More

    VIDEO: ನಟ ಯಶ್ ಮಗನ ಸೂಪರ್​ ಡಾನ್ಸ್ ಹೇಗಿದೆ ನೋಡಿ…

    ರಾಕಿಂಗ್​ ಸ್ಟಾರ್ ಯಶ್​ ಸದ್ಯ ಇಬ್ಬರು ಮುದ್ದು ಮಕ್ಕಳೊಂದಿಗೆ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಮಕ್ಕಳಿಗಾಗಿಯೇ ಇಡೀ ಸಮಯ ಮೀಸಲಿಟ್ಟಿದ್ದಾರೆ. ಆಗಾಗ ಮುದ್ದು ಮಕ್ಕಳ ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಶೇರ್​ ಮಾಡಿಕೊಂಡು ಅಭಿಮಾನಿಗಳಿಗೂ ಆಗಾಗ ಸಪ್ರೈಸ್​ ಕೊಡುತ್ತಿರುತ್ತಾರೆ. ಇದೀಗ ಕಾರ್​ ಒಳಗೆ ನಿಂತುಕೊಂಡು ಡಾನ್ಸ್ ಮಾಡುತ್ತಿರುವ ಮಗನ ವಿಡಿಯೋವೊಂದನ್ನು ಯಶ್​ ಪೋಸ್ಟ್ ಮಾಡಿದ್ದಾರೆ.

    ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಅಮಿತಾಬ್​ ಬಚ್ಚನ್​, ಅಭಿಷೇಕ್​ ಆಸ್ಪತ್ರೆಯಿಂದ ಡಿಸ್ಚಾರ್ಜ್

    ‘ಮಗನಿಗೆ ಮ್ಯೂಸಿಕ್​ ಅಂದ್ರೆ ಎಲ್ಲಿಲ್ಲದ ಪ್ರೀತಿ ಅಂತ ಕಾಣುತ್ತೆ. ಒಂದು ಪಾರ್ಟಿ ಮೂಡ್​ಗೆ ಬದಲಾಗಿ ಬಿಡುತ್ತಾನೆ’ ಎಂದು ಕ್ಯಾಪ್ಶನ್​ ನೀಡಿದ್ದಾರೆ. ಸದ್ಯ ಈ ಪೋಸ್ಟ್​ ಹಾಕಿದ ಕೇವಲ ಮೂರೇ ಗಂಟೆಗೆ 7 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ನೋಡಿದ್ದಾರೆ. ಆ ವಿಡಿಯೋ ತುಣುಕು ಇಲ್ಲಿದೆ ನೋಡಿ.

    ಯಶ್​ ಮಗನ ಡ್ಯಾನ್ಸ್​ ನೋಡಿ!

    ಯಶ್​ ಮತ್ತು ರಾಧಿಕಾ ಪಂಡಿತ್​ ದಂಪತಿಯ ಎರಡನೆಯ ಮಗುವಿಗೆ ಇದೀಗ ಒಂಬತ್ತು ತಿಂಗಳು. ಈಗಾಗಲೇ ತಮ್ಮ ಮುದ್ದು ಮಗನ ಕೆಲವು ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದ ಯಶ್, ಇದೀಗ ಇನ್ನೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆಟದ ಕಾರ್ ಒಳಗೆ ನಿಂತುಕೊಂಡ ಮಗ ಮ್ಯೂಸಿಕ್‌ಗೆ ಕುಣಿಯುವ ವಿಡಿಯೋವನ್ನು ಯಶ್ ಹಂಚಿಕೊಂಡಿದ್ದಾರೆ.

    Posted by Vijayavani on Tuesday, July 14, 2020

    ಸುಶಾಂತ್​ ಜೀವಂತವಾಗಿಲ್ಲ, ಆದರೆ ಆತನ ನೆನಪು ಜೀವಂತ!; ರೆಗ್ಗಿ ಮಿಲ್ಲರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts