ಗೋವಾದ ಐಶಾರಾಮಿ ಹಡಗಿನಲ್ಲಿ ಮಗನ ಬರ್ತ್​ಡೇ ಆಚರಿಸಿದ ಯಶ್​- ರಾಧಿಕಾ

yash
Published on

ಬೆಂಗಳೂರು: ಕಳೆದ ವರ್ಷ ಪುತ್ರಿ ಐರಾಳ ಮೊದಲ ವರ್ಷದ ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದ ನಟ ಯಶ್​ ಮತ್ತು ರಾಧಿಕಾ ಪಂಡಿತ್​, ಈ ವರ್ಷ ಪುತ್ರ ಯಥರ್ವನ ಜನ್ಮದಿನವನ್ನು ಅದಕ್ಕಿಂತ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ. ಹಾಗಂತ ಮನೆಯಲ್ಲಿಯೇ ಈ ಜೋಡಿ ಮಗನ ಜನ್ಮದಿನ ಆಚರಿಸಿಲ್ಲ. ಬದಲಿಗೆ ಗೋವಾದಲ್ಲಿ ಸೆಲೆಬ್ರೇಟ್​ ಮಾಡಿದ್ದಾರೆ.

ಹೌದು, ಕೆಜಿಎಫ್ ಸಿನಿಮಾ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿರುವ ನಟ ಯಶ್​, ಮಗನ ಜನ್ಮದಿನದ ನಿಮಿತ್ತ ಕೊಂಚ ಬಿಡುವು ಮಾಡಿಕೊಂಡು ಇಡೀ ಕುಟುಂಬದೊಟ್ಟಿಗೆ ಗೋವಾಕ್ಕೆ ತೆರಳಿದ್ದಾರೆ. ಅಲ್ಲಿನ ಐಶಾರಾಮಿ ಬೋಟ್​ವೊಂದರಲ್ಲಿ ಮಗನ ಜನ್ಮದಿನವನ್ನು ಎಲ್ಲರೂ ಸೇರಿ ಕೇಕ್​ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾರೆ. ಹಾಗೇ ಆಚರಿಸಿಕೊಂಡ ವಿಡಿಯೋವನ್ನು ರಾಧಿಕಾ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net