ಚಿತ್ತ ಚಾಂಚಲ್ಯ ಹೋಗಲಾಡಿಸಿ ಏಕಾಗ್ರತೆಗೆ ಅಡಿಗಲ್ಲು: ಪ್ರಾಚಾರ್ಯ ಸೋಮಶೇಖರ ನಾಯಕ್ ಅಭಿಮತ

New Project (32)
Published on

ಸುಬ್ರಹ್ಮಣ್ಯ: ಚಿತ್ತ ಚಾಂಚಲ್ಯ ಹೋಗಲಾಡಿಸಿ ಏಕಾಗ್ರತೆಯೊಂದಿಗೆ ಮಾನಸಿಕ ಸದೃಢತೆ ಸಾಧಿಸಲು ಯೋಗ ಅಡಿಗಲು ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು.

ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಸಹಯೋಗದಲ್ಲಿ ಯೋಗಾಸನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಗ ಗುರು ಎಂ.ಕೃಷ್ಣ ಭಟ್, ಉಪನ್ಯಾಸಕಿ ಸೌಮ್ಯಾ ದಿನೇಶ್ ಯೋಗಾಭ್ಯಾಸ ಮಾಡಿಸಿದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ಆರ್., ಪೂರ್ವಾಧ್ಯಕ್ಷ ಲೋಕೇಶ್ ಬಿ.ಎನ್., ನಿರ್ದೇಶಕ ಗಿರೀಶ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಂದಾ ಹರೀಶ್, ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಮತ್ತಿತರರಿದ್ದರು. ರೋವರ್ಸ್‌ ಮತ್ತು ರೇಂಜರ್ಸ್‌ ಘಟಕ ನಾಯಕರಾದ ಸವಿತಾ ಕೈಲಾಸ್ ಮತ್ತು ಪ್ರವೀಣ್ ನಿರ್ದೇಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net