾರ್ಟಿ’ ಯಲ್ಲಿ ನಟಿಸಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಶ್ಮಿಕಾ ಮಂದಣ್ಣ ಸದ್ಯ ನ್ಯಾಷನಲ್ ಕ್ರಶ್ ಆಗಿದ್ದಾರೆ. ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸುತ್ತ ಯಶಸ್ಸಿನ ತುತ್ತತುದಿಗೇರಿದ್ದಾರೆ. ಇದಕ್ಕೆ ಕಿರಿಕ್​ ಪಾರ್ಟಿಯಲ್ಲಿ ನಟಿಸಿದ್ದೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಸಾನ್ವಿಯಾಗಿ ಸಾಯಿ ಪಲ್ಲವಿ ನಟಿಸಬೇಕಿತ್ತಂತೆ. ಹೌದು. ಹಳೇ ಸಂದರ್ಶನವೊಂದರಲ್ಲಿ ಖುದ್ದು ರಕ್ಷಿತ್ ಶೆಟ್ಟಿ ಈ ಬಗ್ಗೆ ಮಾತನಾಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

    ‘ಪ್ರೇಮಂ’ ಚಿತ್ರದಲ್ಲಿ ಸಾಯಿ ಪಲ್ಲವಿ ಮಾಡಿದ್ದ ಮಲರ್ ಪಾತ್ರದಿಂದ ಪ್ರೇರಣೆಗೊಂಡು ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಸಾನ್ವಿ ಪಾತ್ರ ಬರೆದುಕೊಂಡಿದ್ದೆವು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಆದರೆ ಯಾಕೆ ಸಾಯಿ ಪಲ್ಲವಿ ಜಾಗಕ್ಕೆ ರಶ್ಮಿಕಾ ಬರುವಂತಾಯಿತು ಎನ್ನುವುದನ್ನು ವಿವರಿಸಿದ್ದಾರೆ.

    ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ, ಸಂಯುಕ್ತಾ ಹೆಗ್ಡೆ ನಟನೆಯ ‘ಕಿರಿಕ್ ಪಾರ್ಟಿ’ ಬ್ಲಾಕ್‌ಬಸ್ಟರ್ ಆಗಿತ್ತು. ಈ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಒಳ್ಳೆ ಹೆಸರು ಬಂದಿತ್ತು. ‘ಕಿರಿಕ್ ಪಾರ್ಟಿ’ ಬಳಿಕ ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ ರಶ್ಮಿಕಾ ಬಳಿಕ ತೆಲುಗು ಚಿತ್ರರಂಗ ಪ್ರವೇಶಿಸಿದರು.

    ರಶ್ಮಿಕಾ ನಟಿಸಿದ ತೆಲುಗಿನ ಮೊದಲ ಸಿನಿಮಾ ಸದ್ದು ಮಾಡದಿದ್ದರೂ ‘ಗೀತಾಗೋವಿಂದಂ’ ಹಿಟ್ ಆಗಿ ಆಕೆಗೆ ಅಲ್ಲಿ ಒಳ್ಳೆಯ ಕ್ರೇಜ್ ಸೃಷ್ಟಿಯಾಯಿತು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಮುಂದೆ ಬಾಲಿವುಡ್ ಪ್ರವೇಶಿಸಿ ಗೆದ್ದರು. ‘ಅನಿಮಲ್’ ಹಿಟ್ ಆಗಿ ಬಿಟೌನ್‌ನಲ್ಲೂ ಹವಾ ಶುರುವಾಯಿತು.

    ರಶ್ಮಿಕಾ ನೀಡಿದ ಕೆಲ ಹೇಳಿಕೆಗಳು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ತಮ್ಮ ಮೊದಲ ಸಿನಿಮಾ ನಿರ್ಮಿಸಿದ ಪರಂವಃ ಸ್ಟುಡಿಯೋ ಹೆಸರು ಹೇಳಲು ಹಿಂದು ಮುಂದು ನೋಡಿದ್ದು ಭಾರೀ ಬೇಸರಕ್ಕೆ ಕಾರಣವಾಗಿತ್ತು. ನಾನು ಚಿತ್ರದಲ್ಲಿ ನಟಿಸಬೇಕು ಎಂದು ಚಿತ್ರತಂಡ ದುಂಬಾಲು ಬಿದ್ದಿತ್ತು ಎಂದಿದ್ದರು. ಬಳಿಕ ಸಂದರ್ಶನವೊಂದರಲ್ಲಿ ರಕ್ಷಿತ್​ ಶೆಟ್ಟಿ ಪರೋಕ್ಷವಾಗಿ ರಶ್ಮಿಕಾಗೆ ತಿರುಗೇಟು ಕೊಟ್ಟಿದ್ದರು.

