More

    ಪೇಟಿಎಂ ಮೂಲಕ ಕ್ಲೈಮ್​ಗಳ ಸ್ವೀಕಾರ ಸ್ಥಗಿತಕ್ಕೆ ಇಪಿಎಫ್​ಒ ತೀರ್ಮಾನ: ಎಂದಿನಿಂದ ಅನ್ವಯವಾಗಲಿದೆ? ವಿವರ ಇಲ್ಲಿದೆ..

    ನವದೆಹಲಿ: ಪೇಟಿಎಂ(ಡಿಜಿಟಲ್ ಪಾವತಿ ಕಂಪನಿ) ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್​ಬಿಐ ಕ್ರಮ ನಿರ್ಬಂಧ ವಿಧಿಸಿದ ನಂತರ ಪೇಟಿಎಂ ಪಾವತಿಗಳ ಮೂಲಕ ಮಾಡಲಾಗುವ ಎಲ್ಲ ರೀತಿಯ ಕ್ಲೈಮ್‌ಗಳನ್ನು ಇಪಿಎಫ್​ಒ ನಿರ್ಬಂಧಿಸಿದೆ.

    ಇದನ್ನೂ ಓದಿ: ಏಪ್ರಿಲ್​ನಿಂದ ಫಾಸ್ಟ್​ ಟ್ಯಾಗ್ ಬಂದ್​..! ಕಾರಣ ಇದೇ ನೋಡಿ..

    ಫೆಬ್ರವರಿ 23 ರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನೊಂದಿಗೆ ಲಿಂಕ್ ಮಾಡಲಾದ ಇಪಿಎಫ್ ಖಾತೆಗಳಲ್ಲಿನ ಕ್ರೆಡಿಟ್ ಮತ್ತು ಠೇವಣಿ ವಹಿವಾಟುಗಳನ್ನು ಸ್ಥಗಿತಗೊಳಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ ಸುತ್ತೋಲೆ ಹೊರಡಿಸಿದೆ.

    ಪೇಟಿಎಂಗೆ ಮಾರ್ಚ್ 15 ರೊಳಗೆ ತನ್ನ ಎಲ್ಲಾ ವಹಿವಾಟು ಮತ್ತು ನೋಡಲ್ ಖಾತೆಗಳನ್ನು ಇತ್ಯರ್ಥಗೊಳಿಸುವಂತೆ ಆರ್​ಬಿಐ ನಿರ್ದೇಶಿಸಿದೆ. ಪೇಟಿಎಂ ಬ್ಯಾಂಕ್ ವಿರುದ್ಧ ಆರ್​ಬಿಐನ ಕ್ರಮದ ನಂತರ ಇಪಿಎಫ್​ಒ​​ನ ಸುತ್ತೋಲೆ ಬಂದಿದೆ.
    ಫೆಬ್ರವರಿ 23 ರ ನಂತರ ಆರ್​ಬಿಐ ನಿರ್ಬಂಧಗಳ ಪ್ರಕಾರ ಪೇಟಿಎಂ ಪಾವತಿಗಳ ಬ್ಯಾಂಕ್‌ನೊಂದಿಗೆ ಲಿಂಕ್ ಮಾಡಲಾದ ಇಪಿಎಫ್​ ಖಾತೆಗಳಿಗೆ ಠೇವಣಿ ಮತ್ತು ಕ್ರೆಡಿಟ್‌ಗಳನ್ನು ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸುವುದಾಗಿ ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಘೋಷಿಸಿದೆ.

    ಫೆಬ್ರವರಿ 8 ರಂದು ಇಪಿಎಫ್​ಒ ​​ತನ್ನ ಕ್ಷೇತ್ರ ಕಚೇರಿಗಳಿಗೆ ಕಳೂಹಿಸಿರುವ ಸುತ್ತೋಲೆಯಲ್ಲಿ ಪೇಟಿಎಂ ಖಾತೆಗಳಿಗೆ ಸಂಬಂಧಿಸಿದ ಕ್ಲೈಮ್‌ಗಳನ್ನು ಸ್ವೀಕರಿಸದಂತೆ ನಿರ್ದೇಶಿಸಿದೆ.

    ಕಳೆದ ವರ್ಷ ಪೇಟಿಎಂ ಪೇಮೆಂಟ್ ಬ್ಯಾಂಕ್ ಮತ್ತು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನ ಖಾತೆಗಳಲ್ಲಿ ಇಪಿಎಫ್ ಪಾವತಿ ಮಾಡಲು ಇಪಿಎಫ್‌ಒ ಅನುಮತಿ ನೀಡಿರುವುದನ್ನು ಗಮನಿಸಬಹುದು.

    ಆದಾಗ್ಯೂ, ಆರ್​ಬಿಐ 2024ರ ಜನವರಿ31ರಂದ ಆರ್​ಬಿಐ ನಿರ್ಬಂಧಗಳನ್ನು ವಿಧಿಸಿದ್ದರೂ ಫೆಬ್ರವರಿ 23 ರ ತನಕ ಗ್ರಾಹಕರ ಖಾತೆಗಳಲ್ಲಿ ಠೇವಣಿ, ಕ್ರೆಡಿಟ್ ವಹಿವಾಟು ನಡೆಸಲು ಅನುಮತಿಸಿರುವುದು ಗಮನಾರ್ಹ ಸಂಗತಿಯಾಗಿದೆ.

    ರೈಲಿನಡಿ ಸಿಲುಕಿದ ವ್ಯಕ್ತಿ ರಕ್ಷಿಸಲು ಕೋಚ್​ ಅನ್ನೇ ಪಕ್ಕಕ್ಕೆ ತಳ್ಳಿದ ಪ್ರಯಾಣಿಕರು! ವೀಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts