ಯೋಗ ಉತ್ಸವ ಕರಪತ್ರ ಬಿಡುಗಡೆ

Bdk_Yoga Festival
Published on

ಬದಿಯಡ್ಕ: ಯೋಗಾಸನ ಭಾರತ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಮೇ 24 ಮತ್ತು 25ರಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ನಡೆಯಲಿರುವ ಕಾಸರಗೋಡು ಜಿಲ್ಲಾ ಯೋಗ ಉತ್ಸವ 2025ರ ಕರಪತ್ರವನ್ನುಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿ ಇತ್ತೀಚೆಗೆ ಬಿಡುಗಡೆಗೊಳಿಸಿದರು.

ಸಂಸ್ಥೆಯ ಜಿಲ್ಲಾಧ್ಯಕ್ಷ ರವಿಶಂಕರ್ ನೆಗಳಗುಳಿ ಅಧ್ಯಕ್ಷತೆ ವಹಿಸಿದ್ದರು. ದೇಲಂಪಾಡಿ ಯೋಗ ಪ್ರತಿಷ್ಠಾನ ಮತ್ತು ಕಾಸರಗೋಡಿನ ಯೋಗ ಫಾರ್ ಕಿಡ್ಸ್ ಸಹಯೋಗದಲ್ಲಿ ಉತ್ಸವ ನಡೆಯಲಿದೆ.

ಯೋಗ ಉತ್ಸವದ ಅಂಗವಾಗಿ ಯೋಗ, ರಸಪ್ರಶ್ನೆ, ಚಿತ್ರ ರಚನೆ ಸ್ಪರ್ಧೆ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಪಾಕ ತಜ್ಞರಿಂದ ಆಹಾರ ಮೇಳ, ಚಿತ್ರ ಪ್ರದರ್ಶನ, ಪುಸ್ತಕ ಮೇಳ ಹಾಗೂ ಮಕ್ಕಳಿಗಾಗಿ ಆಸಕ್ತಿದಾಯಕ ಕ್ರೀಡಾ ಜಗತ್ತು ಆಯೋಜಿಸಲಾಗಿದೆ. ದೇಶ-ವಿದೇಶದ ಅನೇಕ ಯೋಗಪಟುಗಳು ಉತ್ಸವಕ್ಕೆ ಆಗಮಿಸಲಿದ್ದಾರೆ.

ಯೋಗಾಸನ ಕಾಸರಗೋಡು ಸಂಸ್ಥೆಯ ಉಪಾಧ್ಯಕ್ಷೆ ಡಾ.ಸುಪ್ರಿಯಾ ಕೇಶವ್ ಸ್ವಾಗತಿಸಿದರು. ಪುರುಷೋತ್ತಮ ಕಾಸರಗೋಡು ವಂದಿಸಿದರು. ಪ್ರತಿನಿಧಿಗಳಾದ ವಿನಯ್ ಪಾಲ್, ಕವಿತಾ, ದಿವ್ಯಾ ಶರ್ಮ, ಡಾ.ಶೈನಾ ರಾಜೇಶ್, ವಿಜಯನ್ ಉಪಸ್ಥಿತರಿದ್ದರು. ಮಾಹಿತಿಗೆ ಪದಾಧಿಕಾರಿಗಳನ್ನು 9995541436, 9446774845 ಸಂಪರ್ಕಿಸಲು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net