    “ಪ್ರೇಮಂ ಸಿನಿಮಾ ನೋಡಿದಾಗ ನಾನು ಸಾಯಿ ಪಲ್ಲವಿ ಅವರ ದೊಡ್ಡ ಅಭಿಮಾನಿ ಆಗಿದ್ದೆ. ನಾವು ‘ಕಿರಿಕ್ ಪಾರ್ಟಿ’ ಸಿನಿಮಾ ಮಾಡುವಾಗ ಯಾರನ್ನು ಪಾತ್ರಕ್ಕೆ ಆಯ್ಕೆ ಮಾಡುವುದು ಎಂದಾಗ ಸಾಯಿ ಪಲ್ಲವಿ ಎಂದಿದ್ದೆ. ಆದರೆ ನನ್ನ ಮೇಲೆ ಒಂದೂವರೆ ಕೋಟಿ ಹಾಕೋಕೆ ನಿರ್ಮಾಪಕರು ಸಿದ್ಧರಿರಲಿಲ್ಲ. ಅಂತಾದ್ರಲ್ಲಿ ನಮ್ಮ ಬಜೆಟ್ 3 ಕೋಟಿ ರೂ. ನೀನು ನೋಡಿದರೆ ಸಾಯಿ ಪಲ್ಲವಿ ಅಂತೀಯಾ? ಎಂದು ರಿಷಬ್​ ಶೆಟ್ಟಿ ಹೇಳಿದ್ದಾದ್ದಾಗಿ ರಕ್ಷಿತ್​ ಹೇಳಿದ್ದರು.

    ರಕ್ಷಿತ್ ಶೆಟ್ಟಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದ್ದು ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. “ನೀವು ಆಗ ಹಣ ಹೂಡಿಕೆ ಮಾಡಿದ್ದರೆ ಈಗ ಕಷ್ಟಪಡುವ ಅಗತ್ಯ ಇರಲಿಲ್ಲ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

    ಛೇ, ಸಾಯಿ ಪಲ್ಲವಿ ಅವರನ್ನು ಸಾನ್ವಿ ಪಾತ್ರಕ್ಕೆ ಆಯ್ಕೆ ಮಾಡಬೇಕಿತ್ತು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. “ಸಾಯಿ ಪಲ್ಲವಿ ಆಯ್ಕೆ ಆಗಿದ್ದರೆ ಇವತ್ತು ರಶ್ಮಿಕಾ ಇಂಡಸ್ಟ್ರಿಯಲ್ಲೇ ಇರುತ್ತಿರಲಿಲ್ಲ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

    ಕಾಲೇಜು ದಿನಗಳಲ್ಲಿ ನಾನು ‘ಫ್ರೆಶ್ ಫೇಸ್’ ಕಾಂಟೆಸ್ಟ್‌ನಲ್ಲಿ ಗೆದ್ದಿದ್ದೆ. ಪೇಪರ್‌ನಲ್ಲಿ ನನ್ನ ಫೋಟೊ ನೋಡಿ ಕಿರಿಕ್ ಪಾರ್ಟಿ ತಂಡ ಸಾನ್ವಿ ಪಾತ್ರಕ್ಕೆ ನನ್ನನ್ನು ಸಂಪರ್ಕಿಸಿತ್ತು. ನಟಿಸೋಕೆ ಇಷ್ಟವಿಲ್ಲ ಎಂದಿದ್ದೆ. ಬಳಿಕ ಎಲ್ಲರ ಒತ್ತಾಯಕ್ಕೆ ಮಣಿದು ನಟಿಸಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts