ಮನೆಯಲ್ಲಿಯೇ ಸುಲಭವಾಗಿ ಈ ಲಿಪ್ ಬಾಮ್ ಮಾಡಿದ್ರೆ ನಿಮಗೆ ಲಿಪ್‌ಸ್ಟಿಕ್ ಅವಶ್ಯಕತೆಯೇ ಇರಲ್ಲ..| Homemade Lip Balm​​

Homemade Lip Balm​​
Published on

Homemade Lip Balm: ಬೇಸಿಗೆಯಲ್ಲಿ ನಿಮ್ಮ ತ್ವಚೆಗೆ ಸರಿಯಾಗಿ ಕಾಳಜಿ ಮಾಡದೆ ಇದ್ದರೆ ಹಲವಾರು ಬದಲಾವಣೆಯನ್ನು ನಾವು ಕಾಣಬಹುದು. ನಿಮ್ಮ ಮುಖಕ್ಕೆ ಎಷ್ಟು ಗಮನ ಕೊಡುತ್ತೇವೆಯೋ ಅಷ್ಟೇ ಗಮನ ಮುಖಕ್ಕೂ ಕೊಡುವುದು ಮುಖ್ಯ. ಟಿಗಳು ತುಂಬಾ ಮೃದುವಾಗಿರುತ್ತವೆ ಮತ್ತು ಬದಲಾಗುತ್ತಿರುವ ಹವಾಮಾನದ ಪರಿಣಾಮವು ತುಟಿಗಳ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಜನರು ತಮ್ಮ ತುಟಿಗಳಿಗೆ ನೈಸರ್ಗಿಕ ಬಣ್ಣವನ್ನು ನೀಡಲು ಹಲವು ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ, ಆದರೆ ಆ ಉತ್ಪನ್ನಗಳನ್ನು ಬಳಸುವುದರಿಂದ ನಿಮಗೆ ಹಾನಿಯಾಗಬಹುದು. ನೀವು ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿ, ನೈಸರ್ಗಿಕ ಲಿಪ್ ಬಾಮ್ಅನ್ನು ಸುಲಭವಾಗಿ ತಯಾರಿಸಬಹುದು. ಹಾಗಾದ್ರೆ ಅದನ್ನ ಮಾಡುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ.

ಲಿಪ್ ಬಾಮ್ ತಯಾರಿಸುವುದು ಹೇಗೆ?

ಬೀಟ್ರೂಟ್​​​ನಿಂದ ನೀವು ಲಿಪ್ ಬಾಮ್ ತಯಾರಿಸಬಹುದು. ಬೀಟ್ರೂಟ್ ತುಟಿಗಳಿಗೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ತುಟಿಗಳಿಗೆ ಸುರಕ್ಷಿತ ಮತ್ತು ನೈಸರ್ಗಿಕ ಆರೋಗ್ಯ ನೀಡುತ್ತದೆ.

ಬೇಕಾಗುವ ಪದಾರ್ಥಗಳು

ಬೀಟ್ರೂಟ್ ರಸ: 1 ಚಮಚ

ವಿಟಮಿನ್ ಇ ಕ್ಯಾಪ್ಸುಲ್: 1

ತೆಂಗಿನ ಎಣ್ಣೆ: 1 ಚಮಚ

ವ್ಯಾಸಲೀನ್: 1 ಟೀಸ್ಪೂನ್

ತಯಾರಿಸುವುದು ಹೇಗೆ?

ಲಿಪ್ ಬಾಮ್ ತಯಾರಿಸಲು, ಬೀಟ್ರೂಟ್ ಅನ್ನು ಸಿಪ್ಪೆ ತೆಗೆದು ಸ್ವಚ್ಛಗೊಳಿಸಿ. ನಂತರ ಬೀಟ್ರೂಟ್ ಕತ್ತರಿಸಿ ಮಿಕ್ಸರ್ನಲ್ಲಿ ರುಬ್ಬಿಕೊಳ್ಳಿ. ವ್ಯಾಸಲೀನ್ ಅನ್ನು ಸ್ವಲ್ಪ ಕರಗಿಸಿ. ಇದಾದ ನಂತರ ಬೀಟ್ರೂಟ್ನಿಂದ ರಸವನ್ನು ತೆಗೆದು ಒಂದು ಚಮಚ ರಸವನ್ನು ವ್ಯಾಸಲೀನ್ ಜೊತೆ ಮಿಶ್ರಣ ಮಾಡಿ. ಈಗ ಅದಕ್ಕೆ ವಿಟಮಿನ್ ಇ ಸೇರಿಸಿ. ಕರಗಿದ ತೆಂಗಿನ ಎಣ್ಣೆಯನ್ನು ಈ ಮಿಶ್ರಣಕ್ಕೆ ಹಾಕಿದ ನಂತರ ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಿ.

ಈ ರೀತಿಯಾಗಿ ನೀವು ಮನೆಯಲ್ಲಿಯೇ ನೈಸರ್ಗಿಕವಾದ ಲಿಪ್​​ ಬಾಮ್​​ನ್ನು ಸುಲಭವಾಗಿ ತಯಾರಿಸಬಹುದು. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net