ಪ್ರಥಮ ಬಾರಿಗೆ ಭಾರತದಲ್ಲಿ ಯೋಗಾಸನ ವಿಶ್ವಕಪ್; 40 ದೇಶಗಳ 150ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ

Yogasana
Published on

ಆನೇಕಲ್: ಯೋಗಾಸನ ವಿಶ್ವಕಪ್​ ಪ್ರಥಮ ಬಾರಿಗೆ ಭಾರತದಲ್ಲಿ ನಡೆಯುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲೇ ಅದಕ್ಕೆ ವೇದಿಕೆ ಸೃಷ್ಟಿಯಾಗಿದೆ. ಕಳೆದ ವರ್ಷ ಚೀನಾದ ಬೀಜಿಂಗ್​ನಲ್ಲಿ ನಡೆದಿದ್ದ ಯೋಗಾಸನ ವಿಶ್ವಕಪ್​ ಈ ಸಲ ಬೆಂಗಳೂರಿನ ಹೊರವಲಯದ ಜಿಗಣಿಯ ಪ್ರಶಾಂತಿ ಕುಟೀರದಲ್ಲಿ ನಡೆಯುತ್ತಿರುದೆ. ಈ ಸಲದ ಯೋಗಾಸನ ವಿಶ್ವಕಪ್ 2022ರಲ್ಲಿ 40 ದೇಶಗಳ 150ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.

ಪೂರ್ವನಿಗದಿಯಂತೆ ನಿನ್ನೆಯೇ ಈ ಯೋಗಾಸನ ವಿಶ್ವಕಪ್​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರ ಅನುಪಸ್ಥಿತಿಯಲ್ಲಿ ನಿನ್ನೆ ಈ ವಿಶ್ವಕಪ್ ಚಾಲನೆ ಪಡೆದುಕೊಂಡಿತ್ತು.

ನಿನ್ನೆ ಬೆಳಗಾವಿಯಿಂದ ಬರುವುದು ವಿಳಂಬವಾಗಿದ್ದರಿಂದ ಇಂದು ಆಗಮಿಸಿರುವ ಸಿಎಂ ಬೊಮ್ಮಾಯಿ, ಯೋಗಾಸನ ವಿಶ್ವಕಪ್​ ಉದ್ಘಾಟನೆ ನಡೆಸಿದರು. ಯೋಗಾಸನದ ಮಹತ್ವದ ಕುರಿತು ಸಿಎಂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net