More

    54 ವರ್ಷಗಳ ನಂತರ ಏಪ್ರಿಲ್‌ 8ರಂದು ಸಂಭವಿಸಲಿರುವ ಸೂರ್ಯಗ್ರಹಣದ ವಿಶೇಷತೆ, ಭಾರತದ ಮೇಲೆ ಬೀರಬಹುದಾದ ಪರಿಣಾಮಗಳು…

    ಬೆಂಗಳೂರು: ಈ ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 8, 2024 ರಂದು ಸಂಭವಿಸಲಿದೆ. ಈ ಸೂರ್ಯಗ್ರಹಣವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಏಕೆಂದರೆ 54 ವರ್ಷಗಳ ನಂತರ ಇಂತಹ ದೀರ್ಘ ಸೂರ್ಯಗ್ರಹಣ ಸಂಭವಿಸಲಿದೆ. ಏಪ್ರಿಲ್ 8 ರಂದು ಸಂಭವಿಸುವ ಈ ಸೂರ್ಯಗ್ರಹಣವು 4 ಗಂಟೆ 25 ನಿಮಿಷಗಳಿರುತ್ತದೆ. ಈ ಗ್ರಹಣವು ತುಂಬಾ ವಿಭಿನ್ನವಾಗಿದೆ. ಏಕೆಂದರೆ ಗ್ರಹಣ ಅವಧಿಯಲ್ಲಿ ಭೂಮಿಯ ಮೇಲೆ 7 ನಿಮಿಷಗಳ ಕಾಲ ಸಂಪೂರ್ಣ ಕತ್ತಲೆ ಇರುತ್ತದೆ. ಈ ಸೂರ್ಯಗ್ರಹಣದ ಬಗ್ಗೆ ಅಮೆರಿಕದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ.

    ಸೂರ್ಯಗ್ರಹಣದ ಸಂದರ್ಭದಲ್ಲಿ ಅಮೆರಿಕದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಅವಧಿಯಲ್ಲಿ ಅಮೆರಿಕದ ಅನೇಕ ಕಚೇರಿಗಳು ಸಹ ಕ್ಲೋಸ್ ಆಗುತ್ತವೆ. ಹಾಗಾದರೆ ಈ ಸೂರ್ಯಗ್ರಹಣವು ಭಾರತದ ಮೇಲೆ ಯಾವ ರೀತಿ ಪರಿಣಾಮವನ್ನು ಬೀರುತ್ತದೆ ಎಂದು ನೀವು ಆಶ್ಚರ್ಯಪಡುತ್ತಿದ್ದರೆ ಇಲ್ಲಿದೆ ನೋಡಿ ವಿವರ.

    ಭಾರತದಲ್ಲಿ ಸೂರ್ಯಗ್ರಹಣದ ಪರಿಣಾಮ

    ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 8, 2024 ರಂದು ಸಂಭವಿಸಲಿದೆ. ಮೆಕ್ಸಿಕೋ, ಕೆನಡಾ, ಐರ್ಲೆಂಡ್, ಇಂಗ್ಲೆಂಡ್ ಮತ್ತು ಅಮೆರಿಕದಂತಹ ದೇಶಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರಿಸುತ್ತದೆ. ಈ ದೇಶಗಳಲ್ಲಿ ಈ ಸೂರ್ಯಗ್ರಹಣವು ಮಧ್ಯಾಹ್ನ 2:15 ಕ್ಕೆ ಪ್ರಾರಂಭವಾಗುತ್ತದೆ. ಭಾರತೀಯ ಕಾಲಮಾನದ ಪ್ರಕಾರ ಏಪ್ರಿಲ್ 8ರಂದು ರಾತ್ರಿ 9:12ಕ್ಕೆ ಗ್ರಹಣ ಆರಂಭವಾಗಲಿದೆ. ಅಂದರೆ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

