More

    ಕೇಂದ್ರದಿಂದ ಅನುದಾನ ತಾರತಮ್ಯ: ಸುಪ್ರೀಂಕೋರ್ಟ್​ಗೆ ಹೋಗಲ್ಲ ಸಿಎಂ ಸ್ಪಷ್ಟನೆ

    ಚಿತ್ರದುರ್ಗ: ಕೇಂದ್ರದಿಂದ ಅನುದಾನ ತಾರತಮ್ಯ ಕೇರಳ ಮಾದರಿಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಸುಪ್ರೀಂ ಕೋರ್ಟ್ ಗೆ ಹೋಗುವ ಆಲೋಚನೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಪಪಡಿಸಿದರು.

    ಇದನ್ನೂ ಓದಿ:ಕೆಂಪಣ್ಣ ಭ್ರಷ್ಟಾಚಾರ ಆರೋಪಕ್ಕೆ ಸಚಿವ ರಾಮಲಿಂಗಾರೆಡ್ಡಿ, ಪ್ರಿಯಾಂಕ ಖರ್ಗೆ ಹೇಳಿದಿಷ್ಟು?

    ಹೊಸದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಅನ್ಯಾಯ ಆಗಿರುವುದಂತೂ ನಿಜ. ರಾಜ್ಯದ ಪಾಲು ಕೇಳಿದರೆ ದೇಶ ವಿಭಜನೆ ಎನ್ನುತ್ತಾರೆ. ಮೋದಿ ಸಿಎಂ ಆದಾಗಲೂ ಕೂಡ ಅನುದಾನದಲ್ಲಿ ಅನ್ಯಾಯ ಆಗಿದೆ ಎಂದು ದನಿ ಎತ್ತಿದ್ದರು ಅದು ಯಾವ ವಿಭಜನೆ? ಎಂದು ಬಿಜೆಪಿ ವಿರುದ್ಧ ಕಿಡಿಕಾಡಿದರು.

    ಈಶ್ವರಪ್ಪ ವಿರುದ್ಧ ಕಾನೂನು ಕ್ರಮ: ದೇಶ ವಿಭಜನೆಯ ಮಾತು ಆಡಿದ ವಿಷಯವನ್ನು ದೇಶದ್ರೋಹ ಎಂದು ಪರಿಗಣಿಸಿ ಗುಂಡಿಟ್ಟು ಕೊಲ್ಲಿ ಎಂಬುದು ಸರಿಯೇ? ಡಿ.ಕೆ‌.ಸುರೇಶ್ ಗೂ ಇದೇ ರೀತಿ ಹೇಳಿದ್ಸಾರೆ. ಈಶ್ವರಪ್ಪ ಬಾಯಿ ತೆಗೆದರೆ ಹಿಡಿ, ಬಡಿ, ಹೊಡಿ, ಇರಿ ಎನ್ನುತ್ತಾರೆ. ಮಾತನಾಡಿದರೆ ನಾನು ಆರ್​ಎಸ್ಎಸ್ ಎನ್ನುತ್ತಾರೆ. ಅವರು ಕಲಿತಿದ್ದು ಇದನ್ನೇನಾ? ಯಾವ ರೀತಿ ಕ್ರಮ ಎಂಬ ಪ್ರಶ್ನೆಗೆ ಕಾನೂನು ಪ್ರಕಾರ ಎಂದಷ್ಟೇ ಉತ್ತರಿಸಿದರು.

    ಅಪ್ಪರ್ ಭದ್ರಾ ಅನುದಾನ ನೀಡಿಕೆಯಲ್ಲೂ ಅನ್ಯಾಯ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಘೋಷಿಸಿದಂತೆ 5300 ಕೋಟಿ ರೂ.ನೀಡಲೇ ಇಲ್ಲ ಎಂದು ಟೀಕಿಸಿದರು.

    ಸರ್ಕಾರದ ವಿರುದ್ಧ ಶೇ 40 ಲಂಚದ ಆರೋಪಕ್ಕೆ ಪ್ರತಿಕ್ರಿಯೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ನಾಗಮೋಹನ್ ದಾಸ್ ಸಮಿತಿಗೆ ದೂರು ನೀಡಲಿ. ಭ್ರಷ್ಟಾಚಾರ ಮಾಡಿದ ಅಧಿಕಾರಿಗಳ ವಿರುದ್ಧ ದೂರು ಕೊಡಲಿ. ಶೇ.40 ರಷ್ಟು ಆರೋಪಗಳ ಕುರಿತು ತನಿಖೆಗೆ ಎಂದೇ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದರು.

     

    ವಿರುಷ್ಕಾ ದಂಪತಿಗೆ 2ನೇ ಮಗು ಸುಳ್ಳು ಮಾಹಿತಿ ಹರಡಿ ದೊಡ್ಡ ತಪ್ಪು ಮಾಡಿದೆ: ಎಬಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts