ಕೋಡಿ ಹೊಸಬೆಂಗ್ರೆ ಅಂಗನವಾಡಿ ಕೇಂದ್ರದಲ್ಲಿ ಯೋಗ ದಿನ

kota (2)
Published on

ಕೋಟ: ಕೋಡಿ ಗ್ರಾಪಂ ಅಧ್ಯಕ್ಷೆ ಗೀತಾ ಖಾರ್ವಿ ನೇತೃತ್ವದಲ್ಲಿ ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನೆ ಮಾರ್ಗದರ್ಶನದಲ್ಲಿ ಹೊಸಬೆಂಗ್ರೆ ಅಂಗನವಾಡಿ ಕೇಂದ್ರದಲ್ಲಿ ಯೋಗ ದಿನ ಆಚರಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್.ಕುಂದರ್ ಯೋಗದ ಮಹತ್ವ ಹಾಗೂ ಅದರ ಆಯಾಮಗಳನ್ನು ತಿಳಿಸಿ ಯೋಗ ಕಾರ್ಯಕ್ರಮ ನೆರವೇರಿಸಿದರು. ಬಾಲವಿಕಾಸ ಸಮಿತಿ ಸದಸ್ಯೆ ನಿರ್ಮಲಾ, ಆಶಾ ಕಾರ್ಯಕರ್ತೆ ಜ್ಯೋತಿ, ಸಂಜೀವಿನಿ ಒಕ್ಕೂಟ ಮಾಜಿ ಅಧ್ಯಕ್ಷೆ ದೀಪಾ ಆರ್.ಖಾರ್ವಿ, ತಾಯಂದಿರರಾದ ಮಲ್ಲಿಕಾ, ರೇಖಾ, ಶ್ರುತಿ, ಜ್ಯೋತಿ ಎಲ್., ರೇಖಾ ಖಾರ್ವಿ ಹಾಗೂ ಸ್ತ್ರಿಶಕ್ತಿ ಸಂಘದ ಸದಸ್ಯರಾದ ಸುಜಾತ ಖಾರ್ವಿ, ಶಾರದಾ, ಕುಸುಮಾ, ಅಂಗನವಾಡಿ ಪುಟಾಣಿಗಳು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net