    ನಮ್ಮ ಜ್ಯೋತಿಷಿಗಳ ಪ್ರಕಾರ…

    ಗ್ರಹಣವು ಪ್ರಾರಂಭವಾದಾಗ ಆಗ ಭಾರತದಲ್ಲಿ ರಾತ್ರಿಯಾಗಿರುತ್ತದೆ, ಆದ್ದರಿಂದ ಸೂರ್ಯಗ್ರಹಣವು ಇಲ್ಲಿ ಅಗೋಚರವಾಗಿರುತ್ತದೆ. ಅಂದರೆ ಈ ಸೂರ್ಯಗ್ರಹಣ ಭಾರತದಲ್ಲಿ ಮಾನ್ಯವಾಗುವುದಿಲ್ಲ. ಆದ್ದರಿಂದ ಸೂತಕ ಕಾಲವೂ ಇಲ್ಲಿ ಮಾನ್ಯವಾಗುವುದಿಲ್ಲ. ಜ್ಯೋತಿಷಿಗಳ ಪ್ರಕಾರ, ಭಾರತದಲ್ಲಿರುವ ಜನರು ಈ ಸೂರ್ಯಗ್ರಹಣದ ಬಗ್ಗೆ ಭಯಪಡುವ ಅಗತ್ಯವಿಲ್ಲ. ಏಕೆಂದರೆ ಭಾರತವು ಈ ಗ್ರಹಣದಿಂದ ಸಂಪೂರ್ಣವಾಗಿ ಅಸ್ಪೃಶ್ಯವಾಗಿ ಉಳಿಯಲಿದೆ.

    ನಾಸಾದಿಂದ ನೇರ ಪ್ರಸಾರ  

    ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ವರ್ಷದ ಮೊದಲ ಸಂಪೂರ್ಣ ಸೂರ್ಯಗ್ರಹಣಕ್ಕೆ ವಿಶೇಷ ಸಿದ್ಧತೆ ನಡೆಸಿದೆ. ನಾಸಾ ಈ ಗ್ರಹಣವನ್ನು ನೇರಪ್ರಸಾರ ಮಾಡಲಿದ್ದು, ಭಾರತದಲ್ಲಿ ಕುಳಿತುಕೊಂಡೇ ಈ ಗ್ರಹಣದ ವೇಳೆ ನಡೆಯುವ ಖಗೋಳ ಚಟುವಟಿಕೆಗಳ ಮೇಲೆ ನಿಗಾ ಇಡಬಹುದಾಗಿದೆ. ನಾಸಾದ ಲೈವ್ ಟೆಲಿಕಾಸ್ಟ್ ಏಪ್ರಿಲ್ 8 ರಂದು ಬೆಳಗ್ಗೆ 10:30 ರಿಂದ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 9 ರಂದು ಮಧ್ಯಾಹ್ನ 1:30 ರವರೆಗೆ ಮುಂದುವರಿಯುತ್ತದೆ. ಇದರೊಂದಿಗೆ, ಈ ನೇರ ಪ್ರಸಾರದ ಸಮಯದಲ್ಲಿ #askNASA ನೊಂದಿಗೆ ಈ ಗ್ರಹಣಕ್ಕೆ ಸಂಬಂಧಿಸಿದ ಖಗೋಳ ಘಟನೆಗಳ ಕುರಿತು ನೀವು ಪ್ರಶ್ನೆಗಳನ್ನು ಕೇಳಬಹುದು.

    ಬೇರೆಯವರ ಮನೆಯ ಹೆಸರನ್ನು ಯಾರಾದರೂ ಬದಲಾಯಿಸಿದರೆ ಅದು ಅವರದಾಗುತ್ತದೆಯೇ?: ಚೀನಾಗೆ ಛೀಮಾರಿ ಹಾಕಿದ ಕೇಂದ್ರ ಸಚಿವರು    

    ಭೋಜ್‌ಪುರಿಯ ಟಾಪ್ 10 ಬೋಲ್ಡ್ ನಟಿಯರು, ಸೆನ್ಸೇಷನ್ ಸೃಷ್ಟಿಸಿದ ಅವರ ಟಾಪ್‌ಲೆಸ್ ಫೋಟೋಗಳು  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts