ಮುಂಬೈ: ನಿತೇಶ್ ತಿವಾರಿ ನಿರ್ದೇಶನದ ಬಹುನಿರಿಕ್ಷೀತ ಸಿನಿಮಾ ರಾಮಯಾಣ ( Ramayana ).ಈ ಚಿತ್ರದಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮುಂತಾದವರು ನಟಿಸುತ್ತಿದ್ದಾರೆ. ಈಗ ಈ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ನೀಡಲಾಗಿದೆ.
ಈ ಕುರಿತು ನಿರ್ಮಾಪಕ ಮಲ್ಹೋತ್ರ ತಮ್ಮ ಇನ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಮಯಾಣ ಸಿನಿಮಾ ಎರಡು ಭಾಗಗಳಲ್ಲಿ ತೆರೆ ಮೇಲೆ ಬರಲಿದ್ದು, 2026ರ ದೀಪಾವಳಿಗೆ ‘ರಾಮಾಯಣ’ ಸಿನಿಮಾದ ಮೊದಲ ಪಾರ್ಟ್ ಬಿಡುಗಡೆ ಆಗಲಿದೆ. 2027ರ ದೀಪಾವಳಿಗೆ ಎರಡನೇ ಪಾರ್ಟ್ ರಿಲೀಸ್ ಆಗಲಿದೆ.
ಉರಿಯುತ್ತಿರುವ ಬಾಣವು ಆಕಾಶದತ್ತ ಚಿಮ್ಮುತ್ತಿರುವುದನ್ನು ಪೋಸ್ಟ್ನಲ್ಲಿ ಕಾಣಬಹುದು. ಇದರ ಜತೆಗೆ ಸಿನಿಮಾ ಕುರಿತು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ” 5000 ವರ್ಷಗಳಿಂದ ಶತಕೋಟಿ ಹೃದಯಗಳನ್ನು ಆಳಿದ ಈ ಮಹಾಕಾವ್ಯವನ್ನು ದೊಡ್ಡ ಪರದೆಯ ಮೇಲೆ ತರಲು ನಾನು ಅನ್ವೇಷಣೆಯನ್ನು ಪ್ರಾರಂಭಿಸಿದೆ. ಈ ಹಿನ್ನೆಲೆ ನಮ್ಮ ತಂಡಗಳು ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ತೆರೆ ಮೇಲೆ ಸುಂದರವಾಗಿ ಮೂಡಿಬರಲಿದ್ದು, ನಮ್ಮ ಇತಿಹಾಸ, ನಮ್ಮ ಸತ್ಯ, ನಮ್ಮ ಸಂಸ್ಕೃತಿ, ನಮ್ಮ ಪವಿತ್ರ ಪರಂಪರೆಯನ್ನು ಪ್ರಂಪಚದ್ಯಾಂತ ಜನರಿಗೆ ಪ್ರಸುತ್ತ ಪಡಿಸಲು ನಾನು ರೋಮಾಂಚನಗೊಂಡಿದ್ದೇನೆ.” ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ಹಲವು ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಕೆಲವರು” ನಿಮ್ಮ ಚಿತ್ರತಂಡದಿಂದ ಆಮೋಘವಾಗಿ ಮೂಡಿಬರಲಿ, ಇಂತಹ ಸಿನಿಮಾವನ್ನು ತೆರೆಗೆ ತರುತ್ತಿರುವ ನಿಮಗೆ ಧನ್ಯವಾದಗಳು, ಈ ಚಿತ್ರ ನೋಡಲು ಕಾಯುತ್ತಿರುವೆ. ನಿಮಗೆ ಈ ಬಾರಿ ಯಶಸ್ಸು ಸಿಗಲಿ” ಎಂದು ಕಾಮೆಂಟ್ಗಳು ಬರುತ್ತೀವೆ.
ವರದಿಗಳ ಪ್ರಕಾರ, ರಾಮಯಾಣ ಚಿತ್ರದಲ್ಲಿ ನಾಯಕ ನಟನಾಗಿ ರಣಬೀರ್ ಕಪೂರ್ ಅಭಿನಯಿಸಲಿದ್ದು, ರಾಮನ ಪಾತ್ರ ಮಾಡಲಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಈಗಾಗಲೇ ರಾವಣನ ಪಾತ್ರ ಕುರಿತು ಯಶ್ ಖಚಿತಪಡಿಸಿದ್ದು, ರಾವಣನಾಗಿ ರಾಕಿಂಗ್ಸ್ಟಾರ್ ಆರ್ಭಟಿಸಲಿದ್ದಾರೆ. ಲಾರಾ ದತ್ತ, ಸನ್ನಿ ಡೀಯೊಲ್, ಶೀಬಾ ಚಡ್ಡಾ ಸೇರಿದಂತೆ ಆನೇಕರು ಈ ಚಿತ್ರದಲ್ಲಿ ನಟಿಸಲಿದ್ದಾರೆ.