More

    ಬಾಹ್ಯಾಕಾಶದಿಂದ ಸೂರ್ಯಗ್ರಹಣ ಹೇಗಿತ್ತು? ವಿಡಿಯೋ ಹಂಚಿಕೊಂಡ ನಾಸಾ, 2024ರಲ್ಲಿ ಎಷ್ಟು ಗ್ರಹಣಗಳು ಸಂಭವಿಸಲಿವೆ ಗೊತ್ತಾ?

    ಅಮೆರಿಕ: ಮೆಕ್ಸಿಕೋ, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಕೆಲವು ಭಾಗಗಳಲ್ಲಿ ಲಕ್ಷಾಂತರ ಜನರು ಏಪ್ರಿಲ್ 8, ಸೋಮವಾರದಂದು ಅಪರೂಪದ ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಿದರು. ಇದು 2024 ರ ಐತಿಹಾಸಿಕ ಖಗೋಳ ಘಟನೆಯಾಗಿದೆ. ಇದು ಭಾರತದಲ್ಲಿ ಗೋಚರಿಸಲಿಲ್ಲ. ಈಗ ಸಂಪೂರ್ಣ ಸೂರ್ಯಗ್ರಹಣವು 2044 ರವರೆಗೆ ಯುಎಸ್ ನಲ್ಲಿ ಮತ್ತೆ ಗೋಚರಿಸುವುದಿಲ್ಲ. ಅಂದಹಾಗೆ ಬಾಹ್ಯಾಕಾಶದಿಂದ ಸೂರ್ಯಗ್ರಹಣದ ಅದ್ಭುತ ನೋಟವನ್ನು ನೀವು ಎಂದಾದರೂ ನೋಡಿದ್ದೀರಾ?       

    ಇಲ್ಲಿದೆ ನೋಡಿ ವಿಡಿಯೋ

    https://twitter.com/i/broadcasts/1yNGaZVzQVqJj

    ಸೂರ್ಯಗ್ರಹಣದ ಖಗೋಳ ಘಟನೆಯನ್ನು ತೋರಿಸಲು ನಾಸಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದೆ. ನ್ಯೂಯಾರ್ಕ್‌ನ ಪಶ್ಚಿಮ ಮತ್ತು ಉತ್ತರ ಪ್ರದೇಶಗಳಲ್ಲಿ ಸಂಪೂರ್ಣ ಗ್ರಹಣ ಕಂಡುಬಂದಿದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ವಿಶೇಷ ಕನ್ನಡಕಗಳ ವ್ಯವಸ್ಥೆ ಮಾಡಲಾಗಿತ್ತು. ಆಕಾಶದಿಂದ ಈ ಅದ್ಭುತ ನೋಟವನ್ನು ನೋಡಲು ವಿಶೇಷ ವಿಮಾನಗಳ ವ್ಯವಸ್ಥೆಯಿತ್ತು. ಈ ವಿಮಾನಗಳಲ್ಲಿ ಕುಳಿತಿದ್ದ ಜನರು ಆಕಾಶದಿಂದ ಸೂರ್ಯಗ್ರಹಣ ನೋಡಿದರು.     

    ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ?
    ಚಂದ್ರ, ಭೂಮಿ ಮತ್ತು ಸೂರ್ಯ ನೇರ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬರುತ್ತಾನೆ. ಸೂರ್ಯನ ಬೆಳಕು ಭೂಮಿಯನ್ನು ತಲುಪಲು ಸಾಧ್ಯವಾಗುವುದಿಲ್ಲ.

    2024ರಲ್ಲಿ  ಸಂಭವಿಸಲಿವೆ 4 ಗ್ರಹಣಗಳು 

    ದಿನಾಂಕ ಗ್ರಹಣ
    ಮಾರ್ಚ್ 25 ಚಂದ್ರ ಗ್ರಹಣ
    8 ಏಪ್ರಿಲ್ ಸೂರ್ಯ ಗ್ರಹಣ
    18 ಸೆಪ್ಟೆಂಬರ್ ಭಾಗಶಃ ಚಂದ್ರಗ್ರಹಣ
    2 ಅಕ್ಟೋಬರ್ ಸೂರ್ಯ ಗ್ರಹಣ

    21 ವರ್ಷಗಳ ನಂತರ ಸುಕ್ಮಾದಲ್ಲಿರುವ ರಾಮ ದೇವಾಲಯದಲ್ಲಿ ಮತ್ತೆ ಪೂಜೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts