More

    ಮಕ್ಕಳಿಗೆ ಪಟಾಕಿ ಹೊಡೆಸಿ ದೀಪಾವಳಿ ಆಚರಿಸಿದ ಯಶ್​

    ಬೆಂಗಳೂರು: ‘ಕೆಜಿಎಫ್​ 2’ ನಂತರ ಯಶ್​ ಮುಂದಿನ ನಡೆ ಏನಿರಬಹುದು ಎಂದು ಇಡೀ ದೇಶವೇ ತಲೆ ಕೆಡಿಸಿಕೊಂಡು ಕೂತಿದೆ. ಆದರೆ, ಯಶ್​ ಮಾತ್ರ ತಮ್ಮ ಮುಂದಿನ ಹೆಜ್ಜೆ ಏನು? ಹೊಸ ಸಿನಿಮಾ ಯಾವುದು? ಅದನ್ನು ಯಾರು ಮಾಡುತ್ತಿದ್ದಾರೆ? ಮುಂತಾದ ಯಾವುದೇ ವಿಷಯವನ್ನು ಬಹಿರಂಗಪಡಿಸದೆಯೇ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಪಟಾಕಿ ಸದ್ದಿಗೆ ಹೆದರಿದ ‘ಚಾರ್ಲಿ’ಗೆ ಧೈರ್ಯ ಹೇಳಿದ ಐಂದ್ರಿತಾ ರೈ…

    ಇನ್ನು, ಈ ದೀಪಾವಳಿಯನ್ನು ಯಶ್​ ತಮ್ಮ ಪತ್ನಿ ರಾಧಿಕಾ ಪಂಡಿತ್​ ಮತ್ತು ಮಕ್ಕಳಾದ ಆಯಿರಾ ಮತ್ತು ಯಥರ್ವ್​ ಜತೆಗೆ ಸೋಮವಾರ ಆಚರಿಸಿದ್ದಾರೆ. ಮಕ್ಕಳಿಗೆ ಹೊಸ ಬಟ್ಟೆ ತೊಡಿಸಿ ಪಟಕಾ ಹೊಡೆಸಿ, ದೀಪದ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಮಕ್ಕಳ ಜತೆಗೆ ಪಟಾಕಿ ಹೊಡೆಯುತ್ತಿರುವ ಫೋಟೋವೊಂದನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿರುವ ಯಶ್​, ‘ಕೆಲವು ಕ್ಷಣಗಳು ಬಹಳ ಮುಖ್ಯವಾದವು … ನಮ್ಮಿಂದ ನಿಮಗೆ ದಿಪಾವಳಿ ಹಬ್ಬದ ಶುಭಾಶಯಗಳು …’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಾಡಿನ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

    ಇದನ್ನೂ ಓದಿ: ‘ಕಾಂತಾರ’ಕ್ಕೀಗ ಕಾನೂನುಕ್ರಮದ ‘ಕಿರಿಕ್​’: ಯಶಸ್ಸಿನ ಓಟಕ್ಕೆ ಬ್ರೇಕ್​ ಹಾಕುವ ಯತ್ನವೋ?

    ಅಂದಹಾಗೆ, ಯಶ್​ ಅಭಿನಯದ ‘ಕೆಜಿಎಫ್​ 2’ ಬಿಡುಗಡೆಯಾಗಿ ಆರು ತಿಂಗಳುಗಳಾಗಿವೆ. ಚಿತ್ರವು ಜಗತ್ತಿನಾದ್ಯಂತ ಜಯಭೇರಿ ಬಾರಿಸಿದ್ದು, ಬಾಕ್ಸ್​-ಆಫೀಸ್​ನಲ್ಲಿ ಸಾವಿರಕ್ಕೂ ಹೆಚ್ಚು ಕೋಟಿಗಳ ಕಲೆಕ್ಷನ್​ ಕಂಡಿದೆ. ಈ ಚಿತ್ರದ ಯಶಸ್ಸಿನ ನಂತರ ಯಶ್​ ಅವರ ಮುಂದಿನ ನಡೆ ಏನು ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದ್ದು, ಸದ್ಯದಲ್ಲೇ ಅವರ ಮುಂದಿನ ಚಿತ್ರ ಯಾವುದು ಎಂದು ಬಹಿರಂಗವಾಗುವ ಸಾಧ್ಯತೆ ಇದೆ.

    ಯಶ್​ ಹೊಸ ಚಿತ್ರದ ನಿರ್ಮಾಣದ ಜವಾಬ್ದಾರಿಗೆ ಕೆವಿಎನ್​ ಪ್ರೊಡಕ್ಷನ್ಸ್​ಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts