More

    ಮುಕೇಶ್ ಅಂಬಾನಿಯವರ ರಿಲಯನ್ಸ್​​​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಈ ಉದ್ಯೋಗಿ ಯಾರು ಗೊತ್ತಾ?

    ನವದೆಹಲಿ: ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್​​ ಅಧ್ಯಕ್ಷ ಮತ್ತು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅವರ ಒಟ್ಟು ಸಂಪತ್ತು 8 ಲಕ್ಷದ 33 ಸಾವಿರದ 215 ಕೋಟಿಗೂ ಹೆಚ್ಚು. ರಿಲಯನ್ಸ್ ಇಂಡಸ್ಟ್ರೀನ್ ಭಾರತದ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ. ಮುಖೇಶ್ ಅವರು ತಮ್ಮ ಅಂಗಸಂಸ್ಥೆಗಳ ಮೂಲಕ ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಅವರ ಕುಟುಂಬ ಮತ್ತು ಕೆಲವು ನಿಕಟ ಸಹವರ್ತಿಗಳು ನಿರ್ವಹಿಸುತ್ತಾರೆ.

    ದೇಶದ ಅತಿ ಶ್ರೀಮಂತ ಮುಖೇಶ್ ಕೋಟ್ಯಂತರ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದೇವೆ. ಆದರೆ ಅಂಬಾನಿ ಕಂಪನಿಯಲ್ಲಿ ಒಬ್ಬರಿದ್ದಾರೆ, ಅವರ ಸಂಬಳ ಮುಖೇಶ್ ಅವರಿಗಿಂತ ಹೆಚ್ಚಾಗಿದೆ. ಹಾಗಾದರೆ ರಿಲಯನ್ಸ್ ಇಂಡಸ್ಟ್ರೀಸ್‌ನ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿ ಯಾರು? ಮತ್ತು ಈ ವ್ಯಕ್ತಿಯು ಎಷ್ಟು ಹಣವನ್ನು ಪಡೆಯುತ್ತಾರೆ? ನೋಡೋಣ….

    ಮುಕೇಶ್ ಅಂಬಾನಿಯವರ ರಿಲಯನ್ಸ್​​​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಈ ಉದ್ಯೋಗಿ ಯಾರು ಗೊತ್ತಾ?

    ಈ ವ್ಯಕ್ತಿ ಅಂಬಾನಿ ಕುಟುಂಬದ ಸದಸ್ಯರಲ್ಲ, ಆದರೆ ಅವರ ಸಂಬಳ ಅವರೆಲ್ಲರಿಗಿಂತ ಹೆಚ್ಚು. ಅವರ ಹೆಸರು ನಿಖಿಲ್ ಆರ್. ಮೆಸ್ವಾನಿ. ಇವರು ಮುಖೇಶ್ ಅಂಬಾನಿಯವರ ಆಪ್ತ ರಸಿಕ್ ಭಾಯ್ ಮೆಸ್ವಾನಿಯವರ ಮಗ. ಅವರನ್ನು ಮುಖೇಶ್ ಅವರ ಬಲಗೈ ಎಂದೂ ಕರೆಯುತ್ತಾರೆ.

    ಅಂದಹಾಗೆ ನಿಖಿಲ್ ರಿಲಯನ್ಸ್ ಇಂಡಸ್ಟ್ರೀಸ್​​ನ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿ. ನಿಖಿಲ್ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಅವರು 1986 ರಿಂದ ಮುಖೇಶ್ ಅಂಬಾನಿಯವರ ರಿಲಯನ್ಸ್ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದಾರೆ. ನಿಖಿಲ್ ರಿಲಯನ್ಸ್ ಸಂಸ್ಥಾಪಕರಲ್ಲಿ ಒಬ್ಬರು. ತಮ್ಮ ವೃತ್ತಿಜೀವನವನ್ನು ಪ್ರಾಜೆಕ್ಟ್ ಅಧಿಕಾರಿಯಾಗಿ ಪ್ರಾರಂಭಿಸಿದರು. ನಂತರ ಅವರು ಕಾರ್ಯನಿರ್ವಾಹಕ ನಿರ್ದೇಶಕರಾದರು.

    1986ರಲ್ಲಿ ನಿಖಿಲ್ ರಿಲಯನ್ಸ್‌ ಗೆ ಸೇರಿದರು. ಆದರೆ 2 ವರ್ಷಗಳ ನಂತರ ಅಂದರೆ ಜುಲೈ 1, 1988 ರಂದು ಅವರು ಕಂಪನಿಯ ಮಂಡಳಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕಂಪನಿಯ ರಿಫೈನರಿ ವ್ಯವಹಾರವನ್ನು ಹಲವು ವರ್ಷಗಳಿಂದ ನಿರ್ವಹಿಸುತ್ತಿದ್ದಾರೆ. ಮುಖೇಶ್ ಅಂಬಾನಿಗಿಂತಲೂ ಹೆಚ್ಚು ಸಂಭಾವನೆ ಪಡೆದಿದ್ದಾರೆ. ಅವರ ವಾರ್ಷಿಕ ಆದಾಯ 24 ಕೋಟಿಗೂ ಹೆಚ್ಚು. ಆದರೆ ಮುಖೇಶ್ ಅಂಬಾನಿ ಸಂಭಾವನೆ ಸುಮಾರು 14 ಕೋಟಿ ರೂ.

    ಆದರೆ, ಕರೊನಾ ನಂತರ ಮುಖೇಶ್ ಅಂಬಾನಿ ಒಂದು ರೂಪಾಯಿ ಸಂಬಳ ತೆಗೆದುಕೊಂಡಿಲ್ಲ. ವರದಿಗಳ ಪ್ರಕಾರ, ಮುಖೇಶ್ ಅವರ ಬಲಗೈ ಬಂಟ ಎಂದು ಕರೆಯಲ್ಪಡುವ ನಿಖಿಲ್ ಅವರನ್ನು 1988 ರಲ್ಲಿ ಕಂಪನಿಯ ಮಂಡಳಿಯ ನಿರ್ದೇಶಕರನ್ನಾಗಿ ಮಾಡಲಾಯಿತು. ನಂತರ ಅವರಿಗೆ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆ ನೀಡಲಾಯಿತು. ನಿಖಿಲ್ ಅವರ ಕಿರಿಯ ಸಹೋದರ ಹೀತಲ್ ಕೂಡ 1990 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಸೇರಿಕೊಂಡರು. ರಿಲಯನ್ಸ್ ಯಶಸ್ಸಿನ ಹಿಂದೆ ಈ ಇಬ್ಬರು ಸಹೋದರರ ಪಾತ್ರ ಬಹಳ ಮಹತ್ವದ್ದಾಗಿದೆ ಎನ್ನಲಾಗಿದೆ. 

    ವಿಮಾನದಲ್ಲಿ ಪೈಲಟ್‌ಗೆ ಕಪಾಳಮೋಕ್ಷ ಪ್ರಕರಣ: ‘ಸಾರಿ ಸರ್…’ ಕೈಗಳನ್ನು ಮಡಚಿ ಕ್ಷಮೆಯಾಚಿಸಿದ ಪ್ರಯಾಣಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts