UMANG ಆ್ಯಪ್ ಇದ್ದರೆ ಸಾಕು! ಈಗ ಸುಲಭವಾಗಿ EPF ಪಾಸ್​ಬುಕ್​ ವಿವರ ಪಡೆಯಬಹುದು; ಈ ಕ್ರಮ ಅನುಸರಿಸಿ

ವಿಜಯವಾಣಿ - 2025-05-19T184701.414
Published on

EPF: ಇಪಿಎಫ್​ಓ ​​ಉದ್ಯೋಗಿಗಳಿಗೆ ಈಗ ಹೊಸ ದೃಢೀಕರಣ ತಂತ್ರಜ್ಞಾನವನ್ನು ಪರಿಚಯಿಸಿರುವ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO), ಉದ್ಯೋಗಿಗಳು ಈಗ ಮುಖ ದೃಢೀಕರಣದ ಮೂಲಕ ತಮ್ಮ ಸದಸ್ಯತ್ವಕ್ಕಾಗಿ ಭವಿಷ್ಯ ನಿಧಿ ಖಾತೆ ಸಂಖ್ಯೆ (UAN) ಸೇವೆಗಳನ್ನು ರಚಿಸಬಹುದು ಎಂದು ಕೆಲವು ದಿನಗಳ ಹಿಂದೆಯಷ್ಟೇ ತಿಳಿಸಿತು. ಈ ಬಗ್ಗೆ ಕಾರ್ಮಿಕ ಸಚಿವಾಲಯ ಕೂಡ ಸ್ಪಷ್ಟಪಡಿಸಿತ್ತು. ಈಗ ಉಮಾಂಗ್ ಆ್ಯಪ್​ ಮೂಲಕ ಇಪಿಎಫ್​ ಪಾಸ್​ಬುಕ್ ಪಡೆಯುವುದು ಬಹಳ ಸುಲಭ ಹಾಗೂ ಸರಳವಾಗಿದೆ.  ​

ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್) ಪಾಸ್‌ಬುಕ್​ನ ಈಗ ಸುಲಭವಾಗಿ ಪಡೆಯಬಹುದಾಗಿದೆ. ಇಪಿಎಫ್‌ಒ ಪೋರ್ಟಲ್ ಜೊತೆಗೆ, ಇಪಿಎಫ್‌ಒ ಅಪ್ಲಿಕೇಶನ್, ಎಸ್‌ಎಂಎಸ್, ಈಗ ಇಪಿಎಫ್ ಖಾತೆಗಳನ್ನು ಉಮಾಂಗ್ ಅಪ್ಲಿಕೇಶನ್ ಮುಖಾಂತರ ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಈ ಅಪ್ಲಿಕೇಶನ್‌ನಲ್ಲಿ ಪಿಎಫ್ ಖಾತೆ ಚಟುವಟಿಕೆಯನ್ನು ಗಮನಿಸಹಬಹುದಾಗಿದೆ.

ಪಾಸ್​ಬುಕ್​ ವಿವರ ಪಡೆಯುವುದೇಗೆ?

  • ಉಮಾಂಗ್ ಹೋಮ್​ ಪೇಜ್​ ಪ್ರವೇಶಿಸಿ, ಸೇವೆಗಳ ವಿಭಾಗವನ್ನು ಆಯ್ಕೆ ಮಾಡಿ.
  • ಸರ್ವಿಸ್​ ಪುಟ ತೆರೆದ ನಂತರ ಇಪಿಎಫ್‌ಒ ವಿಭಾಗ ಹುಡುಕಿ
  • ಈಗ 'ವ್ಯೂವ್ ಪಾಸ್‌ಬುಕ್' ಮೇಲೆ ಕ್ಲಿಕ್ ಮಾಡಿ.
  • ಈಗ ನೀವು ಪಾಸ್‌ಬುಕ್​ಗೆ ಪ್ರವೇಶಿಸಿ, ಡೌನ್‌ಲೋಡ್ ಮಾಡಿಕೊಳ್ಳಬಹುದು.
  • ಯುಎಎನ್ ನೋಂದಾಯಿಸಿ, ನಂತರ ಒಟಿಪಿಗಾಗಿ ಕ್ಲಿಕ್ ಮಾಡಿ ಮತ್ತು ಸಲ್ಲಿಸಿ.
  • ಪಾಸ್‌ಬುಕ್ ಡೌನ್‌ಲೋಡ್ ಮಾಡಲು ನಿಮ್ಮ ಸದಸ್ಯ ಐಡಿಯನ್ನು ನಮೂದಿಸಿ.
  • ಪಾಸ್‌ಬುಕ್ ಸ್ಕ್ರೀನ್​ ಮೇಲೆ ನಿಮ್ಮ ಇಪಿಎಫ್/ಇಪಿಎಫ್‌ಒ ಪಾಸ್‌ಬುಕ್ ಬ್ಯಾಲೆನ್ಸ್ ನೋಡಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net