

ಕುಂದಾಪುರ: ಜಾಗತಿಕ ಲೋಕಕ್ಕೆ ಯೋಗ ಭಾರತದ ಬಹುದೊಡ್ಡ ಕೊಡುಗೆಯಾಗಿದ್ದು, ಹಲವು ರೋಗಗಳಿಗೂ ಉತ್ತಮವಾದ ಔಷಧವಾಗಿ ಪರಿಣಮಿಸಿದೆ.ವಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗವು ಉತ್ತಮ ಸಾಧನವಾಗಿದ್ದು ಪ್ರತಿನಿತ್ಯ ಯೋಗ ವಾಡುವುದರಿಂದ ಆರೋಗ್ಯವಂತರಾಗಿ ಉತ್ತಮ ವ್ಯಕ್ತಿತ್ವ ಹೊಂದಬಹುದು. ಇಂದು ಆಧುನಿಕ ವೈದ್ಯಕೀಯ ಪದ್ದತಿಯು ಗುಣಪಡಿಸಲಾಗದ ಹಲವಾರು ರೋಗಗಳಿಗೆ ಯೋಗವು ರಾಮಬಾಣವಾಗಿರುವುದರಿಂದ ವಿಶ್ವ ವಾನ್ಯತೆ ಪಡೆದಿದೆ ಎಂದು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ
ಕೋಟೇಶ್ವರ ಯಡಾಡಿಮತ್ಯಾಡಿಯಲ್ಲಿನ ಸುಜ್ಞಾನ ಪದವಿಪೂರ್ವ ಕಾಲೇಜು ಮತ್ತು ವಿದ್ಯಾರಣ್ಯ ಆಂಗ್ಲ ವಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥೆ ಸಂಸ್ಕೃತ ಶಿಕ್ಷಕ ರಜತ್ ಭಟ್ ಮಕ್ಕಳಿಗೆ ಯೋಗ ಶಿಕ್ಷಣದ ಮಹತ್ವ ಮತ್ತು ಪ್ರಾಮುಖ್ಯತೆ ಕುರಿತು ವಾಹಿತಿ ನೀಡಿದರು.
ಸಂಸ್ಥೆ ದೈಹಿಕ ಶಿಕ್ಷಕ ಸತೀಶ್ ಕುವಾರ್ ಮತ್ತು ಸೂರ್ಯ ಅವರ ವಾರ್ಗದರ್ಶನದಲ್ಲಿ ಮಕ್ಕಳು ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು.