More

    2050ರಲ್ಲಿ ಶ್ರದ್ಧಾ ಏನ್​ ಮಾಡ್ತಾರೆ ಗೊತ್ತಾ?

    ಬೆಂಗಳೂರು: ಕನ್ನಡತಿ ಮತ್ತು ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್​ ಒಂದರ ಹಿಂದೊಂದು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಮಲಯಾಳಂ ಸೂಪರ್​ಸ್ಟಾರ್ ಮೋಹನ್​ ಲಾಲ್​ ಜತೆಗೆ ಮಲಯಾಳಂ ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದರು.

    ಇದನ್ನೂ ಓದಿ: ಸದ್ಯದಲ್ಲೇ ಹೊಸ ಸಾಹಸಕ್ಕೆ ಕೈ ಹಾಕಲಿದ್ದಾರಂತೆ ತರುಣ್​!

    ಇದೀಗ ಅವರು ಹೊಸದೊಂದು ಚಿತ್ರವೊಂದನ್ನು ಒಪ್ಪಿಕೊಂಡಿದ್ದಾಗಿ ಸೋಷಿಯಲ್​ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ.

    ಶ್ರದ್ಧಾ ಒಪ್ಪಿರುವ ಹೊಸ ಚಿತ್ರ ಯಾವುದು ಗೊತ್ತಾ? ‘ಕಲಿಯುಗಂ’. ಇದೊಂದು ದ್ವಿಭಾಷಾ ಚಿತ್ರವಾಗಿದ್ದು ತಮಿಳು ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ ಎಂದು ಹೇಳಲಾಗುತ್ತಿದೆ. 2050ರ ದಶಕದ ಕಾಲಘಟ್ಟದ ಕಥೆ ಇರುವ ಈ ಚಿತ್ರದಲ್ಲಿ, ಶ್ರದ್ಧಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ.

    ಪ್ರಮೋದ್​ ಸುಂದರ್​ ಎನ್ನುವವರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಲಿದ್ದು, ಆರ್​.ಕೆ ಇಂಟರ್​ನ್ಯಾಷನಲ್​ ಸಂಸ್ಥೆಯಡಿ ಎಸ್​. ರಾಮಕೃಷ್ಣ ಈ ಚಿತರವನ್ನು ನಿರ್ಮಿಸುತ್ತಿದ್ದಾರಂತೆ. ಖ್ಯಾತ ಛಾಯಾಗ್ರಾಹಕ ಪಿ.ಸಿ. ಶ್ರೀರಾಮ್​ ಜತೆಗೆ ಕೆಲಸ ಮಾಡಿದ್ದ ರಾಮ್​ಚರಣ್​ ಎನ್ನುವವರು ಈ ಚಿತ್ರದ ಛಾಯಾಗ್ರಹಣ ಮಾಡಲಿದ್ದಾರೆ.

    ಇದನ್ನೂ ಓದಿ: ನಮ್ಮಪ್ಪ ನನಗಾಗಿ ಒಂದು ಸಿನಿಮಾನೂ ಮಾಡ್ಲಿಲ್ಲ: ಅಭಿಷೇಕ್​ ಬಚ್ಚನ್​

    ಅಂದಹಾಗೆ, ಈ ಚಿತ್ರವು ಜನವರಿಯಲ್ಲಿ ಪ್ರಾರಂಭವಾಗುತ್ತದಂತೆ.

    ಹೊಸದೊಂದು ದಾಖಲೆ ನಿರ್ಮಿಸುವುದಕ್ಕೆ ತಯಾರಾಗುತ್ತಿದೆ ‘ಡಿಡಿಎಲ್​ಜೆ’ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts