ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಗ್ರಾಮದ ಕುಕ್ಕುಡೇಲು ಎಂಬಲ್ಲಿ ತೇಜಸ್ವಿನಿ ಎಂಬುವರ ತೋಟಕ್ಕೆ ಅಕ್ರಮ ಪ್ರವೇಶಿಸಿ ಕೃಷಿಹಾನಿ ಮಾಡಿ, ಹಲವು ಸೊತ್ತು ಕಳವುಗೈದು ಜೀವ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿದ 9 ಮಂದಿ ಆರೋಪಿಗಳಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಮಾ.12ರಂದು ಶಶಿಧರ್ ಪೂಜಾರಿ, ಅಶೋಕ್ ಪೂಜಾರಿ, ಕೃಷ್ಣಪ್ಪ ಪೂಜಾರಿ, ಪ್ರವೀಣ್ ಪೂಜಾರಿ, ಪುಷ್ಪರಾಜ್, ಸಾವಿತ್ರಿ, ಉಷಾ, ಚಂದ್ರಾವತಿ, ಬಾಬು ಪೂಜಾರಿ, ರಾಧಾಕೃಷ್ಣ ಭಂಡಾರಿ ಮತ್ತಿತರರು ಸೇರಿ ತಮ್ಮ ಅಡಕೆ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಜಮೀನು ಬದಿಯ ಗೇಟ್ ಪಿಲ್ಲರ್ ಧ್ವಂಸಗೊಳಿಸಿ ಕೃಷಿ ನಾಶ ಮಾಡಿದ್ದಾರೆ. ಶೆಡ್‌ನಲ್ಲಿದ್ದ ಪಂಪ್, ಕಳೆಹಚ್ಚುವ ಯಂತ್ರ, ಪಿವಿಸಿ ಪೈಪ್, ಡ್ರಿಪ್ ಪೈಪ್, ಹಾರೆ, ಪಿಕ್ಕಾಸು, ಅಡಕೆಗೆ ಔಷಧಿ ಸಿಂಪಡಿಸುವ ಯಂತ್ರ, ನೀರಿನ ಸ್ಟೀಲ್ ಕ್ಯಾನ್, ಗೇಟ್ ಮೊದಲಾದ ಸೊತ್ತು ಕಳವು ಮಾಡಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ತೇಜಸ್ವಿನಿ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪೈಕಿ ರಾಧಾಕೃಷ್ಣ ಭಂಡಾರಿ ಹೊರತುಪಡಿಸಿ ಉಳಿದ 9 ಮಂದಿ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ವಕೀಲ ಮಹೇಶ್ ಕಜೆ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಪಾಳುಬಿದ್ದ ಭರಣಿಕೆರೆ ಅಭಿವೃದ್ಧಿ : ಕೊಣಾಜೆಯಲ್ಲಿ ನೀಗಿತು ನೀರಿನ ಬವಣೆ : ಸೌಂದರ್ಯಕ್ಕೆ ಬೇಕಿದೆ ಅನುದಾನ
ನಗ್ನ ಚಿತ್ರ ತೆಗೆದ ಯುವಕನ ಬಂಧನ : ಮಹಿಳೆಗೆ ಮತ್ತು ಬರಿಸುವ ಪಾನೀಯ ನೀಡಿ ಕೃತ್ಯ