More

    EPFO interest rate: ಇಪಿಎಫ್​ ಬಡ್ಡಿ ದರ..ಈ ಬಾರಿ ಶೇ.8ರಷ್ಟೇನಾ? 45 ವರ್ಷದಲ್ಲೇ ಕಡಿಮೆ ಬಡ್ಡಿ ದರ!

    ನವದೆಹಲಿ: 2023-24 ನೇ ಸಾಲಿಗೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಬಡ್ಡಿ ದರ ಶೇ.8ಕ್ಕೆ ನಿಗದಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಇದನ್ನೂ ಓದಿ: ಕೇಂದ್ರದಿಂದ ಅನುದಾನ ತಾರತಮ್ಯ: ಸುಪ್ರೀಂಕೋರ್ಟ್​ಗೆ ಹೋಗಲ್ಲ ಸಿಎಂ ಸ್ಪಷ್ಟನೆ

    ಉದ್ಯೋಗಿಗಳ ಇಪಿಎಫ್ ಖಾತೆಯಲ್ಲಿರುವ ಹಣದ ಮೇಲಿನ ಬಡ್ಡಿ ದರ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು. 2023-24ನೇ ಹಣಕಾಸು ವರ್ಷಕ್ಕೆ ಶೇ 8ರಷ್ಟು ಬಡ್ಡಿ ನೀಡುವ ಪ್ರಸ್ತಾವನೆ ಕೇಂದ್ರದ ಮುಂದಿದೆ ಎನ್ನಲಾಗುತ್ತಿದೆ.
    ಶನಿವಾರ (ಫೆಬ್ರವರಿ 10) ನಡೆಯಲಿರುವ ಕೇಂದ್ರೀಯ ಟ್ರಸ್ಟಿಗಳ (ಸಿಬಿಟಿ) ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಪಿಂಚಣಿ, ಬಜೆಟ್ ಅಂದಾಜು ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮವೊಂದು ಈ ವಿಷಯವನ್ನು ಬಹಿರಂಗಪಡಿಸಿದೆ.

    ಸಿಬಿಟಿ ಸಭೆಯಲ್ಲಿ ಮುಖ್ಯವಾಗಿ ಚರ್ಚೆಯಾಗುವ ಅಜೆಂಡಾದಲ್ಲಿ ಬಡ್ಡಿದರ ಇಲ್ಲದಿದ್ದರೂ, ಸಿಬಿಟಿ ಅಧ್ಯಕ್ಷರು ಮತ್ತು ಕಾರ್ಮಿಕ ಇಲಾಖೆಯ ಅನುಮತಿಯೊಂದಿಗೆ ಸೇರಿಸಲು ಟ್ರಸ್ಟಿಗಳು ಯೋಚಿಸುತ್ತಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಈ ಸಭೆಯಲ್ಲಿ, 2023-24 ರ ಆರ್ಥಿಕ ವರ್ಷದ ಬಡ್ಡಿ ದರವು ಶೇಕಡಾ 8 ರಷ್ಟಿರುತ್ತದೆ. ಈ ಕುರಿತು ಪ್ರಸ್ತಾವನೆ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

    ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಡ್ಡಿ ದರ ಕಡಿಮೆ ಎಂಬುದು ಗಮನಾರ್ಹ. 2022-23ನೇ ಹಣಕಾಸು ವರ್ಷಕ್ಕೆ ಶೇ.8.15 ಬಡ್ಡಿ ನಿಗದಿ ಮಾಡಲಾಗಿದ್ದು, 2021-22ರಲ್ಲಿ ಶೇ.8.10 ಬಡ್ಡಿ ನೀಡಲಾಗಿದೆ. ಕೇಂದ್ರವು ಸಿಬಿಟಿ ಪ್ರಸ್ತಾವನೆಗಳನ್ನು ಅನುಮೋದಿಸಿದ ನಂತರ, ಹಣಕಾಸು ಇಲಾಖೆಯು ಅಂತಿಮ ಅಧಿಸೂಚನೆಯನ್ನು ಹೊರಡಿಸುತ್ತದೆ. ಇದರ ನಂತರ 6 ಕೋಟಿ ಚಂದಾದಾರರ ಖಾತೆಗಳಿಗೆ ಮೊತ್ತವನ್ನು ಜಮೆಮಾಡಲಾಗುತ್ತದೆ.

    ಈ ಬಾರಿ ಶೇ.8ರ ದರ ನಿಗದಿಯಾದರೆ ಇಪಿಎಫ್ ಮೇಲಿನ ಬಡ್ಡಿ ದರ ನಾಲ್ಕೂವರೆ ದಶಕಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿಯಲಿದೆ. 1977-78ರ ಆರ್ಥಿಕ ವರ್ಷದಲ್ಲಿ ಶೇ.8ರಷ್ಟು ನೀಡಲಾಗಿತ್ತು. ಒಂದು ಹಂತದಲ್ಲಿ 11 ವರ್ಷಕ್ಕೆ ಶೇ.12ರಷ್ಟು ಬಡ್ಡಿ ನೀಡಲಾಗುತ್ತಿತ್ತು. ಅದರ ನಂತರ, ಮತ್ತೆ ಕಡಿಮೆಯಾಗುತ್ತ ಬಂದಿದ್ದು, 2022-23 ರ ಆರ್ಥಿಕ ವರ್ಷಕ್ಕೆ ಸ್ವಲ್ಪ ಹೆಚ್ಚಿಸಲಾಗಿತ್ತು ಎಂಬುದು ಗಮನಾರ್ಹ.

    ತೆಲುಗಿನಲ್ಲಿ ಬ್ಯುಸಿ ಆದ ಶ್ರೀದೇವಿ ಪುತ್ರಿ..ಎನ್​ಟಿಆರ್​, ರಾಮ್​ಚರಣ್​ ಚಿತ್ರಗಳಲ್ಲಿ ಜಾಹ್ನವಿಗೆ ಚಾನ್ಸ್​​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts