

ಬೆಂಗಳೂರು: ಎಲ್ಲೆಡೆಯೂ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ವೇಳೆಯಲ್ಲಿ ಪಟಾಕಿ ಸದ್ದಿನಿಂದಾಗಿ ಅನೇಕರು ತಮ್ಮ ಸಾಕು ಪ್ರಾಣಿಗಳಿಗೆ ಸಮಾಧಾನ ಮಾಡಲು ಹರಸಾಹಸ ಪಡುತ್ತಿದ್ದಾರೆ.
ಅದೇ ಸಾಲಿಗೆ ಸೇರುವ ನಟಿ ಐಂದ್ರಿತಾ ರೇ ತಮ್ಮ ಪ್ರೀತಿಯ ಚಾರ್ಲಿಯನ್ನು ಸಮಾಧಾನಪಡಿಸುವ ವೀಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಚಾರ್ಲಿ ಸೋಫಾ ದಿಂಬಿನ ಹಿಂದೆ ಅಡಗಿ ಪಟಾಕಿ ಸದ್ದಿನಿಂದ ಬಚಾವಾಗಲು ಪ್ರಯತ್ನ ಪಡುತ್ತಿರುವುದು ಕಾಣಬಹುದು. ಆಗ ನಟಿ ಐಂದ್ರಿತಾ ತಮ್ಮ ನಾಯಿಯನ್ನು ಮುದ್ದು ಮಾಡುತ್ತಾ 'ನೋ ಚಾರ್ಲಿ' ಎಂದು ಸಮಾಧಾನ ಮಾಡಿದರು.
ಕಾಮೆಂಟ್ ಭಾಗದಲ್ಲಿ ಜನರು 'ನಿಮ್ಮಲ್ಲಿ ಬೇಕಾದಷ್ಟು ಹಣವಿದೆ. ನಾಯಿಗೆ ಇಯರ್ ಪ್ಲಗ್ಸ್ ಹಾಕಬಹುದಿತ್ತು' ಎಂದಿದ್ದಾರೆ. ಇನ್ನು ಕೆಲವರು 'ನಿಮ್ಮ ಸಿನಿಮಾ ಬಿಡುಗೆಡೆಗೆ ಥಿಯೇಟರ್ ಎದುರು ಬೇಕಾದಷ್ಟು ಪಟಾಕಿ ಹೊಡೆಯುತ್ತೀರಾ. ನಾವು ದೀಪಾವಳಿ ಹಬ್ಬಕ್ಕೆ ಖಂಡಿತಾ ಪಟಾಕಿ ಹೊಡೆಯುತ್ತೇವೆ' ಎಂದಿದ್ದಾರೆ.