'ಚಿರಂಜೀವಿ ಹೇಗೆ ಒಪ್ಪಿಕೊಳ್ತಾನೋ ಎಂದು ಭಯಯಾಗಿತ್ತು' : ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್​ ಹೀಗಂದಿದ್ದೇಕೆ?

chiru
Published on

ಹೈದರಾಬಾದ್​: ಹಿರಿಯ ನಟ ಚಿರಂಜೀವಿ ಮತ್ತು ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ ಎಂದು ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್​ ಸ್ಪಷ್ಟಪಡಿಸಿದರು.

ಚಿರಂಜೀವಿ ಅವರು ತಮ್ಮ ಜೀವನ ಚರಿತ್ರೆ ಪುಸ್ತಕ ಬರೆಯುವ ಜವಾಬ್ದಾರಿಯನ್ನು ಖ್ಯಾತ ಸಾಹಿತಿ ಯಂಡಮೂರಿ ವೀರೇಂದ್ರನಾಥ್ ಅವರಿಗೆ ವಹಿಸಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಚಿರಂಜೀವಿ ಇದನ್ನು ವೇದಿಕೆಯೊಂದರಲ್ಲಿ ಸಾರ್ವಜನಿಕವಾಗಿ ಘೋಷಿಸಿದ್ದರು. ಇತ್ತೀಚೆಗೆ, ಲೇಖಕ ಯಂಡಮೂರಿ ವೀರೇಂದ್ರನಾಥ್ ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದರು.

ಚಿರಂಜೀವಿ ಅಭಿನಯದ ‘ಮಂಚು ಪಲ್ಲಕಿ’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದೆ. ಆ ನಂತರ ನಾವು 40 ವರ್ಷಗಳ ಕಾಲ ತುಂಬಾ ಆತ್ಮೀಯರಾಗಿದ್ದೆವು. ಗಂಡ ಹೆಂಡತಿ ನಡುವೆಯೂ. ಕೆಲವೊಮ್ಮೆ ಭಿನ್ನಾಭಿಪ್ರಾಯ ಮೂಡುತ್ತೆ. ಅದೇ ರೀತಿ ಎಲ್ಲರ ನಡುವೆಯೂ ಮನಃಸ್ತಾಪ ಬರುತ್ತದೆ. ಇಂತಹವುಗಳನ್ನು ಮರೆತು ಮುಂದೆ ಹೋಗಬೇಕಾಗುತ್ತದೆ. ಹೀಗಾಗಿ ನಮ್ಮ ನಡುವೆ ಈಗ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಸದ್ಯ ನಮ್ಮ ನಡುವೆ ಯಾವುದೇ ಪೈಪೋಟಿ ಇಲ್ಲ. ಏನಾಯಿತು ಎಂಬುದನ್ನು ನಾವಿಬ್ಬರೂ ಮರೆತಿದ್ದೇವೆ. ನಾಲ್ಕು ವರ್ಷಗಳ ನಂತರ ನನ್ನನ್ನು ಚಿರಂಜೀವಿ ಹೇಗೆ ಸ್ವೀಕರಿಸುತ್ತಾನೋ ಎಂಬ ಭಯವಿತ್ತು. ಆದರೆ, ತುಂಬ ಪ್ರೀತಿಯಿಂದ ಸ್ವಾಗತಿಸಿದರು. ಅವನ ಕಣ್ಣುಗಳಲ್ಲಿ ವಾತ್ಸಲ್ಯವಿತ್ತು ಎಂದು ಹೇಳಿದರು.

'ನಿನ್ನ ಜೀವನಚರಿತ್ರೆಯನ್ನು ಬರೆದರೆ ಚೆನ್ನಾಗಿರುತ್ತದೆ ಎಂದು ಅಂದು ವೇದಿಕೆಯಲ್ಲಿ ಚಿರಂಜೀವಿಗೆ ಕೇಳಿದ್ದೆ. ಅದನ್ನು ಕೇಳಿ ಅವನಿಗೆ ಆಶ್ಚರ್ಯವಾಯಿತು. 'ನಿಜವಾಗಿಯೂ ಬರೆಯುತ್ತೀಯಾ? ಬರೆದರೆ ಅದಕ್ಕಿಂತ ನನಗೆ ಸಂತೋಷವಾಗುತ್ತದೆ. ಈಗಲೇ ಘೋಷಣೆ ಮಾಡ್ತೀಯಾ ಎಂದು ಚಿರಂಜೀವಿ ಪ್ರಶ್ನಿಸಿದರು. ನಾನು ಓಕೆ ಅಂದಾಗ ವೇದಿಕೆಯಲ್ಲೇ ಈ ವಿಷಯವನ್ನು ಬಹಿರಂಗಪಡಿಸಿದರು’ ಎಂದರು.

ಈ ಪುಸ್ತಕ ಬರೆಯಬೇಕಾದರೆ ಚಿರಂಜೀವಿ ಜೊತೆ 50 ಬಾರಿ ಮಾತನಾಡಬೇಕಿತ್ತು ಎಂದು ಯಂಡಮೂರಿ ಹೇಳಿದ್ದಾರೆ. ಚಿಕ್ಕಂದಿನಿಂದಲೂ ಚಿರಂಜೀವಿ ಜೀವನದಲ್ಲಿ ನಡೆದ ಘಟನೆಗಳನ್ನು ಬರೆಯುತ್ತೇನೆ ಎಂದರು. ಶೀಘ್ರದಲ್ಲೇ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net