More

    ವಿದ್ಯಾ ಬಾಲನ್ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಹಣ ಕೇಳಿದ ಅಪರಿಚಿತ ವ್ಯಕ್ತಿ

    ಮುಂಬೈ: ಬಾಲಿವುಡ್ ನಟಿ ವಿದ್ಯಾ ಬಾಲನ್ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಅವರು ಆಗಾಗ ತಮಾಷೆಯ ರೀಲ್ಸ್​​​​​ ಮಾಡುತ್ತಾ ಅವುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈ ಮಧ್ಯೆ ನಟಿ ಸಮಸ್ಯೆಯೊಂದರಲ್ಲಿ ಸಿಲುಕಿದ್ದಾರೆ. ಹೌದು, ವಿದ್ಯಾ ಬಾಲನ್ ಹೆಸರಿನಲ್ಲಿ ನಕಲಿ ಇನ್​​​ಸ್ಟಾಗ್ರಾಂ ಖಾತೆಯನ್ನು ತೆರೆಯಲಾಗಿದ್ದು, ನಕಲಿ ಖಾತೆ ಸೃಷ್ಟಿಸಿದ ವ್ಯಕ್ತಿ ವಿದ್ಯಾಬಾಲನ್ ಹೆಸರಲ್ಲಿ ಜನರಿಂದ ಹಣ ಕೇಳುತ್ತಿದ್ದಾನೆ. ಮುಂಬೈ ಪೊಲೀಸರ ಬಳಿ ಎಫ್‌ಐಆರ್ ದಾಖಲಿಸುವ ವೇಳೆ ಸ್ವತಃ ನಟಿಯೇ ಈ ಆರೋಪ ಮಾಡಿದ್ದಾರೆ.

    ಎಫ್ಐಆರ್ ದಾಖಲಿಸಿದ ನಟಿ
    ಮೂಲಗಳ ಪ್ರಕಾರ, ವಿದ್ಯಾ ಬಾಲನ್ ಮುಂಬೈ ಪೊಲೀಸ್‌ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಿಸುವಾಗ, ಅಪರಿಚಿತ ವ್ಯಕ್ತಿಯೊಬ್ಬರು ತಮ್ಮ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ತೆರೆದು ಜನರಿಂದ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ವಿದ್ಯಾ ಬಾಲನ್ ಅವರಂತೆಯೇ ನಕಲಿ ಇನ್‌ಸ್ಟಾಗ್ರಾಮ್ ಐಡಿಯನ್ನು ಕ್ರಿಯೇಟ್​​​ ಮಾಡಿ, ಜಿಮೇಲ್ ಖಾತೆಯನ್ನು ಸಹ ಕ್ರಿಯೇಟ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ನಕಲಿ ಇನ್‌ಸ್ಟಾಗ್ರಾಮ್ ಐಡಿ ಮತ್ತು ಜಿಮೇಲ್ ಖಾತೆಯನ್ನು ರಚಿಸುವ ಮೂಲಕ, ಅಪರಿಚಿತ ವ್ಯಕ್ತಿ ಉದ್ಯೋಗದ ಭರವಸೆ ನೀಡಿ ಹಲವರಿಂದ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದರು. ಈ ವಿಷಯ ತಿಳಿದ ವಿದ್ಯಾ ಬಾಲನ್ ಅವರು ತಕ್ಷಣ ಇದನ್ನು ಅರಿತು ಮುಂಬೈ ಪೊಲೀಸರಿಗೆ ದೂರು ನೀಡಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

    ಮತ್ತೊಂದೆಡೆ ವಿದ್ಯಾ ಬಾಲನ್ ದೂರಿನ ಆಧಾರದ ಮೇಲೆ, ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ.

    ಸೆಲೆಬ್ರಿಟಿಯೊಬ್ಬರು ಇಂತಹ ವಿಚಾರಗಳಿಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಈ ಹಿಂದೆಯೂ ಅನೇಕ ಸೆಲೆಬ್ರಿಟಿಗಳು ಇದಕ್ಕೆ ಗುರಿಯಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಪುತ್ರಿ ಸಿತಾರಾ ಅವರ ಇನ್ ಸ್ಟಾಗ್ರಾಂ ನಕಲಿ ಖಾತೆ ಕ್ರಿಯೇಟ್ ಆಗಿತ್ತು. ಈ ಮಾಹಿತಿಯನ್ನು ಸ್ವತಃ ಮಹೇಶ್ ಬಾಬು ಅವರ ಪತ್ನಿ ಮತ್ತು ನಟಿ ನಮ್ರತಾ ಶಿರೋಡ್ಕರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. 

    BYJU’s Crisis: ಬೈಜು ರವೀಂದ್ರನ್​​​​ರನ್ನು ಕಂಪನಿಯಿಂದ ಹೊರಹಾಕಲು ತಯಾರಿ, ಶುಕ್ರವಾರ ಇಜಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts