

ಮುಂಬೈ: ರಿಲಯನ್ಸ್ ರಿಟೇಲ್ ವೆಂಚರ್ ಲಿಮಿಟೆಡ್‌ನ ನಿರ್ದೇಶಕಿ ಮತ್ತು ಪ್ರಸಿದ್ಧ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇಶಾ ಐಷಾರಾಮಿ ಬ್ರಾಂಡ್‌ಗಳು ಮತ್ತು ಕೋಟ್ಯಂತರ ರೂಪಾಯಿಗಳ ಮಾಲೀಕರಾಗಿದ್ದರೂ, ತನ್ನ ನಮ್ರತೆಯಿಂದಾಗಿ ಮಾಧ್ಯಮಗಳಲ್ಲಿ ಜನಪ್ರಿಯತೆ ಗಳಿಸಿದ್ದಾರೆ.
ಇತ್ತೀಚೆಗೆ ಇಶಾ ಅವರ ಸಹೋದರ ಅನಂತ್ ಅಂಬಾನಿ ಅವರ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳಿಂದ ಇಶಾ ಅವರ ಅನೇಕ ಲುಕ್ ರಿವೀಲ್ ಆಯಿತು. ಇದರಲ್ಲಿ ಇಶಾ ಅವರು ಕೋಟ್ಯಂತರ ಮೌಲ್ಯದ ಬ್ರಾಂಡ್ ಬಟ್ಟೆಗಳು ಮತ್ತು ಆಭರಣಗಳನ್ನು ಧರಿಸಿದ್ದರು. ಅದೊಂದೇ ದಿನವಲ್ಲ, ಸಾಮಾನ್ಯ ದಿನಗಳಲ್ಲೂ ಲಕ್ಷಗಟ್ಟಲೆ ಹಣ ಖರ್ಚು ಮಾಡಲು ಅಂಬಾನಿ ಪುತ್ರಿ ಹಿಂಜರಿಯುವುದಿಲ್ಲ ಎಂಬುದು ನಿಮಗೆ ತಿಳಿದಿದೆಯೇ. ಹೌದು, ಈ ಸಾರಿ ಇಶಾ ಧರಿಸಿರುವ ಸಿಂಪಲ್ ಡ್ರೆಸ್ ಬೆಲೆ ನಿಮ್ಮನ್ನು ಬೆರಗುಗೊಳಿಸಲಿದೆ.
ಡಿನ್ನರ್ ಡೇಟ್ ಗೆ ಹೋಗಿದ್ದ ಇಶಾ
ಇತ್ತೀಚೆಗೆ ಇಶಾ ಅಂಬಾನಿ ತಮ್ಮ ಪತಿ ಆನಂದ್ ಪಿರಾಮಲ್ ಅವರೊಂದಿಗೆ ಡಿನ್ನರ್ ಡೇಟ್ ಗೆ ಮುಂಬೈನ ಬಾಸ್ಟಿಯನ್ ರೆಸ್ಟೋರೆಂಟ್‌ಗೆ ತೆರಳಿದ್ದರು. ಅಂದು ತಡರಾತ್ರಿ, ಆನಂದ್ ಪಿರಮಾಲ್ ಬೂದು ಬಣ್ಣದ ಪ್ಯಾಂಟ್ ಮತ್ತು ಬಿಳಿ ಶರ್ಟ್‌ನಲ್ಲಿ ತುಂಬಾ ಕ್ಯಾಶುಯಲ್ ಆಗಿ ಕಾಣಿಸಿಕೊಂಡರೆ, ಇಶಾ ಅಂಬಾನಿ ಹೂವಿನ ಪ್ರಿಂಟ್ ಇರುವ ಕಪ್ಪು ಬಣ್ಣದ ಸಿಂಪಲ್ ಟ್ಯೂನಿಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡರು.
ಉಡುಗೆ ಬೆಲೆಯೆಷ್ಟು?
ಇಶಾ ಅಂಬಾನಿಯ ಈ ಸಿಂಪಲ್ ಬ್ಲಾಕ್ ಕಲರ್ ಟ್ಯೂನಿಕ್ ಡ್ರೆಸ್ ಬೆಲೆ ತಿಳಿದರೆ ನೀವು ಬೆರಗಾಗುತ್ತೀರಿ. ಹೌದು, ಅಂಬಾನಿ ರಾಜಕುಮಾರಿ ಧರಿಸಿರುವ, ಸರಳವಾಗಿ ಕಾಣುವ ಈ ಉಡುಗೆ ಪ್ರಸಿದ್ಧ ವಿದೇಶಿ ಬ್ರಾಂಡ್ ಆಸ್ಕರ್ ಡಿ ಲಾ ರೆಂಟಾ. ಪಫ್ ಸ್ಲೀವ್ಸ್ ಮತ್ತು ರೌಂಡ್ ನೆಕ್‌ಲೈನ್ ಹೊಂದಿರುವ ಈ ಡ್ರೆಸ್‌ನ ಬೆಲೆ 1,189.99 USD ಅಂದರೆ 99,148 ರೂ.
ಇಶಾ ಅಂಬಾನಿ ಒಟ್ಟು ನಿವ್ವಳ ಮೌಲ್ಯ
ವರದಿಯ ಪ್ರಕಾರ, ಇಶಾ ಅಂಬಾನಿ ಅವರ ಒಟ್ಟು ನಿವ್ವಳ ಮೌಲ್ಯ 100 ಮಿಲಿಯನ್ ಡಾಲರ್. ಅಂದರೆ ಸುಮಾರು 829.5 ಕೋಟಿ ರೂ. 2018 ರಲ್ಲಿ ಇಶಾ ಅಂಬಾನಿ ಆನಂದ್ ಪಿರಾಮಲ್ ಅವರನ್ನು ವಿವಾಹವಾದರು. 2022 ರಲ್ಲಿ, ಇಶಾ ಮತ್ತು ಆನಂದ್ ಅವಳಿ ಮಕ್ಕಳಾದ ಆದ್ಯ ಮತ್ತು ಕೃಷ್ಣ ಅವರ ಪೋಷಕರಾದರು.