

ಮಂಜೇಶ್ವರ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮಂಗಳೂರು ವತಿಯಿಂದ ತೀಯಾ ಸಮಾಜ ಭವನ ಉದ್ಯಾವರದಲ್ಲಿ 48 ದಿನಗಳ ಯೋಗ ಶಿಕ್ಷಣ ತರಬೇತಿ ಆರಂಭಗೊಂಡಿತು.
ತೀಯಾ ಸಮಾಜ ಭವನ ಅಧ್ಯಕ್ಷ ನೀಲಯ್ಯ ಪೂಮನ್ ಉದ್ಘಾಟಿಸಿದರು. ಶೋಭಾ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಿಂತನ ಪ್ರಮುಖ್ ಸಂದ್ಯೋಜಾತಾ, ಗಣೇಶ್ ಪಾವೂರು, ವಿಶ್ವನಾಥ ಶೆಟ್ಟಿ ಕುಂಜತ್ತೂರು, ಯಶೋದಾ ಕುಂಜತ್ತೂರು, ಶಿಲ್ಪಾ ಕುಂಜತ್ತೂರು ಅನುಭವ ಹಂಚಿಕೊಂಡರು.
ನೇತ್ರಾವತಿ ವಲಯ ಸಂಯೋಜಕ ಜಯರಾಮ ಉಳ್ಳಾಲ, ಪ್ರತಾಪ್ ಉಳ್ಳಾಲ, ಶಿಕ್ಷಕ ಶೈಲೇಶ್ ಬಡಾಜೆ, ಸುನೀಲ್, ವಿಶಾಲಾಕ್ಷಿ, ಮೋಹನ್, ರಂಜನಿ, ಸುರೇಶ್, ಕಿರಣ್, ಹೇಮಂತ್, ನಿರಂಜನ್, ಮಾಧವ, ಕುಂಜತ್ತೂರು ಶಾಖೆ ಸಂಚಾಲಕ ಹೇಮಂತ್, ಸ್ವಾತಿ, ಸುಪ್ರಿತಾ, ವಿದ್ಯಾ ಮತ್ತಿತರು ಭಾಗವಹಿಸಿದ್ದರು. ಅಶ್ವಿತಾ ಹೇಮಂತ್ ಕುಂಡಿಲ ಸ್ವಾಗತಿಸಿದರು. ಗಣೇಶ್ ವಂದಿಸಿದರು. ಅನುರಾಧಾ ನಿರೂಪಿಸಿದರು.